ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು : 2 ಲೋಟ
ಉಪ್ಪು : ರುಚಿಗೆ ತಕ್ಕಷ್ಟು
ನೀರು :ಒಂದು ಲೋಟ
ಫುಲ್ಕಾ ಮಾಡುವ ವಿಧಾನ: ಗೋಧಿ ಹಿಟ್ಟು , ಉಪ್ಪು, ನೀರು ಇವುಗಳನ್ನು ಚೆನ್ನಾಗಿ ಕಲಸಿ. ಹತ್ತು ನಿಮಿಷ ಹಾಗೇ ಬಿಡಿ. ಆಮೇಲೆ ಗೋಧಿ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಚಪಾತಿ ಲಟ್ಟಿಸುವಂತೆ ಲಟ್ಟಿಸಿ.
ಕಾವಲಿಯನ್ನು ಬಿಸಿಮಾಡಿ, ಆ ಬಳಿಕ ಲಟ್ಟಿಸಿದ ಸಣ್ಣ ಚಪಾತಿಗಳನ್ನು ಕಾವಲಿಗೆ ಹಾಕಿ. ಸ್ವಲ್ಪ ಬೆಂದ ಕೂಡಲೇ, ಅವುಗಳನ್ನು ಚಿಮಟಿಯ ಸಹಾಯದಿಂದ ಕಾವಲಿಯಿಂದ ತೆಗೆದು ನೇರವಾಗಿ ಬೆಂಕಿ ಮೇಲೆ ಸುಡಬೇಕು. ಎರಡೂ ಒಲೆಗಳನ್ನು ಉರಿಸಿದರೆ ಒಳ್ಳೆಯದು. ಒಂದರಲ್ಲಿ ಕಾವಲಿಯಲ್ಲಿ ಬೇಯಿಸುವುದು, ಇನ್ನೊಂದರಲ್ಲಿ ಚಪಾತಿಯನ್ನು ನೇರವಾಗಿ ಸುಡುವುದು ಒಟ್ಟಿಗೆ ಮಾಡಬಹುದು. ತಯಾರಿಸುವುದು ಸುಲಭ, ಎಣ್ಣೆ ಬೇಕಾಗಿಲ್ಲ. ಫುಲ್ಕಾ ಜತೆಗೆ ನಿಮಗೆ ಇಷ್ಟವಾದ ಗೊಜ್ಜು, ಪುಳಿ, ಪಲ್ಯ ತಯಾರಾಗಲಿ. ಬಿಸಿಬಿಸಿ ತಿಂದರೆ ಒಳ್ಳೆಯದು. ಫುಲ್ಕಾ ಜತೆಗೆ ದಂಟಿನ ಸೊಪ್ಪಿನ ಪಲ್ಯ ಚೆನ್ನಾಗಿರತ್ತೆ.
ಇನ್ನೇಕೆ ತಡ, ಫುಲ್ಕಾ ಮಾಡಿ, ಹೇಗಾಯಿತು ಹೇಳಿ!!
ರ ಇತರೆ ಸುದ್ದಿ/ಲೇಖನಗಳನ್ನು ಓದಿ