ಮೂಕ ವೇದನೆಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ ಆಳು ರ೦ಗನನ್ನು ಕೂಗಿ ಕರೆದೆಬ್ಬಿಸಿ, ಕೊಟ್ಟಿಗೆಯಕಡೆ ನಡೆದಳು. ಆವೇಳೆಗಾಗಲೆ ತು೦ಗೆಗೆ ಪ್ರಸವವಾಗಿ, ಮುದ್ದಾದ ಕ೦ದು ಬಣ್ಣದ ಕರುವೊ೦ದನ್ನು ಹೊರ ಹಾಕಿ ಹೂ೦ಕರಿಸುತ್ತಿದ್ದಳು. ಕರುವನ್ನು
ಮೂಕ ವೇದನೆ (ಭಾಗ 2)(ಕಥೆ ಮುಂದುವರಿದಿದೆ...)ಗೌಡರು ಗಾಡಿಯ ನೊಗಕ್ಕೆ ಈ ಎರಡು ಎತ್ತುಗಳನ್ನು ಕಟ್ಟಿ ಗಾಡಿಯನ್ನು ಎಳೆಯುವಲ್ಲಿ ತರಬೇತಿ ಕೊಡಹತ್ತಿದರು. ಈ ತರಬೇತಿಯಲ್ಲಿ ಸಾಕಷ್ಟು ಛಡಿ ಏಟುಗಳನ್ನು ಬಸವ ಹಾಗೂ ಅವನ ಸ೦ಗಡಿಗ ತಿನ್ನಬೇಕಾಗಿ ಬ೦ದು, ಗಾಡಿಯ ನೊಗವನ್ನು ಹೆಗಲಿನಿ೦ದ ತೆಗೆದಾಗ ಕತ್ತಿನ ಮೇಲ್ಬಾಗದಲ್ಲಿ ಚರ್ಮವು ಜಡ್ಡು ಕಟ್ಟಿ ಅವರಿಬ್ಬರ ಕಣ್ಣಲ್ಲೂ ನೀರು, ಹಾಗು ಮೈಮೇಲಿನ ಬೆತ್ತದ ಛಡಿಯೇಟಿನ ಗುರುತು ಪ್ರಾಣಿ..
ಬಿಕ್ಕು -ಬಂಧ : ಸಣ್ಣ ಕತೆಅವಳ ಬದುಕಿನಲ್ಲಿ ಶಿರಾಡಿ ಘಾಟಿನಲ್ಲಿ ಕಾಣಸಿಗುವಂಥ ಅನೇಕ ತಿರುವುಗಳು ಬರುತ್ತಲೇ ಇದ್ದವು. ತಿರುವುಗಳನ್ನು ಹಾಗೂಹೀಗೂ ನೆಗೋಷಿಯೋಟ್ ಮಾಡಲು ಕಲಿಯುತ್ತಿರುವಾಗ ಒಂದು ದಿನ ಹೀಗಾಯಿತು..ಎಷ್ಟೆಂದರೂ ಗೌರಿ ಎಕ್ಸಿಟ್ ಗಳಲ್ಲಿ ಅಲೆಯುತ್ತಿರುವ ವಿದ್ಯಾರ್ಥಿ ತಾನೆ!* ವೈಶಾಲಿ ಹೆಗಡೆ, ಬೋಸ್ಟನ್, ಅಮೆರಿಕಗೌರೀ ಗೌರೀ ಏಳೇ ಶಾಲೆ ಗಂಟೆ ಹೊಡೀತು, ಎಷ್ಟ್ ಹೊತ್ತೆ ಅದು ಮಲಗೊದು', ಅಮ್ಮನ ಒದರಾಟಕ್ಕೆ ದಡಬಡಿಸಿ ಎದ್ದಳು..
ಯಾರನ್ನು ಮದುವೆಯಾಗಬೇಕು?ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದುಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ..
ಆರ್ ಯೂ ಎ ವರ್ಜಿನ್?ಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.* ವೆಂಕಟೇಶ್ ದೊಡ್ಮನೆ, ತಲಕಾಲಕೊಪ್ಪಒಳ್ಳೆಯ..
ತನುಗೂಚಿ-ಯೂಕೋಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ..
ಮುದ್ದಿನ ಮಗತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು...
ಸಣ್ಣ ಕಥೆ :ಪ್ರೊಫೆಸರ್ ಜಾರ್ಜ್ ಬಟ್ಲರ್ಪ್ರೀತಿ, ಪ್ರೇಮ, ಪ್ರಣಯ, ಮದುವೆ, ಮಕ್ಕಳು, ಆನಂತರದಲ್ಲಿ ವಿಚ್ಛೇದನ. ವಿಚ್ಛೇದನ ಪ್ರೀತಿ, ಪ್ರೇಮ, ಪ್ರಣಯದಿಂದಲ್ಲ. ಮೊದಲ ಹೆಂಡತಿಯಿಂದ ಅಥವಾ ಮೊದಲ ಗಂಡನಿಂದ. ಜನಜನಿತವಾಗುತ್ತಿರುವ ಜಾಗತಿಕ ಜೀವನ ಶೈಲಿಗಳನ್ನು ಕಥಾವಸ್ತುವಾಗಿ ಇಟ್ಟುಕೊಂಡು, ಆಸ್ಟ್ರೇಲಿಯಾ ನೆಲದಲ್ಲಿ ನಿಂತು ಬರೆದ ಕಥೆ.*ಸಿಡ್ನಿ ಶ್ರೀನಿವಾಸ್ಒಮ್ಮೆಗೇ ಚರ್ಚಿನ ಆರ್ಗನ್ ಸಂಗೀತ ಹೊರಹೊಮ್ಮಿತು . ವಿಖ್ಯಾತ ಬ್ರೈಡಲ್ ಮಾರ್ಚ್...
ರಜನಿ ಭಟ್ ಅವರ ಕಥೆ, ಋಣ'ಯಾರೂ ಏನನ್ನು ಕೊಡುವುದಿಲ್ಲ, ಏನನ್ನೂ ಪಡೆಯುವುದಿಲ್ಲ. ಹೆಚ್ಚೆಂದರೆ ನಮ್ಮ೦ಥವರು ಅವರಿಗಾಗಿ ಪ್ರಾರ್ಥನೆ ಮಾಡಬಹುದು ಸಾಧ್ಯವಾದರೆ ಧನಸಹಾಯ ಮಾಡಬಹುದು ಇದಕ್ಕಿ೦ತ ಹೆಚ್ಚು ಏನು ಮಾಡಲು ಸಾಧ್ಯ?' *ರಜನಿ.ಭಟ್ ಬಿಲ್ಲಾರಕೋಡಿ, ಅಬುದಾಬಿ ಮಧ್ಯಾಹ್ನದ ಹೋಟೆಲ್ ಊಟ ಮುಗಿಸಿ ಮ೦ಗಳೂರಿನಿ೦ದ ಎಕ್ಸ್ ಪ್ರೆಸ್ ಹತ್ತಿ ಕುಳಿತು "ಕಾಸರಗೋಡು" ಎ೦ದು ಟಿಕೇಟು ಪಡೆದದ್ದು ಒ೦ದು ಗೊತ್ತು ಅಲ್ಲಿಗೆ..
ವಿಭ್ರಾಂತಿ"ಸರಿ ಹೊರಡು, ಇನ್ನು ಹೊತ್ತಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ಪಾರ್ಟಿ ತಲುಪಬೇಕು. ಮಗುವನ್ನು ಬೇಗ ಕಾರ್‌ಸೀಟಿನಲ್ಲಿ ಕೂಡಿಸು. ಅಪೂರ್ವ, ನಡಿ ಪುಟ್ಟ ನೀನು ಕೂಡ ಕಾರಲ್ಲಿ ಕುಳಿತುಕೊ" ಎಂದು ವಿಕ್ರಂ ಒಂದೇ ಸಮನೆ ಆತುರಿಸುತ್ತಿದ್ದ. ರಾಧ ಮಕ್ಕಳ ಸಾಮಾನುಗಳನ್ನು ತೆಗೆದಿಡುವುದರಲ್ಲಿ ಮಗ್ನಳಾಗಿದ್ದಳು, ಏನಾದರೂ ಮರೆತುಬಿಟ್ಟರೆ ಸಣ್ಣ ಮಗುವಿಗೆ ಕಷ್ಟವಾಗುವುದೆಂದು! ಇದು ಅವರ ಗೆಳೆಯನ ಮಗನ ಹುಟ್ಟು ಹಬ್ಬಕ್ಕೆ..