clear
clear
clear
clear
ಮುಖಪುಟ » ಎನ್ಆರ್ಐ » ಅಲ್ಲಲ್ಲಿ ಏನೇನು? » ಪೂರ್ಣಪಾಠ
ಶಾರ್ಜಾದಲ್ಲಿ ಸಾರ್ವಭೌಮ ಕೃತಿ ಬಿಡುಗಡೆ

Gopinath Rao
ಗೋಪೀನಾಥ ರಾವ್ ರವರ ಸಣ್ಣಕತೆಗಳ ಸಂಗ್ರಹ "ಸಾರ್ವಭೌಮ" ಇದೇ ಬರುವ ಶುಕ್ರವಾರ, ನವೆಂಬರ್ ಹದಿಮೂರರರಂದು ಶಾರ್ಜಾ ಕರ್ನಾಟಕ ಸಂಘದ ಏಳನೇ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಬಿಡುಗಡೆಗೊಳ್ಳಲಿದೆ. ಆಜ್ಮಾನಿನ ಏಶಿಯನ್ ಪೆಲೇಸ್ ಹೊಟೆಲಿನ ಸಭಾಂಗಣದಲ್ಲಿ ದಿನವಿಡೀ ನಡೆಯುವ ವಿವಿಧ ಕಾರ್ಯಕ್ರಮಗಳ ಜೊತೆಗೆ ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಹದಿನೈದು ಸಣ್ಣಕತೆಗಳ ಈ ಸಂಕಲನವನ್ನು ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಸೂರ್ಯ ಪ್ರಕಾಶನದವರು ಪ್ರಕಟಿಸಿದ್ದು ಬೆಂಗಳೂರಿನ ಸಾಹಿತಿ, ಅಂಕಣಕಾರ ಹಾಗೂ ಸಣ್ಣಕತೆಗಳಿಗಾಗಿಯೇ ಮೀಸಲಾಗಿರುವ "ಒಂದಲ್ಲಾ ಒಂದೂರಿನಲ್ಲಿ" ಪತ್ರಿಕೆಯ ಸಂಪಾದಕ ಮಹಾಬಲಮೂರ್ತಿ ಕೊಡ್ಲೆಕೆರೆ ಮುನ್ನುಡಿ ಬರೆದಿದ್ದಾರೆ.

ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವ ಸಂಭ್ರಮಗಳ ಜೊತೆಗೇ ಈ ಕಾರ್ಯಕ್ರಮವನ್ನೂ ಇಟ್ಟುಕೊಳ್ಳುವ ಮೂಲಕ ಶಾರ್ಜಾ ಕರ್ನಾಟಕ ಸಂಘ ಕಲಾವಿದರಿಗೆ, ಲೇಖಕರಿಗೆ ತನ್ನ ಪ್ರೋತ್ಸಾಹವನ್ನು ಇನ್ನೊಮ್ಮೆ ಸಾಬೀತು ಪಡಿಸಿದೆ. ಸಂಘದ ಮಹಾಪೋಷಕ ಮಾಕ್ ಡೆನ್ನೆಸ್ ಮತ್ತು ಅಧ್ಯಕ್ಷ ನೋಯೆಲ್ ಡಿ ಆಲ್ಮೇಡಾ ಅವರ ನೇತೃತ್ವದಲ್ಲಿ ಅಪರಾಹ್ನ ಒಂದೂವರೆ ಘಂಟೆಗೆ ಪುಸ್ತಕ ಅನಾವರಣಗೊಳ್ಳಲಿದ್ದು ಮಹಾಬಲಮೂರ್ತಿ ಕೊಡ್ಲೆಕೆರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯು ಎ ಇಯ ಸಮಸ್ತ ಕನ್ನಡಿಗರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಲೇಖಕ ಗೋಪೀನಾಥ ರಾವ್ ವಿನಂತಿಸಿದ್ದಾರೆ.

ನವೆಂಬರ್ 10, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು