clear
clear
clear
clear
ಮುಖಪುಟ » ಎನ್ಆರ್ಐ » ಅಲ್ಲಲ್ಲಿ ಏನೇನು? » ಪೂರ್ಣಪಾಠ
ಮೇ 3ರಂದು ಅಮೆರಿಕ ಎಫ್ಎಂನಲ್ಲಿ ಕನ್ನಡದ ಕಲರವ

Madhu Krishnamurthy
ಕನ್ನಡದ ಕಂಪನ್ನು ಹೊರನಾಡುಗಳಲ್ಲಿ ಹರಡಲು ಕೈ ಹಚ್ಚಿರುವ ವಿಶ್ವ ಕನ್ನಡಿಗರೆಲ್ಲರು ಒಂದೆಡೆ ಸೇರಿ ಸಂವಾದ ಮಾಡುತ್ತ ಇತರ ಕನ್ನಡಿಗರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತೇಜಿಸುವ ಉದ್ದೇಶದಿಂದ ಅಮೇರಿಕದಲ್ಲಿ ಮೊದಲ ಬಾರಿಗೆ ಈ ಒಂದು ರೇಡಿಯೊ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂಟರ್ನೆಟ್ ಮೂಲಕ ಈ ಕಾರ್ಯಕ್ರಮವನ್ನು ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು.

ಕನ್ನಡ ಸಾಹಿತ್ಯ, ಕಲೆ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವವರೊಂದಿಗೆ ವಿಶೇಷ ಸಂದರ್ಶನ ನಡೆಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಕಲಾರಸಿಕ ಕನ್ನಡಿಗರೆಲ್ಲರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಕನ್ನಡ ಚಟುವಟಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಲಾಗುವುದು. ಕನ್ನಡ ಸಂಗೀತವನ್ನು ಸಹ ಈ ಕಾರ್ಯಕ್ರಮದಲ್ಲಿ ಕೇಳಬಹುದು. ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕಾಲ್ ಮಾಡಿ. 650-723-9010. ಈ ಸಂಖ್ಯೆಗೆ ಕಾರ್ಯಕ್ರಮದ ಸಮಯದಲ್ಲಿ ಮಾತ್ರ ಕರೆ ನೀಡಬೇಕೆಂದು ವಿನಂತಿ.

ಕಾರ್ಯಕ್ರಮದ ವಿವರಗಳು:

ದಿನಾಂಕ: 2009 ಮೇ 3 ಭಾನುವಾರ
ಸಮಯ: ಮದ್ಯಾಹ್ನ 3.00ರಿಂದ 6.00ರವರೆಗೆ. (ಕ್ಯಾಲಿಫೋರ್ನಿಯ ಸಮಯ)
ಭಾರತೀಯ ಕಾಲಮಾನ: ಭಾನುವಾರ ರಾತ್ರಿ/ಸೋಮವಾರ ಮುಂಜಾನೆ 3.30ರಿಂದ 6.30
ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ: http://kzsulive.stanford.edu/ (ಪುಟದ ಬಲಭಾಗದಲ್ಲಿ 128k or 56k ಸ್ಟಿರಿಯೋ ಎಂಪಿ3 ಆಯ್ಕೆ ಮಾಡಿಕೊಳ್ಳಿ. ಜಗತ್ತಿನ ಯಾವುದೇ ಮೂಲೆಯಿಂದಲೂ ಈ ಕಾರ್ಯಕ್ರಮವನ್ನು ಕೇಳಬಹುದು.)

ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.rasikararajya.com or http://www.itsdiff.com/Kannada.html

ಮೇ 1, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು