clear
clear
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ
ಕನ್ನಡ ಸುದ್ದಿಗಳನ್ನು ಓದಿರಿ.

ಬೆಂಕಿಗೆ ತುಪ್ಪ ಸುರುವಿದ ಯಡಿಯೂರಪ್ಪ!
ಬೆಂಗಳೂರು, ಅ. 28 : ರೆಡ್ಡಿ ಮತ್ತು ತಮ್ಮ ಮದ್ಯೆ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತುಪ್ಪ ಸುರುವಿದ್ದಾರೆ. ಬಳ್ಳಾರಿಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯಾಧಿಕಾರಿ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.ಈ ಮೂಲಕ ರೆಡ್ಡಿ ಮತ್ತು ಯಡಿಯೂರಪ್ಪ ನಡುವೆ ಭಾರಿ ಕಂದಕ ನಿರ್ಮಾಣ ಆಗಿರುವುದು ಸಾಬೀತಾಗಿದೆ. ಅಶಿಸ್ತಿನ ನೆಪದಲ್ಲಿ..


ರೆಡ್ಡಿ ವಿರುದ್ದ ಯಡಿಯೂರಪ್ಪ ರಣಕಹಳೆ
ಬೆಂಗಳೂರು, ಅ. 27 : ನೆರೆ ಸಂತ್ರಸ್ಥರ ಮನೆಗಳ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಖುದ್ದು ಭೇಟಿ ಮಾಡಿ ಅಹ್ವಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಬಂಡಾಯ ಎದ್ದಿರುವ ರೆಡ್ಡಿ ಸಹೋದರರಿಗೆ ಬಲವಾದ ಏಟು ನೀಡಲು ಸಿಎಂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ...


ಲವ್ ಜಿಹಾದ್ ಸಿಐಡಿ ತನಿಖೆಗೆ : ಆಚಾರ್ಯ
ಬೆಂಗಳೂರು, ಅ. 27 : ಲವ್ ಜಿಹಾದ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಗೃಹ ಸಚಿವ ವಿ ಎಸ್ ಆಚಾರ್ಯ ನೇತೃತ್ವದಲ್ಲಿ ಡಿಐಜಿ ಅಜಯಕುಮಾರ್ ಸಿಂಗ್, ಅಗ್ನಿಶಾಮಕ ಹಾಗೂ ತುರ್ತು ಸೇವೆ ವಿಭಾಗದ ಮುಖ್ಯಸ್ಥ ಜೀಜಾ ಹರಿಸಿಂಗ್, ಸಿಐಡಿ ಪೊಲೀಸ್ ಮಹಾನಿರ್ದೇಶಕ ಡಿವಿ ಗುರುಪ್ರಸಾದ್, ಎಡಿಜಿಪಿ ಕಾನೂನು ಸುವವ್ಯಸ್ಥೆ ಎ ಆರ್ ಇನ್ಫಂಟ್ ಮತ್ತು ಬೆಂಗಳೂರು..


ನೆರೆ ಪ್ರದೇಶಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ
ರಾಯಚೂರು, ಅ. 22 : ನೆರೆ ಹಾವಳಿಯಿಂದ 3000 ಟ್ರಾನ್ಸಫಾರ್ಮರುಗಳು ಹಾಳಾಗಿದ್ದು, ಈಗಾಗಲೆ ಶೇ 80 ರಷ್ಟನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ರಾಯಚೂರು ಶಾಖೋತ್ಪನ್ನ ವಿದ್ಯುತ್ ನಿಗಮದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 16000 ಕಂಬಗಳು ಹಾಳಾಗಿದ್ದು, ಹತ್ತು ಸಾವಿರ ಕಂಬಗಳನ್ನು..


ಪುರ ಯೋಜನೆ ಜಾರಿಗೆ ಕ್ಯಾಬಿನೆಟ್ ಒಪ್ಪಿಗೆ
ಬೆಂಗಳೂರು, ಅ. 22 : ರಾಜ್ಯದ 200 ಹೋಬಳಿಗಳಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪುರ ಯೋಜನೆ (Providing of Urban Amenities in Rural Areas) ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ..


ಪರಿಹಾರ : ರಾಜ್ಯದ ಮನವಿಗೆ ಕೇಂದ್ರ ಸಹಕಾರ
ನವದೆಹಲಿ, ಅ. 21 : ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಹಾಗೂ ಕರಾವಳಿಯ 15 ಜಿಲ್ಲೆಗಳು ತೀವ್ರ ಹಾನಿಗೊಳಗಾಗಿವೆ. ಭಾರಿ ಮಳೆ ಮತ್ತು ಪ್ರವಾಹದಿಂದ ಒಟ್ಟು 18 ಜಿಲ್ಲೆಗಳ 1.8 ಕೋಟಿ ಮಂದಿ ನೇರವಾಗಿ ಅಥವಾ ಅಪ್ರತ್ಯಕ್ಷವಾಗಿ ತೊಂದರೆಗೊಳಗಾಗಿದ್ದಾರೆ. ಇದು ರಾಜ್ಯದ ಪಾಲಿಗೆ ಈ ಶತಮಾನದ ಭೀಕರ ದುರಂತ. ಅಪಾರ ಸಾವು-ನೋವು ಮತ್ತು ಆಸ್ತಿ-ಪಾಸ್ತಿಗೆ..


ನೆರೆ: ಐಟಿ ಕಂಪನಿಗಳಿಂದ ಹಫ್ತಾ ವಸೂಲಿ
ಬೆಂಗಳೂರು, ಅ. 21 : ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಸ್ವಪ್ರೇರಣೆಯಿಂದ ದೇಣಿಗೆ ಕೊಡುವುದು ಒಂದು ವಿಚಾರ, ಬಲವಂತದಿಂದ ಹಣ ಕೀಳುವುದು ಇನ್ನೊಂದು ಪ್ರಮಾದ. ಅಭಿಮಾನದಿಂದ, ಕಳಕಳಿಯಿಂದ ಜನತೆ ಮತ್ತು ನಾನಾ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ನಿಧಿ ತುಂಬುವ, ತುಂಬುತ್ತಿರುವ ವರದಿಗಳು ಹರಿದು ಬರುತ್ತಿವೆ. ಆದರೆ, ಐಟಿ ಮತ್ತು ಐಟಿಯೇತರ ಕಂಪನಿಗಳಿಂದ ವ್ಯವಸ್ಥಿತವಾಗಿ ಹಣ..


ಧಾರವಾಡ ಕೊಂಡವಾಡ ಸ್ಥಳಾಂತರಕ್ಕೆ ಶಂಕುಸ್ಥಾಪನೆ
ಕೊಪ್ಪಳ, ಅ. 19 : ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಧಾರವಾಡ ಜಿಲ್ಲೆಯ ಕೊಂಗವಾಡ ಗ್ರಾಮವನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಗ್ರಾಮಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ವಿಧಾನಸಭಾ ಅಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಪಾಲ್ಗೊಂಡಿದ್ದರು. ಪುನರ್ವಸತಿ ಕಲ್ಪಿಸಲಾಗುವ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ಮನೆ ನಿರ್ಮಾಣ..


ಸರಕಾರಿ ನೌಕರರ ಡಿಎ ಸಂತ್ರಸ್ಥರಿಗೆ : ಸಿಎಂ
ಬೆಂಗಳೂರು, ಅ. 16 : ನೆರೆ ಸಂತ್ರಸ್ಥರ ಪರಿಹಾರ ಕಾರ್ಯಕ್ಕೆ ಸರಕಾರ ಆರ್ಥಿಕ ವೆಚ್ಚದ ಮೇಲೆ ಭಾರಿ ಕ್ರಮಗಳನ್ನು ಕೈಗೊಂಡಿದ್ದು, ಸರಕಾರಿ ನೌಕರರ ನಾಲ್ಕು ತಿಂಗಳಗಳ ತುಟ್ಟಿಭತ್ಯೆ ಸುಮಾರು 190 ಕೋಟಿ ರುಪಾಯಿಗಳನ್ನು ನೆರೆ ಸಂತ್ರಸ್ಥರ ಪರಿಹಾರಕ್ಕೆ ಉಪಯೋಗಿಸಲು ಸರಕಾರ ತೀರ್ಮಾನ ನಡೆಸಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂತ್ರಸ್ಥರ ನೆರವಿಗೆ..


ದೀಪಾವಳಿಗೆ ಹೆಚ್ಚುವರಿ ಬಸ್ ಸೌಲಭ್ಯ
ಬೆಂಗಳೂರು, ಅ. 16 : ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ಆಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಮುಖ ಧಾರ್ಮಿಕ ಕ್ಷೇತ್ರಗಳು, ಪ್ರಮುಖ ಪ್ರದೇಶಗಳು ಹಾಗೂ ಹೊರರಾಜ್ಯಗಳಿಗೆ ಸುಮಾರು 800 ಬಸ್ ಗಳ ಹೆಚ್ಚುವರಿ ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಈ ವಿಶೇಷ ಬಸ್ ಸಂಚಾರ ಗುರುವಾರದಿಂದಲೇ ಆರಂಭವಾಗಿದ್ದು, ಇದೇ 19ರವರೆಗೆ ಜಾರಿಯಲ್ಲಿರುತ್ತದೆ. ಧರ್ಮಸ್ಥಳ, ಕುಕ್ಕೆ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು