ಕನ್ನಡ ಸುದ್ದಿಗಳನ್ನು ಓದಿರಿ.
ಗಣಿಗಾರಿಕೆ : ಸಿಬಿಐ ತನಿಖೆಗೆ ಸಿಎಂ ನಕಾರಸುರಪುರ (ಗುಲ್ಬರ್ಗಾ), ನ. 20 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಅನಗತ್ಯ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಸುರಪುರ ತಾಲ್ಲೂಕಿನ ತಿಂಥಿಣಿ ಗ್ರಾಮದಲ್ಲಿ ಸಂತ್ರಸ್ತರ ಪುನರ್ವಸತಿ ಯೋಜನೆ ಆಸರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ. ಅನಗತ್ಯ ತನಿಖೆಗೆ ಸರಕಾರ ಮುಂದಾಗುವುದಿಲ್ಲ ಎಂದರು.ಸಂತ್ರಸ್ತರ ಪುನರ್ವಸತಿ...
ಉತ್ತರ ಕರ್ನಾಟಕದಲ್ಲಿ ಮನೆ ನಿರ್ಮಾಣ ಸೇವೆಬೆಂಗಳೂರು, ನ 20 : ಕರ್ನಾಟಕ ಸೇವಾ ಭಾರತಿ ಸಂಸ್ಥೆ ರಾಜ್ಯದ ಆರು ನೆರೆಪೀಡಿತ ಜಿಲ್ಲೆಗಳ ಹನ್ನೊಂದು ತಾಲ್ಲೂಕುಗಳ 15 ಗ್ರಾಮಗಳಲ್ಲಿ 2371 ಮನೆಗಳ ನಿರ್ಮಾಣ ಕಾರ್ಯವನ್ನು ಸಾರ್ವಜನಿಕರ ಧನಸಹಾಯದ ನೆರವಿನೊಂದಿಗೆ ಮಾಡಲಿದೆ ಎಂದು ಕಂದಾಯ ಕಾರ್ಯದರ್ಶಿಗಳಾದ ಪಾರ್ಶ್ವನಾಥ್ ಅವರು ಹೇಳಿದ್ದಾರೆ.ಮನೆ ನಿರ್ಮಾಣಕ್ಕೆ ಸರ್ಕಾರವು 30 x 50 ಅಳತೆಯ ನಿವೇಶನಗಳನ್ನು ನೀಡಿದ್ದು, 2290 ಚದರ..
14 ಜನರ ಬಿಜೆಪಿ ಸಮನ್ವಯ ಸಮಿತಿ ರಚನೆಬೆಂಗಳೂರು, ನ.17:ಬಿಜೆಪಿ ಸರ್ಕಾರದ ಆಡಳಿತ ಸುಸೂತ್ರವಾಗಿ ನಡೆಯಲು ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಹೈ ಕಮಾಂಡ್ ಆದೇಶ ಜಾರಿಗೊಂಡಿದೆ. ಇಂದು ಸಮನ್ವಯ ಸಮಿತಿ ರಚನೆಗೊಂಡಿದ್ದು ಅಂತಿಮವಾಗಿ 14 ಜನರ ಪಟ್ಟಿ ದೊರೆತಿದೆ. ಸಮನ್ವಯ ಸಮಿತಿಯ ಪಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರ ಅಂಕಿತ ಬಿದ್ದ ಮೇಲೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಯಿದೆ.ಪಟ್ಟಿಯಲ್ಲಿ ಆರೆಸ್ಸೆಸ್ ನ ಇಬ್ಬರು ಸೇರಿದಂತೆ ಕೇಂದ್ರದ ನಾಯಕ ಅನಂತಕುಮಾರ್..
ಅಕ್ರಮ ಸಕ್ರಮಕ್ಕೆ ಮತ್ತೆ ಆಪರೇಷನ್ಬೆಂಗಳೂರು, ನ.16: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂದಾಯ ನಿವೇಶನ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಬಹು ಮಹತ್ವದ ವಿಷಯದ ಕುರಿತು ಮುಂದಿನ ಸಚಿವಸಂಪುಟ ಸಭೆಯಲ್ಲಿ ತೀರ್ಮಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.ಅಕ್ರಮ ಸಕ್ರಮ ಯೋಜನೆ ಜಾರಿಯನ್ನು ಮುಂಬರುವ ಬಿಬಿಎಂಪಿ ಚುನಾವಣೆಯೊಳಗೆ ಮುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಜನತೆ ಒತ್ತಾಯಿಸುತ್ತಿದ್ದರೂ ಈವರೆಗೂ ಯಾವುದೇ..
ಗಡಿನಾಡಿನಲ್ಲಿ ಎಚ್ಡಿಕೆ ವಿರುದ್ಧ ಸಿಎಂ ಗರಂಬೆಳಗಾವಿ, ನ. 14: ಬಿಜೆಪಿ ಹಿರಿಯ ಸಚಿವರಿಂದ ಎಚ್ಡಿಕೆ ಭೇಟಿ ಎಂಬ ವರದಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಅದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಕುಮಾರಸ್ವಾಮಿ ಅವರ ಮಾತು ನಂಬಲರ್ಹವಲ್ಲ ಎಂದರು. ತಮ್ಮನ್ನು 'ಅಶಕ್ತ ಸಿಎಂ' ಎಂದು ಜರಿದಿರುವ ಸಿದ್ದರಾಮಯ್ಯ ಅವರ ಮಾತಿಗೆ ಬೇಸರಿಸದೆ , ಅದು ಅವರು ನೀಡಿದ ಸರ್ಟಿಫಿಕೇಟ್ ಎಂದು ಭಾವಿಸುವೆ ಅಭಿವೃದ್ಧಿ ಕಾರ್ಯಗಳ..
ನಗರದಿಂದ ಅಂಬಾರಿಯೇರಿ ಚೆನ್ನೈಗೆ ಪಯಣಿಸಿಬೆಂಗಳೂರು, ನ. 14:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಎಲ್ಲ ವರ್ಗದ ಜನರ ಅಗತ್ಯಗಳಿಗನುಸಾರವಾಗಿ ವಿವಿಧ ಶ್ರೇಣಿಯ ಬಸ್ ಸೇವೆ ಒದಗಿಸುತ್ತಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಅವರು ಹೇಳಿದ್ದಾರೆ.ಅವರು ಶುಕ್ರವಾರ ಅಂಬಾರಿ ಕರೋನಾ ಸ್ಲೀಪರ್ ಬಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನರ್ಮ್ ಯೋಜನೆಯಡಿ ಸಾರಿಗೆ ಸಂಸ್ಥೆಯು ನಿಗದಿತ ಅವಧಿಗಿಂತ 10 ತಿಂಗಳು..
ಮಿತವ್ಯಯ ವಿರೋಧಿ ಯಡ್ಡಿ ಅಂಡ್ ಗ್ಯಾಂಗ್ಬೆಂಗಳೂರು, ನ.13: ಕರ್ನಾಟಕ ರಾಜ್ಯ ಸಿಂಹಾಸನಾಧೀಶ್ವರ ಬಿಎಸ್ ಯಡಿಯೂರಪ್ಪ ಅವರು ಮತ್ತ್ತೆ ಗ್ರಹ ಗತಿಗಳ ಚಲನೆ ಬಗ್ಗೆ ಜ್ಯೋತಿಷಿಗಳಲ್ಲಿ ವಿಚಾರಿಸಿ, ಪರಿಹಾರ ಕಂಡು ಕೊಂಡಿದ್ದಾರೆ. ಕುಕ್ಕೆ, ವೈಷ್ಣೋದೇವಿ, ಚಾಮುಂಡಿ ಬೆಟ್ಟ ಯಾತ್ರೆ, ಯಾಗ, ಹವನ ಆದನಂತರ ಈಗ ವಾಸ್ತು ದೋಷ ಸರಿಪಡಿಸಲು ಮುಂದಾಗಿದ್ದಾರೆ.ತಮ್ಮ ನಿವಾಸದ ರಿಪೇರಿಗೆ ಸುಣ್ಣ ಬಣ್ಣ ಮಾಡೋದಕ್ಕೆ, ದಿಕ್ಕುಗಳಿಗೆ ದಿಗ್ಬಂಧನ ಹಾಕಿಸಲು ಯಡಿಯೂರಪ್ಪನವರು ಕಮ್ಮಿಯಂದರೂ..
ಸ್ಟಾಂಪ್ ಪೇಪರ್ ಖರೀದಿ ಈಗ ಸುಲಭಬೆಂಗಳೂರು, ನ. 12 : ಸ್ಟಾಂಪ್ ಪೇಪರ್ ಗಾಗಿ ಗಂಟೆಗಟ್ಟಳೆ, ದಿನಗಟ್ಟಲೆ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತು ಸುಸ್ತಾಗಿ ಸಾಕಪ್ಪ ಸಾಕು ಈ ಸ್ಟಾಂಪ್ ಪೇಪರ್ ಎಂದು ಜನರ ನಿತ್ಯ ಪರಿತಪಿಸುವುದನ್ನು ತಪ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ನಗರದ ಸುಮಾರು 16 ಕಡೆ ಸೇರಿದಂತೆ ರಾಜ್ಯಾದ್ಯಂತ 25 ಕೇಂದ್ರಗಳಲ್ಲಿ ಸ್ಟಾಂಪ್ ಪೇಪರ್..
ಆಟೋ ಹಸಿರು ಬಣ್ಣ ಆದೇಶ ರದ್ದು, ಅಶೋಕ್ಬೆಂಗಳೂರು, ನ. 12 : ಆಟೋಗಳಿಗೆ ಹಸಿರು ಬಣ್ಣ ಬಳಿಯುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಸಾರಿಗೆ ಇಲಾಖೆ ರದ್ದುಗೊಳಿಸಿದೆ. ಆಟೋ ಮಾಲೀಕರಿಗೆ ಹೊರೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಆದರೆ, ಡಿಜಿಟಲ್ ಮೀಟರ್‌ಗಳ ಅಳವಡಿಕೆ ಕಡ್ಡಾಯದ ವಿಷಯದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಬುಧವಾರ (ನ.11)..
ಡಿ.10 ರಿಂದ ಅಧಿವೇಶನ : ಆಚಾರ್ಯಬೆಂಗಳೂರು, ನ. 11 : ಡಿಸೆಂಬರ್ 10 ರಿಂದ 10 ದಿನಗಳ ಕಾಲ ಅಧಿವೇಶನ ನಡೆಸಲಾಗುವುದು. ಜೊತೆಗೆ 2006 ರ ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ನೂತನ ಪಿಂಚಣಿ ಸ್ಕೀಮ್ ನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು. ಸಂಪುಟ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಸಭೆ ವಿವರವನ್ನು ನೀಡಿದ ಅವರು,..