ಕನ್ನಡ ಸುದ್ದಿಗಳನ್ನು ಓದಿರಿ.
ವರ್ಲ್ಡ್ ನಂ1 ಬಾಕ್ಸರ್ ಆದ ವಿಜೇಂದರ್ ಸಿಂಗ್ನವದೆಹಲಿ, ಸೆ. 29 : ಒಲಿಂಪಿಕ್ಸ್ ಕ್ರಿಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ತಂದು ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ವಿಜೇಂದರ್ ಸಿಂಗ್ ಇದೀಗ ಮತ್ತೊಂದು ಸಾಧನೆ ಮಾಡಿದ್ದು. 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಉಜ್ಬೇಕಿಸ್ತಾನ್ ದ ಅಬ್ಬೊಸ್ ಅಟೋವ್ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ ಒನ್ ಬಾಕ್ಸರ್ ಎಂಬ ಕಿರೀಟ ಧರಿಸಿದ್ದಾರೆ...
ಶಿವಮೊಗ್ಗ : ಹ್ಯಾಂಡ್ ಬಾಲ್ ಆಟಗಾರರ ಆಯ್ಕೆ ಶಿಬಿರಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ..
ಕೆಎಸ್ ಸಿಎ ತೊರೆದ ಸೈಯದ್ ಕಿರ್ಮಾನಿ, ಭಟ್ಬೆಂಗಳೂರು, ಸೆ. 29: ಕರ್ನಾಟಕ ಕ್ರಿಕೆಟ್ ಮಂಡಳಿಯ ಒಳಜಗಳ ಬೀದಿಗೆ ಬಂದಿದೆ. ಆಯ್ಕೆದಾರರ ಮಂಡಳಿಯ ಪ್ರಮುಖ ಸದಸ್ಯರುಗಳು ರಾಜಿನಾಮೆ ನೀಡಿ, ಒಡೆಯರ್ ಆಳ್ವಿಕೆಗೆ ಧಿಕ್ಕಾರ ಕೂಗಿದ್ದಾರೆ. ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ರಘುರಾಂ ಭಟ್ ಮುಂತಾದವರು ತಮ್ಮ ಸ್ಥಾನವನ್ನು ತೊರೆದಿದ್ದಾರೆ.ಅಂತಾರಾಜ್ಯ ಟಿ20 ಪಂದ್ಯ, ವಿಶಾಖಪಟ್ಟಣದಲ್ಲಿ ನಡೆಯುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಮೆಂಟ್ ಗೆ ಆಯ್ಕೆ ಮಾಡಿದ..
ಚಾಂಪಿಯನ್ಸ್ ಟ್ರೋಫಿ : ಭಾರತಕ್ಕೆ ಒಂದಂಕಸೆಂಚೂರಿಯನ್, ಸೆ. 29 : ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೆ ಸೋಮವಾರ (ಸೆ 28) ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ರದ್ದುಗೊಳಿಸಲಾಯಿತು. ಇದರಿಂದ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ..
ಚಾಂಪಿಯನ್ಸ್ ಟ್ರೋಫಿ; ಪಾಕ್ ವಿರುದ್ಧ ಭಾರತಕ್ಕೆ ಸೋಲುಸೆಂಚೂರಿಯನ್, ಸೆ.27: ಶೋಯಬ್ ಮಲಿಕ್ ಅವರ ಆಕರ್ಷಕ ಶತಕ (128) ಮತ್ತು ಮೊಹಮ್ಮದ್ ಯೂಸುಫ್ ಗಳಿಸಿದ 87 ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧ 54 ರನ್‌ಗಳ ಗೆಲುವು ಪಡೆಯಿತು. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ ಸ್ಥಾನವನ್ನು ಹೆಚ್ಚುಕಮ್ಮಿ ಭದ್ರಪಡಿಸಿಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ..
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕ್ ಹಣಾಹಣಿಸೆಂಚುರಿಯನ್, ಸೆ. 26 : ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯಾವಳಿಯ ಮೊದಲ ಪಂದ್ಯವಾಡುತ್ತಿರುವ ಭಾರತ ಶನಿವಾರ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 6 ಗಂಟೆಗೆ ನಡೆಯುತ್ತಿರುವ ಪಂದ್ಯ ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಪಂದ್ಯವಾಗಲಿದೆ.ವಿಶ್ವಕಪ್ ಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋಲು ಕಂಡಿರದೇ ಇರುವುದು ಪಾಕಿಸ್ತಾನ..
ಚಾಂಪಿಯನ್ಸ್ ಟ್ರೋಫಿಯಿಂದ ಯುವಿ ಔಟ್ಜೋಹಾನ್ಸ್ ಬರ್ಗ್, ಸೆ. 24 : ಅಭ್ಯಾಸದ ವೇಳೆ ಬಲಗೈಗೆ ಗಾಯ ಮಾಡಿಕೊಂಡಿರುವ ಆಲ್ ರೌಂಡರ್ ಯುವರಾಜ್ ಸಿಂಗ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದು, ವೈದ್ಯರು ಆರು ವಾರ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಗೌತಮ್ ಗಂಭೀರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.ಯುವರಾಜ್ ಅನುಪಸ್ಥಿತಿಯಿಂದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಒತ್ತಡ ಬೀಳಲಿದೆ. ಯುವರಾಜ್ ಸ್ಥಾನಕ್ಕೆ ವಿರಾಟ್ ಕೊಹ್ಲಿಗೆ..
ಬೆಂಗಳೂರು ಪ್ರಾವಿಡೆಂಟ್ ಗೆ ಕೆಪಿಎಲ್ ಕಪ್ಬೆಂಗಳೂರು, ಸೆ. 24: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಸೆ.23) ಹೊನಲು ಬೆಳಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಗ್ರಾಮಾಂತರ ಪ್ರಾವಿಡೆಂಟ್ ತಂಡ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಚೊಚ್ಚಲ ಮಂತ್ರಿ ಕೆಪಿಎಲ್ ಟಿ 20 ಟ್ರೋಫಿಯ ಮೇಲೆ ತನ್ನ ಮೊಹರು ಒತ್ತಿತು.ಅಂತರಾಷ್ಟ್ರೀಯ ಪಂದ್ಯಗಳನ್ನು ನಾಚಿಸುವಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನಡುವೆ ನಡೆದ ಪಂದ್ಯದಲ್ಲಿ..
ಕೆಪಿಎಲ್ ನಲ್ಲಿ ಮುಗ್ಗರಿಸಿದ ಫೇವರಿಟ್ ಉತ್ತಪ್ಪ ಪಡೆಬೆಂಗಳೂರು, ಸೆ.23: ಕೆಪಿಎಲ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಬೆಂಗಳೂರು ಬ್ರಿಗೇಡಿಯರ್ಸ್ ತಂಡವನ್ನು ಮತ್ತು ಬೆಂಗಳೂರು ಪ್ರಾವಿಡೆಂಟ್ ತಂಡ ಬಿಜಾಪುರ ಬುಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ, ಪ್ಯಾಂಥರ್ಸ್ ಒಡ್ಡಿದ 160 ರನ್‌ಗಳ ಸವಾಲಿಗೆ ಬ್ರಿಗೇಡಿಯರ್ಸ್ 144 ರನ್‌ಗಳಿಗೆ..
ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ಸೆಂಚೂರಿಯನ್, ಸೆ 22: ಎಂಟು ದೇಶಗಳು ಭಾಗವಹಿಸುವ 14 ದಿನಗಳ ‘ಮಿನಿ ವಿಶ್ವಕಪ್’ ಎನಿಸಿಕೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮಂಗಳವಾರ (ಸೆ 22) ಇಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 26ರಂದು ಪಾಕಿಸ್ತಾನದ ಎದುರು, ಸೆ.28ರಂದು ಆಸ್ಟ್ರೇಲಿಯಾದ ಎದುರು..