clear
clear
ಮುಖಪುಟ » ಸುದ್ದಿಜಾಲ » ಕ್ರೀಡಾಲೋಕ
ಕನ್ನಡ ಸುದ್ದಿಗಳನ್ನು ಓದಿರಿ.

ಬಜ್ಜಿಯೇ ಸಿಮಂಡ್ಸರನ್ನು ಕುಡುಕನನ್ನಾಗಿ ಮಾಡಿದ್ದಂತೆ!
ಮೆಲ್ಬೋರ್ನ್, ಜು. 1 : ನನಗೆ ಕುಡಿತದ ಚಟ ಹಿಡಿಸಿದ್ದೇ ಭಾರತೀಯ ಕ್ರಿಕೆಟ್ ಬೌಲರ್ ಹರಭಜನ್ ಸಿಂಗ್ ಎಂದು ಆಸ್ಟ್ರೇಲಿಯಾದ ವಿವಾದಾತ್ಮಕ ಆಲ್ ರೌಂಡರ್ ಆಂಡ್ಯೂ ಸಿಮಂಡ್ಸ್ ಹೇಳಿದ್ದಾರೆ.ಇದಕ್ಕೆ ದನಿಗೂಡಿಸಿರುವ ಸಿಮಂಡ್ಸ್ ಪ್ರೇಯಸಿ ಕ್ಯಾಟಿ ಜಾನ್ಸನ್, ಜನರ ಟೀಕೆಗಳಿಂದ ಆಂಡ್ಯೂ ಬಲುಬೇಗನೆ ಘಾಸಿಗೊಳ್ಳುತ್ತಾರೆ, ವಿಪರೀತ ಸಿಟ್ಟಾಗಿ ಕುಡಿತಕ್ಕೆ ಕುಳಿತುಕೊಳ್ಳುತ್ತಾರೆ, ಸಿಕ್ಕಾಪಟ್ಟೆ ಕುಡಿದು ಮನಬಂದಂತೆ ಎಗರಾಡುತ್ತಾರೆ ಎಂಬ ಸಂಗತಿಯನ್ನು..


ಚಾಪೆಲ್ ಗೆ ಕ್ರಿಕೆಟ್ ಬಗ್ಗೆ ತಿಳಿವಳಿಕೆಯಿಲ್ಲ : ಸಚಿನ್
ನವದೆಹಲಿ, ಜೂ. 30 : "ಕೆಲವರು ಕೇವಲ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಸುಮ್ಮನೆ ಆರೋಪ ಹೊರಿಸುತ್ತಿರುತ್ತಾರೆ. ಇಯಾನ್ ಚಾಪೆಲ್ ಗೆ ಕ್ರಿಕೆಟ್ ಬಗ್ಗೆ ಏನೂ ತಿಳಿವಳಿಕೆಯಿಲ್ಲ."ಹೀಗೆಂದು ಗುಡುಗಿದವರು ಕ್ರಿಕೆಟ್ ಮೈದಾನದ ಮೇಲೆ ಮತ್ತು ಮೈದಾನದಾಚೆಗೆ ಸಂಯಮವನ್ನೆಂದೂ ಮೀರದ ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ತಮ್ಮ ಮೇಲಾಗುತ್ತಿರುವ ಸತತ ಆರೋಪಗಳಿಂದ ಬೇಸತ್ತಿರುವ ಸಚಿನ್ ಪ್ರಥಮ ಬಾರಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ..


ಶಿವಾಂಗಿ ಬೌಲ್ ಗೆ ಇರ್ಫಾನ್ ಪಠಾಣ್ ಔಟ್
ವಡೋದರಾ, ಜೂ. 30 : ಭಾರತ ಕ್ರಿಕೆಟ್ ತಂಡದ ವೇಗಿ ವಡೋದರಾ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಇರ್ಫಾನ್ ಪಠಾಣ್ ಅವರ ನಿಖಾ ಖಾಯಂ ಆಗಿದೆ. ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಯಭಾರಿಯ ಮಗಳು ಶಿವಾಂಗಿ ದೇವ್ ಎನ್ನುವಾಕೆ ಪಠಾಣ್ ಕೈಹಿಡಿಯುವ ಅದೃಷ್ಟವಂತೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವೇಗಿ ಇರ್ಫಾನ್ ಪಠಾಣ್, ನಾವಿಬ್ಬರು ಕಳೆದ ಮೂರು ವರ್ಷಗಳಿಂದ..


ಲಂಕಾ ತ್ರಿಕೋನ ಸರಣಿಗೆ ಭಾರತ, ನ್ಯೂಜಿಲೆಂಡ್
ನವದೆಹಲಿ, ಜೂ.28: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಭಾರತ ಅಲ್ಲದೇ ಆತಿಥೇಯ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಈ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಮೂರು ತಂಡಗಳಾಗಿವೆ ಎಂದು ಬಿಸಿಸಿಐ ಪ್ರಕಟಿಸಿದೆ.ಬಿಸಿಸಿಐ ಶನಿವಾರದಂದು ಈ ವಿಷಯ ಪ್ರಕಟಿಸಿದ್ದು ಶೀಘ್ರದಲ್ಲಿಯೇ ಶ್ರೀಲಂಕಾ ಮಂಡಳಿ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಪಡಿಸಲಿದೆ ಎಂದು..

ಯುವರಾಜ್ ಸಿಂಗ್ ಅಬ್ಬರ : ಭಾರತಕ್ಕೆ ಜಯ
ಕಿಂಗ್ಸ್ ಟನ್, ಜೂ. 27 : ಸಿಕ್ಸರ್ ಹಾಗೂ ಬೌಂಡರಿಗಳ ಮಳೆಗರೆದ ಉಪನಾಯಕ ಯುವರಾಜ್ ಸಿಂಗ್ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಚ್ ಇಂಡೀಸ್ ವಿರುದ್ಧ 20 ರನ್ ಗಳ ಜಯಗಳಿಸಿತು. ಸಬೀನಾ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ..


ಮಹೇಂದ್ರ ಸಿಂಗ್ ಧೋನಿ ಸಂಬಳ ವಿಳಂಬ!
ನವದೆಹಲಿ, ಜೂ. 24 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶ್ರೀಶಾಂತ್, ಆರ್ ಪಿ ಸಿಂಗ್ ಮುಂತಾದ ಕ್ರಿಕೆಟ್ ಆಟಗಾರರು ಜೂನ್ ತಿಂಗಳ ಸಂಬಳ ಪಡೆಯಲು ಇನ್ನೊಂದು ತಿಂಗಳು ಕಾಯಬೇಕು!ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ..


ಮೋಹನ್ ಲಾಲ್ ನೇತೃತ್ವದ ಕೇರಳ ಐಪಿಲ್ ತಂಡ
ತಿರುವನಂತಪುರಂ, ಜೂ. 24 : ಬಾಲಿವುಡ್ ನಟ ಶಾರೂಕ್ ಖಾನ್, ಪ್ರೀತಿ ಜಿಂಟಾ ಮತ್ತು ಶಿಲ್ಪಾ ಶೆಟ್ಟಿ ಐಎಲ್ ಪಿ ಮಾಲೀಕಾಗಿರುವುದು ಹಳೆಯ ಸುದ್ದಿಯಾದರೆ, ಇದೀಗ ಈ ಪಟ್ಟಿಗೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಒಂದಾಗಿ ಹೊಸ ಐಪಿಎಲ್ ತಂಡ ಕಟ್ಟಲು ಮುಂದಾಗಿದ್ದಾರೆ. ಚಿಕ್ಕಂದಿನಿಂದಲೂ ಕ್ರಿಕೆಟ್ ಅಭಿಮಾನಿಯಾಗಿರುವ ಮೋಹನ್ ಲಾಲ್..


ಸೈನಾಗೆ ಶುಭಾಶಯ ಹೇಳಿದ ಪ್ರಧಾನಿ
ನವದೆಹಲಿ, ಜೂ. 23 : ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಸೂಪರ್ ಸೀರಿಸ್ ಬ್ಯಾಡ್ಮಿಂಡನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದಿರುವ ಸೈನಾ ನೆಹ್ವಾಲ್ ಅವರಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಭಾಶಯ ಕೋರಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸೈನಾ ಉತ್ತಮ ಸಾಧನೆ ಮಾಡಿದ್ದು, ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೈನಾ ಭಾರತೀಯ ಆಟಗಾರರಿಗೆ ಮಾದರಿಯಾಗಿದ್ದಾರೆ. ಅವರ..

ಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ
ಲಾರ್ಡ್ಸ್, ಜೂ. 22 : ಪಾಕಿಸ್ತಾನಕ್ಕೆ 2009ರ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟ ಪಾಕಿಸ್ತಾನ ಕ್ರಿಕೆಟ್ ತಂಡದ ತಂಡದ ನಾಯಕ ಯೂನಿಸ್ ಖಾನ್ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುವ ಕ್ರಿಕೆಟ್ ಜಗತ್ತಗೆ ಅಚ್ಚರಿ ಮೂಡಿಸಿದ್ದಾರೆ. ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪಂದ್ಯದಲ್ಲಿ ಶ್ರೀಲಂಕ ತಂಡವನ್ನು ಅತ್ಯಂತ ಸಮರ್ಕಕವಾಗಿ ಸೋಲಿಸುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಟ್ವೆಂಟಿ -20 ವಿಶ್ವಕಪ್..


ಇಂಡೋನೇಷಿಯಾ ಸೂಪರ್ ಸಿರೀಸ್ ಗೆದ್ದ ಸೈನಾ
ಜಕಾರ್ತ, ಜೂ. 22 : ಭಾರತದ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದು ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೈನಾ ಅವರು 12-21, 21-18, 21-8 ರಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ..


  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು