clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ
ಕನ್ನಡ ಸುದ್ದಿಗಳನ್ನು ಓದಿರಿ.

ರೆಡ್ಡಿಗಳನ್ನು ವಿಲನ್ ಗಳಂತೆ ಬಿಂಬಿಸುತ್ತಿರುವುದೇಕೆ?
ಹುಬ್ಬಳ್ಳಿ, ನ. 20 : ಸರಕಾರ ರಚನೆ ಮಾಡುವಾಗ ರೆಡ್ಡಿ ಸಹೋದರರನ್ನು ಹೀರೊಗಳಂತೆ ಮೆರೆಸಿ ಇದೀಗ ಖಳನಾಯಕರಂತೆ ಬಿಂಬಿಸುತ್ತಿರುವ ಬೆಳವಣಿಗೆಗಳ ಬಗ್ಗೆ ನೂತನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ...


ವೈದ್ಯರು ಯಮನ ಏಜೆಂಟರು: ರಾಮಚಂದ್ರ ಗೌಡ
ಬೆಂಗಳೂರು, ನ. 20 : ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿರುವ ವೈದ್ಯರು ಸೇವೆಯ ಬದಲು ವ್ಯಾಪಾರದ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯರು ಯಮನ ಏಜೆಂಟರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಟೀಕಿಸಿದ್ದಾರೆ.ಹೀಲಿಂಗ್ ತಜ್ಞರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಗೌಡ, ಸಾಂಪ್ರದಾಯಿಕ ವೈದ್ಯರ ಸಮಸ್ಯೆಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು..


ಮೆಜೆಸ್ಟಿಕ್ ಬಸ್ ನಿಲ್ದಾಣ ಬಂದ್; ಅಶೋಕ್
ಬೆಂಗಳೂರು, ನ. 20 : ಏಷ್ಯಾದಲ್ಲೇ ಸಮೂಹ ಸಾರಿಗೆಯ ಅತಿ ದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಂಪೇಗೌಡ ಬಸ್ ನಿಲ್ದಾಣವನ್ನು ನವೆಂಬರ್ ಅಂತ್ಯದೊಳಗೆ ಮುಚ್ಚಲು ಸರಕಾರ ನಿರ್ಧರಿಸಿದೆ. ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಬಸ್ ಗಳನ್ನೂ ನಗರದ ನಾಲ್ಕು ದಿಕ್ಕಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೆಟ್ರೋ..


ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ, ಭಾರದ್ವಾಜ್
ಬೆಂಗಳೂರು, ನ. 20 : ಉತ್ತರ ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗುರುವಾರ ಇಲ್ಲಿ ಏರ್ಪಡಿಸಿದ್ದ ಕೃಷಿಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತ್ರಸ್ತ ಜನ ನನ್ನ ಬಳಿ ಬಂದು, ನಮಗೆ ಪರಿಹಾರ ಸಿಕ್ಕಿಲ್ಲ ಎಂದು..


ಎಂಎಲ್ಸಿ ಚುನಾವಣೆಗೆ ಬಿಜೆಪಿ ರಣತಂತ್ರ
ಬೆಂಗಳೂರು, ನ. 19 : ಕಳೆದ ಒಂದು ತಿಂಗಳಿನಿಂದ ಆಂತರಿಕ ಬಂಡಾಯದಿಂದ ಬೆಂದು ಹೋಗಿದ್ದ ರಾಜ್ಯ ಬಿಜೆಪಿಯಲ್ಲಿ ಚೇತರಿಕೆ ಲಕ್ಷಣಗಳು ಕಂಡು ಬಂದಿದ್ದು, ಇದೀಗ ಮುಂಬರುವ ವಿಧಾನ ಪರಿಷತ್ ಚುನಾವಣೆಗಳತ್ತ ಕಣ್ಣು ಹಾಯಿಸಿದೆ. ಡಿಸೆಂಬರ್ 18 ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು..


ಸಿಎಂ, ರೆಡ್ಡಿಗಳಿಗೆ ಸುಷ್ಮಾ ಕಿವಿಮಾತು
ಬೆಂಗಳೂರು, ನ. 19 : ರೆಡ್ಡಿ ಬ್ರದರ್ಸ್ ಜೊತೆಗಿನ ನನ್ನ ಬಾಂಧವ್ಯ ಮತ್ತು ಋಣಾನುಬಂಧ ಯಾವ ರೀತಿಯದ್ದು ಅಂದರೆ ಅವರು ನನ್ನ ಮಕ್ಕಳು. ನಾನು ಅವರ ಕುಟುಂಬದ ಹಿರಿಯಳು. ರಾಜ್ಯ ಸರಕಾರ ರೆಡ್ಡಿ ಬ್ರದರ್ಸ್ ಗಳಿಂದಾಗಿ ಉಳಿದುಕೊಂಡಿದೆ. ಅವರು ಸರಕಾರ ಉಳಿಸುತ್ತಾರೆ ಮತ್ತು ಪಕ್ಷದ ವರ್ಚಸ್ಸು ಬೆಳೆಸುತ್ತಾರೆಯೇ ಹೊರತು ಉರುಳಿಸುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ..


ಕನ್ನಡದಲ್ಲಿ ರೈಲ್ವೆ ಪರೀಕ್ಷೆ : ಮುನಿಯಪ್ಪ
ಬೆಂಗಳೂರು, ನ. 19 : ಕನ್ನಡಪರ ಸಂಘಟನೆಗಳ ಸತತ ಪ್ರಯತ್ನ ಹಾಗೂ ಕನ್ನಡಿಗರ ಬಹುದಿನದ ಕನಸನ್ನು ಕೇಂದ್ರ ಸರಕಾರ ಕೊನೆಗೂ ಈಡೇರಿಸಿದೆ. ಕಬ್ಬಿಣದ ಕಡಲೆಯಾಗಿದ್ದ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡದಲ್ಲೇ ಬರೆಯಬಹುದಾಗಿದೆ. ಕನ್ನಡಪರ ಹೋರಾಟಗಾರರ ಫಲವನ್ನು ಬರೀ ಕನ್ನಡಿಗರಷ್ಟೆ ಅಲ್ಲ ಆಯಾ ಭಾಷೆಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿದ್ದಾರೆ.ಇನ್ನೂ ಮುಂದೆ ರೈಲ್ವೆ ಇಲಾಖೆಯಲ್ಲಿ..


ಸಹಕಾರಿ ಕ್ಷೇತ್ರಕ್ಕೆ ಕಾಯಕಲ್ಪ, ಖರ್ಗೆ
ಬೆಂಗಳೂರು, ನ. 19 : ಸಚಿವ ಜನಾರ್ದನರೆಡ್ಡಿ ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿ ಅಕ್ರಮಗಳ ತನಿಖೆಯನ್ನು ಸಿಬಿಐ ಒಪ್ಪಿಸಿರುವುದನ್ನು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ. ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಾಜ್ಯ ಸಹಕಾರಿ ವಸತಿ ಮಹಾಮಂಡಲವು ನಗರದ ಬಸವನಗುಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಹಕಾರಿ ವಸತಿ ಭವನವನ್ನು..


ಭಾವಿ ಪಿಎಂ ಎಂದು ಕರೆಯಬೇಡಿ: ರಾಹುಲ್
ವಿಜಯವಾಡ, ನ. 18 : ಭವಿಷ್ಯದ ಭಾರತದ ಪ್ರಧಾನಮಂತ್ರಿ ಎಂದು ಯಾರೂ ನನ್ನನ್ನು ಬಿಂಬಿಸಬಾರದು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಜನರಲ್ಲಿ ಮಾಡಿಕೊಂಡ ಮನವಿ ಇದು. ನಗರದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಭಾರತದ ಭಾವಿ ಪ್ರಧಾನಿ ಎಂದು ಬಿಂಬಿಸಬಾರದು ಎಂದರು. ಭಾರತದ..


ಓಎಂಸಿ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಿ, ಸಿದ್ದು
ಬೆಂಗಳೂರು, ನ. 18 : ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಪ್ರಕರಣವನ್ನು ತನಿಖೆಗೆ ವಹಿಸಿದೆ ರಾಜ್ಯಕ್ಕೂ ಕೂಡಾ ಇದರಿಂದ ಭಾರಿ ಅನ್ಯಾಯವಾಗಿದೆ. ಆದ್ದರಿಂದ ಈ ಕೂಡಲೇ ಓಎಂಸಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು