clear
clear
clear
clear
ಮುಖಪುಟ » ಸುದ್ದಿಜಾಲ » ಸುದ್ದಿ-ಚಿತ್ರ
ಕನ್ನಡ ಸುದ್ದಿಗಳನ್ನು ಓದಿರಿ.

ನಾಯಕತ್ವ ಬದಲಾವಣೆ ಇಲ್ಲ : ಬಿಜೆಪಿ
ಬೆಂಗಳೂರು, ನ.2 : ನಾಯಕತ್ವ ಬದಲಾವಣೆ ಇಲ್ಲ ಎಂದು ಭಿನ್ನರಿಗೆ ಸ್ಪಷ್ಟಪಡಿಸಿರುವ ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಸಂಪುಟ ಸೇರುವಂತೆ ಮನವೂಲಿಸಲು ಮುಂದಾಗಿದೆ. ಆದರೆ, ಇತ್ತ ರೆಡ್ಡಿಗಳು ಹೈಕಮಾಂಡ್ ಗೆ ಸೆಡ್ಡು ಹೊಡೆಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರಿಂದ ಬಿಜೆಪಿ ಬಿಕ್ಕಟ್ಟು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೈಕಮಾಂಡ್ ತೀರ್ಮಾನವನ್ನು ತಳ್ಳಿಹಾಕಿರುವ ಶೆಟ್ಟರ್, ನಾಯಕತ್ವ ಬದಲಾವಣೆ ವಿಷಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುವಂತೆ


ದೇಶ ಸೇವೆ ಮಾಡಲು ಅಡ್ವಾಣಿ ನಾಲಾಯಕ್ : ಜಸ್ವಂತ್
ನವದೆಹಲಿ, ಆ. 29 : ಕಳೆದ ವರ್ಷ ಲೋಕಸಭೆಯಲ್ಲಿ ನಡೆದ ವೋಟಿಗಾಗಿ ನೋಟು ಹಗರಣದ ಸೂತ್ರದಾರ ಎಲ್ ಕೆ ಅಡ್ವಾಣಿ ಎಂದು ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಆರೋಪಿಸಿದ್ದಾರೆ. ಇದೊಂದು ಕರುಣಾಜನಕ ಕಥೆ. ಇಲ್ಲೊಬ್ಬರು ವ್ಯಕ್ತಿ ಇದ್ದಾರೆ. ಅವರದು ಪ್ರಧಾನಿಯಾಗುವ ಮಹತ್ವಾಕಾಂಕ್ಷೆ. ಅದಕ್ಕಾಗಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ವೋಟಿಗಾಗಿ ನೋಟು ಎಂಬ ಕೊಳಕು ಹಗರಣ ತಪ್ಪು ನಿರ್ಧಾರದ..


ಅಮೆರಿಕಾದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು, ಜು. 3 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಪ್ರಸಕ್ತ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ನುರಿತ ಅಮೆರಿಕ ಸರಕಾರದ ನಾನಾ ಅಧಿಕಾರಿಗಳನ್ನು ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃಧ್ಧಿ ಕಾರ್ಯಕ್ರಮಗಳ ಅನುಷ್ಠಾನ, ನೀರು ಕೊಯ್ಲು, ಗ್ರಾಮೀಣ ಸಾರಿಗೆ ಮತ್ತು ಅಭಿವೃದ್ಧಿ ಯಜ್ಞದಲ್ಲಿ ಸಂಸದರ ಪಾತ್ರ..


ಬಿದ್ದಪನಿಗಾಗಿ ಬೆಕ್ಕಿನ ನಡಿಗೆ ಇಟ್ಟ ರಮ್ಯ
ಬೆಂಗಳೂರು, ಜ. 21: ಫ್ಯಾಷನ್ ಸಿಟಿ , ಪ್ಯಾರೀಸ್ ಆಫ್ ಈಸ್ಟ್ ಎಂಬ ಹೆಗ್ಗಳಿಕೆ ಗಳಿಸಿರುವ ನಮ್ಮ ಬೆಂಗಳೂರು , ಸೋಮವಾರ ರಾತ್ರಿ ರಂಗು ರಂಗಾದ ಫ್ಯಾಷನ್ ಷೋವನ್ನು ಕಂಡಿತು. ಪ್ರದೀಪ್ ಹಿರಾನಿ ಒಡೆತನದ 'ಕಿಮಯಾ ಫ್ಯಾಷನ್ ಔಟ್ ಲೆಟ್ 'ಗಳನ್ನು ಬೆಂಗಳೂರು ಸೇರಿದಂತೆ ದೆಹಲಿ, ಚೆನ್ನೈನಲ್ಲಿ ವೈಭವಯುತವಾಗಿ ಆರಂಭಿಸಲಾಯಿತು. ನಗರದಲ್ಲಿ ಪ್ರಸಾದ್ ಬಿದ್ದಪ್ಪ ಸಾರಥ್ಯದ ಫ್ಯಾಷನ್..


ಸಾಲುಮರದ ತಿಮ್ಮಕ್ಕನಿಗೆ ಕರವೇಆತ್ಮೀಯ ಸನ್ಮಾನ
ಬೆಂಗಳೂರು, ಜ. 20 : ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ (ಟಿ ಎ ನಾರಾಯಣಗೌಡ ಬಣ) ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ಸೇರಿದಂತೆ ಕನ್ನಡಕ್ಕಾಗಿ ಸೇವೆ ಸಲ್ಲಿಸಿರುವ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ, ಕನ್ನಡ ಪ್ರಾಧಿಕಾರದ..


ಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ
ಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)..


ಕೆಎಸ್ ಅಶ್ವತ್ಥ್ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ
ಬೆಂಗಳೂರು, ಜ. 14 : ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್ ಅಶ್ವತ್ಥ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಸನ್ಮಾನಿಸಿದರು. ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಯೋಗಿ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ಅವರು ಉಪಸ್ಥಿತರಿದ್ದರು. ಚಿತ್ರ : ಎಂ.ಎಂ...


ಸಿಎಂ ಜತೆ ಅಡ್ವಾಣಿ ಭೇಟಿ ಮಾಡಿದ ಸೋಮಣ್ಣ
ಬೆಂಗಳೂರು, ಜ. 6 : ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ನಡೆಸುವುದಿಲ್ಲ, ಇನ್ನೇನಿದ್ದರೂ ಅಭಿವೃದ್ಧಿ, ಅಭಿವೃದ್ಧಿ ಹಾಗೂ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಕಳೆದ ಉಪಚುನಾವಣೆ ಫಲಿತಾಂಶದ ನಂತರ ಹೇಳಿಕೆ ನೀಡಿದ್ದರು. ಆದರೆ ಮಂಗಳವಾರ ನವದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ಯಡಿಯೂರಪ್ಪ ಜೊತೆಗೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ..


ಸಿಎಂರಿಂದ ಅದಿಚುಂಚನಗಿರಿ ಸ್ವಾಮೀಜಿ ಕುಶಲೋಪರಿ
ಬೆಂಗಳೂರು, ಡಿ. 18 : ಕೆಂಗೇರಿ ಬಳಿ ಇರುವ ಬಾಲಗಂಗಾಧರನಾಥ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಮುಖ್ಯಮಂತ್ರಿ ಡಾ. ಬಿಎಸ್ ಯಡಿಯೂರಪ್ಪ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ಸಾರಿಗೆ ಸಚಿವ ಆರ್ ಅಶೋಕ್ ಈ ಸಂದರ್ಭದಲ್ಲಿ ಹಾಜರಿದ್ದರು. ದಿಢೀರ್..


ಬೆಂಗಳೂರಿನಲ್ಲಿ ಕೂಲ್ ಕೂಲ್ ಬಸ್ ನಿಲ್ದಾಣ
ಬೆಂಗಳೂರು, ಡಿ. 16 : ಸಿಲಿಕಾನ್ ಸಿಟಿ ಬೆಂಗಳೂರು ತನ್ನ ರೆಕ್ಕೆಗೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಹಾಗೂ ರಿಲಯನ್ಸ್ ಬಿಗ್ ಸಂಸ್ಥೆಯ ಸಹಯೋಗದಲ್ಲಿ ನಗರದ ಕಸ್ತೂರ್ಬಾ ರಸ್ತೆ (ವಿಶ್ವೇಶ್ವರಯ್ಯ ಮ್ಯೂಸಿಯಂ ರಸ್ತೆ) ಹವಾ ನಿಯಂತ್ರಿತ ಬಸ್ ತಂಗು ನಿರ್ಮಿಸಲಾಗಿದೆ. ಇದು ವಿನೂತನ ಪ್ರಯೋಗವಾಗಿದ್ದು, ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಕಸ್ತೂರ್ಬಾ ರಸ್ತೆಯಲ್ಲಿರುವ ಈ..


More: 1  2  3  4  5  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು