ಕನ್ನಡ ಸುದ್ದಿಗಳನ್ನು ಓದಿರಿ.
ಯಾಹೂ ಆರ್ ಎಂಡ್ ಡಿ ಸಿಇಒ ಶರ್ಮಾ ರಾಜೀನಾಮೆಬೆಂಗಳೂರು, ಫೆ. 27 : ಅಂತರ್ಜಾಲದ ಪ್ರಮುಖ ತಾಣಗಳಲ್ಲಿ ಒಂದಾದ ಯಾಹೂ ಕಂಪನಿಯ ಭಾರತೀಯ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ (ಆರ್ ಎಂಡ್ ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ (ಸಿಇಒ) ಶರದ್ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶರದ್ ಶರ್ಮಾ ಸ್ಥಾನಕ್ಕೆ ಸೌಬಿಕ್ ಮುಖರ್ಜಿ ನೇಮಕವಾಗುವ ಸಾಧ್ಯತೆಗಳಿವೆ.ಶರದ್ ಶರ್ಮಾ ಯಾಹೂ ಕಂಪನಿಯ ಸಿಇಒ ಸ್ಥಾನಕ್ಕೆ..
ಟಿಸಿಎಸ್ ಉದ್ಯೋಗಿಗಳ ಸಂಬಳ ಹೆಚ್ಚಳವಿಲ್ಲ, ರಾಮದೊರೈಮುಂಬೈ, ಫೆ. 26 : ಜಾಗತಿಕ ಮಾರುಕಟ್ಟೆ ಆರ್ಥಿಕ ಕುಸಿತ ಇದೀಗ ದೇಶದ ದೊಡ್ಡ ಸಾಫ್ಟ್ ವೇರ್ ಕಂಪನಿಯ ಎಂದೇ ಖ್ಯಾತಿ ಪಡೆದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಬಿಸಿ ತಾಗಿದೆ. ಕಾಸ್ಟ್ ಕಟಿಂಗ್ ಗೆ ಮುಂದಾಗಿರುವ ಕಂಪನಿಯೂ ಸಾಧ್ಯವಾದರೆ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಚಿಂತನೆ ನಡೆಸಿದೆ. ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಮದೊರೈ ಮಾತನಾಡಿ,..
ಇನ್ನೆರಡು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಮಾಯಮೈಸೂರು, ಫೆ. 25 : ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಎಲ್ಲ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಭಾರತ ದೇಶ ಈ ಗಂಭೀರ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ಮುಂದಿನ ಎರಡು ವರ್ಷ ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಇದರ ಕರಿನೆರಳಿನಿಂದ ಹೊರಬರಲಿದೆ ಎಂದು ಇಸ್ ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದರು...
ರು.20 ಸಾವಿರಕ್ಕೆ ವಿಪ್ರೋ ಲ್ಯಾಪ್ ಟಾಪ್ ಲಭ್ಯಬೆಂಗಳೂರು, ಫೆ. 24 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮ ಗಮನಾರ್ಹವಾಗಿ ಕುಸಿತ ಕಂಡಿರುವ ಸಂಕಷ್ಟದ ಸ್ಥಿತಿಯಲ್ಲಿ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ನಂಬಲಾಗದಂತಹ ದರದಲ್ಲಿ ಲ್ಯಾಪ್ ಟಾಪ್ ವೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ವಿಪ್ರೋ ಲ್ಯಾಪ್ ಟಾಪ್ ಬೆಲೆ ಕೇವಲ 20 ಸಾವಿರ ರುಪಾಯಿ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.ವಿಪ್ರೋ ಕಂಪನಿ ಬಿಡುಗಡೆ..
ಆರ್ಥಿಕ ಬಿಕ್ಕಟ್ಟು, ಎಚ್ ಪಿಯಲ್ಲಿ ಸಂಬಳ ಕಡಿತಫ್ರಾಮಿಂಗ್ಯಾಮ್, ಫೆ. 23 : ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಎನಿಸಿರುವ ಹ್ಯಾವ್ಲೆಟ್ ಪ್ಯಾಕರ್ಡ್ ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಲು ಮುಂದಾಗಿದೆ. ಕಳೆದ ವರ್ಷ ಆಕ್ಟೋಬರ್ ನಲ್ಲಿ ಸುಮಾರು 9 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವುದಾಗಿ ಎಚ್ ಪಿ ಘೋಷಿಸಿತ್ತು. ಎಚ್ ಪಿ ಕಂಪನಿ ಜನವರಿ 31..
ಶ್ರೀಲಂಕಾ ಐಟಿ ಸಲಹೆಗಾರ ಹುದ್ದೆ ಬೇಡ: ಇನ್ಫಿ ಮೂರ್ತಿಬೆಂಗಳೂರು, ಫೆ. 19 : ಇತ್ತೀಚೆಗೆ ಶ್ರೀಲಂಕಾದ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಅಂತಾರಾಷ್ಟ್ರೀಯ ಸಲಹೆಗಾರರಾಗಿ ನೇಮಕಗೊಂಡಿದ್ದ ಇನ್ ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಸೋಮವಾರ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಲಂಕಾದ ಅಧ್ಯಕ್ಷ ಮಹೀಂದಾ ರಾಜಪಕ್ಷೆ ಅವರಿಗೆ ನಾರಾಯಣಮೂರ್ತಿ ಪತ್ರವನ್ನು ಕಳುಹಿಸಿದ್ದಾರೆ. ಜತೆಗೆ, ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ತಮಗೆ..
ವೈಜ್ಞಾನಿಕ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿಬೆಂಗಳೂರು, ಫೆ.18: ದೇಶದ ಅಭಿವೃದ್ಧಿಗೆ ನೆರೆವಾಗುವ ವೈಜ್ಞಾನಿಕ ಸಂಶೋಧನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ದಿಗ್ಗಜ ಇನ್ಫೋಸಿಸ್ ತಲಾ 50 ಲಕ್ಷ ರು.ಮೊತ್ತದ ಐದು ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿಗಳನ್ನು 'ಇನ್ಫೋಸಿಸ್ ಇಂಡಿಯ ಪ್ರೈಸ್' ಹೆಸರಿನಲ್ಲಿ ನೀಡಲಾಗುತ್ತದೆ. ದೇಶದ ಸಂಶೋಧನಾ ಕ್ಷೇತ್ರವನ್ನು ಹೆಚ್ಚು ಪ್ರೋತ್ಸಾಹಿಸುವ ಅಗತ್ಯವಿದೆ. ಅದಕ್ಕಾಗಿ ಈ ಪ್ರಶಸ್ತಿ ಮೂಲಕ ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಶೋಧಕರನ್ನು ಗೌರವಿಸಲಾಗುತ್ತದೆ..
ಎಲ್ಲ ಜಿಲ್ಲೆಗಳಲ್ಲಿ ಐಟಿ ಪಾರ್ಕ್ ಸ್ಥಾಪನೆ, ಯಡಿಯೂರಪ್ಪಶಿವಮೊಗ್ಗ, ಫೆ. 17 : ಪ್ರತಿ ಜಿಲ್ಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಕೈಗಾರಿಕೆಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದೆಂದು ಮುಖ್ಯಮಂತ್ರಿ ಡಾ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಶಿವಮೊಗ್ಗ ಸಮೀಪದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 15 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಮಾಹಿತಿ ತಂತ್ರಜ್ಞಾನದ ಉದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಆರ್ಥಿಕ ಹಿಂಜರಿತದಿಂದಾಗಿ ಉಂಟಾಗುತ್ತಿರುವ..
ಉದ್ಯೋಗ ಸೃಷ್ಟಿ ಅನಿವಾರ್ಯ, ನಂದನ್ ನಿಲೇಕಣಿಬೆಂಗಳೂರು, ಫೆ. 17 : ಮುಂದಿನ 25 ವರ್ಷದಲ್ಲಿ ದೇಶದಲ್ಲಿ 2.27 ಕೋಟಿ ಉದ್ಯೋಗ ಸೃಷ್ಟಿಸುವ ಅನಿವಾರ್ಯತೆ ಇದೆ ಎಂದು ಇನ್ ಫೋಸಿಸ್ ಸಹ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಭವಿಷ್ಯದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಉದ್ಯೋಗ ಸೃಷ್ಟಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು..
ಸತ್ಯಂ ಮೇಲಿನ ನಿರ್ಬಂಧ ಸಡಿಲ ಸಾಧ್ಯ: ವಿಶ್ವಬ್ಯಾಂಕ್ನವದೆಹಲಿ, ಫೆ. 16:ಬಹುಕೋಟಿ ಹಗರಣದಲ್ಲಿ ಸಿಕ್ಕಿರುವ ಸತ್ಯಂ ಕಂಪ್ಯೂಟರ್ ಮೇಲಿನ ಆರ್ಥಿಕ ನಿರ್ಬಂಧವನ್ನು ಸಡಿಲಗೊಳಿಸುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ನಿಯಮಗಳ ಅನುಸಾರ ಸ್ಪಂದಿಸಿದರೆ ಸತ್ಯಂ ಮೇಲೆ ಹೇರಿರುವ 8 ವರ್ಷಗಳ ಆರ್ಥಿಕ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿಕೆ ಕೊಟ್ಟಿದೆ.ಗ್ರಾಹಕರೊಡನೆ ನಿರ್ವಂಚನೆಯಿಂದ ಸ್ಪಷ್ಟವಾದ ವ್ಯವಹಾರ ನಡೆಸುವ ಭರವಸೆ ಹಾಗೂ ಆಧಾರವನ್ನು ಸತ್ಯಂ ಸಂಸ್ಥೆ ನೀಡಿದ್ದೆ ಆದಲ್ಲಿ,..