clear
clear
clear
clear
ಮುಖಪುಟ » ಸುದ್ದಿಜಾಲ » ವಾರ್ತೆಗಳು
ಕನ್ನಡ ಸುದ್ದಿಗಳನ್ನು ಓದಿರಿ.

ಕಸಬ್ ಸಿಕ್ಕರೆ ಕೊಂದು ಬಿಡುವೆ, ಗ್ರೇಟ್ ಖಲಿ
ಮುಂಬೈ, ನ. 22 : ನನ್ನ ನೂರಾರು ಸಹೋದರ-ಸಹೋದರಿಯರ ಸಾವಿಗೆ ಕಾರಣವಾಗಿರುವ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ನನ್ನ ಕೈಗೊಪ್ಪಿಸಿದರೆ ಸ್ಥಳದಲ್ಲೇ ಆತನನ್ನು ಕೊಂದು ಹಾಕುತ್ತೇನೆ ಎಂದು ಡಬ್ಲ್ಯು ಡಬ್ಲ್ಯು ಇ ಕುಸ್ತಿಪಟು ಗ್ರೇಟ್ ಖಲಿ ಅಲಿಯಾಸ್ ದಿಲೀಪ್ ಸಿಂಗ್ ರಾಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯವನ್ನು ರಕ್ಷಿಸಲು ಕಾನೂನು ಇದೆ ಎಂಬುದು ನನಗೆ ಗೊತ್ತು. ಆದರೂ


ಅಸ್ಸಾಂನಲ್ಲಿ ಸರಣಿ ಸ್ಫೋಟ; 6 ಸಾವು
ಗುವಾಹಟಿ, ನ. 22 : ನಲ್ಬಾರಿ ಜಿಲ್ಲೆಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪೊಲೀಸ್ ಠಾಣೆಯ ಪಕ್ಕದಲ್ಲಿ ಸೇರಿ ಮೂರು ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚೂ ಮಂದಿ ಗಾಯಗೊಂಡಿದ್ದಾರೆ. ಉಲ್ಫಾ ಉಗ್ರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಇಂದು ಬೆಳಗ್ಗೆ 10.15ಕ್ಕೆ ನಲ್ಬಾರಿ ಪೊಲೀಸ್ ಠಾಣೆ ಪಕ್ಕದಲ್ಲಿ ಮೊದಲೆಡು ಬಾಂಬ್..


ಸೇನಾ ಪುಂಡರ ದಾಳಿಗೆ ಐಬಿಎನ್ ಕಚೇರಿ ಧ್ವಂಸ
ಮುಂಬೈ/ಪುಣೆ, ನ. 20 : ಮಹಾರಾಷ್ಟ್ರದಲ್ಲಿ ಶಿವಸೇನೆ ರೌಡಿಗಳ ಪುಂಡಾಟಿಕೆ ಮುಂದುವರೆದಿದ್ದು, ಮುಂಬೈ ಮತ್ತು ಪುಣೆಯಲ್ಲಿರುವ ಐಬಿಎನ್ ಲೋಕಮಾತ (ಮರಾಠಿ) ಐಬಿಎನ್ 7 (ಹಿಂದಿ) ಕಚೇರಿ ಮೇಲೆ ದಾಳಿ ನಡೆಸಿರುವ ಶಿವಸೇನೆ ಕಾರ್ಯಕರ್ತರು ಕಚೇರಿ ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ ಕೆಲ ಪತ್ರಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹತಾಶೆಗೊಂಡಿರುವ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಹಾಗೂ ಅವರ..


ಹಿರಿಯ ಕಾಂಗ್ರೆಸ್ಸಿಗ ಬಿ ಶಂಕರಾನಂದ ನಿಧನ
ಬೆಳಗಾವಿ, ನ. 20 : ಕಳೆದ ಹಲವಾರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಬಿ ಶಂಕರಾನಂದ ಶುಕ್ರವಾರ ಬೆಳಕಿನ ಜಾವ 2 ಗಂಟೆಗೆ ನಗರದ ಕೆಎಲ್ ಇ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರಾನಂದ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೋಕ ವ್ಯಕ್ತಪಡಿಸಿದ್ದು, ಕುಟುಂಬ ಸದಸ್ಯರಿಗೆ ದುಃಖ..


ಮನೆ ಬಿಟ್ಟುಹೋದವಳ ಗರ್ವಭಂಗ
ನವದೆಹಲಿ, ನ. 19 : ಗಂಡ ಮಕ್ಕಳನ್ನು ಬಿಟ್ಟು ಮನೆ ತೊರೆದು ಹೊರಗೆ ನಡೆಯುವವಳಿಗೆ ಆತನ ಪತಿ ಉಪ್ಪು ಸೊಪ್ಪು ಹಾಕಬಾರದು. ಅವಳಾಗೇ ಬಿಟ್ಟುಹೋದ ಮೇಲೆ ಅವಳಿಗೆ ಈತ ಯಾಕೆ ಪರಿಹಾರ ಕೊಡಬೇಕು ? ಅವಳ ಜೀವನ ನಿರ್ವಹಣೆಗೋಸ್ಕರ ಈತ ಯಾಕೆ ಕಾಸು ಬಿಚ್ಚಬೇಕು?ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಒಂದು ಐತಿಹಾಸಿಕ ತೀರ್ಪನ್ನು..


ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ, ಹೆಗ್ಡೆ
ಬೆಂಗಳೂರು, ನ. 18 : ನೆರೆ ಸಂತ್ರಸ್ತರಿಗಾಗಿ ನಡೆಸುತ್ತಿರುವ ಪರಿಹಾರ ಕಾರ್ಯಕ್ರಮಗಳು ಲೋಪದೋಷದಿಂದ ಕೂಡಿದ್ದು, ನೊಂದವರಿಗೆ ನೆರವಾಗುವ ಕೆಲಸ ಸಂಪರ್ಕಕವಾಗಿ ನಡೆಯುತ್ತಿಲ್ಲ ಎಂಬ ಲೋಕಾಯುಕ್ತರ ವರದಿ ಸರಕಾರದ ಕೈಸೇರಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಾಯುಕ್ತ ಸಂತೋಷ ಹೆಗ್ಡೆ ಸಂತ್ರಸ್ತರಿಗೆ ಸಕಾಲದಲ್ಲಿ ನೆರವಾಗಿ..


ವಂದೇ ಮಾತರಂ ವಿವಾದವೊಂದು ಸಂಚು
ಬೆಂಗಳೂರು, ನ. 18 : ವಂದೇ ಮಾತರಂ ಅನ್ನು ನೆಪವಾಗಿಟ್ಟುಕೊಂಡು ಹಿಂದೂ ಮುಸ್ಲಿಂ ಸಮಾಜ ಬಾಂಧವರ ನಡುವೆ ಘರ್ಷಣೆ ಹುಟ್ಟುಹಾಕಲು ಯತ್ನಿಸಲಾಗುತ್ತಿದೆ ಎಂದು ಅಂಜುಮನ್ ಫನ್ ಕಾರಾನೆ ಉರ್ದು ಸಂಸ್ಥೆಯ ಕಾರ್ಯದರ್ಶಿ ಶರ್ಯಾರ್ ಖಾನ್ ಹೇಳಿದರು. ಹಿಂದೂ ಬಾಂಧವರು ಫತ್ವಾದ ಅರ್ಥವನ್ನು ಹಾಗೂ ಮುಸ್ಲಿಮರು ಬಾಂಧವರು ವಂದೇ ಮಾತರಂ ಗೀತೆಯ ಅರ್ಥವನ್ನು ಮನಗಂಡರೆ ಈ ಕುರಿತು ವಿವಾದವೇ..


ಅಣುಸ್ಥಾವರದ ಮೇಲೆ ದಾಳಿ ಭೀತಿ, ಕಟ್ಟೆಚ್ಚರ
ನವದೆಹಲಿ, ನ.17: ಮುನ್ನೆಚ್ಚರಿಕೆ ಕ್ರಮವಾಗಿ ಅಣು ಸ್ಥಾವರ ಹೊಂದಿರುವ ಎಲ್ಲ ರಾಜ್ಯಗಳಿಗೂ ಅಣು ಘಟಕಗಳ ಸುತ್ತ ಸರ್ಪಗಾವಲು ಹಾಕುವಂತೆ ಗೃಹ ಸಚಿವಾಲಯ ಸೂಚಿಸಿದೆ. ಅಣುಸ್ಥಾವರಗಳಂತಹ ಆಯಕಟ್ಟಿನ ನಿರ್ಮಾಣಗಳಿಗೆ ಯಾವುದೇ ಹಾನಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈ ಮೇಲಿನ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿರುವ ಡೇವಿಡ್ ಹೆಡ್ಲಿ ದೇಶದ ಮಹತ್ವದ ಅಣುಸ್ಥಾವರಗಳು..


ವಂದೇಮಾತರಂ ಉರ್ದು ಅನುವಾದಕ್ಕೆ ಮನವಿ
ಲಕ್ನೋ,ನ.17: ವಂದೇಮಾತರಂ ಹಾಡಿನ ನಿಜವಾದ ಅರ್ಥವನ್ನು ಮುಸ್ಲಿಂ ಸಮುದಾಯ ತಿಳಿದುಕೊಳ್ಳಲು ಉರ್ದು ಬಾಷೆಗೆ ಅನುವಾದಿಸಬೇಕೆಂದು ಕೋರಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ವಂದೇಮಾತರಂನ ತರ್ಜುಮೆಯನ್ನು ಶೀಘ್ರ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಂಡಳಿ ಅಧ್ಯಕ್ಷ ಮೌಲಾನ ಮಿರ್ಜಾ ಮೊಹಮ್ಮದ್ ಅತ್ತರ್ ಪತ್ರ ಬರೆದಿದ್ದಾರೆ.ವಂದೇಮಾತರಂನ ಸರಿಯಾದ..


ಆಂಧ್ರ: ಜಿಲೇಟಿನ್ ಕಡ್ಡಿ ಸ್ಫೋಟಕ್ಕೆ 15 ಬಲಿ
ಗುಂಟೂರು, ನ.16: ಇಲ್ಲಿನ ದಾಚೇಪಲ್ಲಿ ಮಂಡಲಕ್ಕೆ ಸೇರಿದ ನಾರಾಯಣಪುರದ ಮನೆಯೊಂದರಲ್ಲಿ ನಡೆದ ಸ್ಫೋಟಕ್ಕೆ 15 ಜನ ಬಲಿಯಾಗಿದ್ದಾರೆ. ಸ್ಫೋಟದ ಭೀಕರತೆಗೆ ಸುತ್ತಮುತ್ತಲಿನ 10 ಮನೆಗಳು ನಾಶವಾಗಿದೆ.ಘಟನೆ ನಡೆದ ಮನೆಯಲ್ಲಿ ಅಕ್ರಮವಾಗಿ ಜಿಲೇಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ನಂತರ ಸ್ಥಳೀಯ ಪೊಲೀಸರು ತಿಳಿಸಿದರು. ಈ ಘಟನೆಯಿಂದ ಗಾಯಗೊಂಡ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Kannada news headlines, breaking news, from Karnataka, India and the world. Kannada News covers news in Politics, Finance, Sports, Entertainment and Business. Find the breaking Kannada news, samachara, varthegalu and latest news updates in picture and video around the world. Enjoy the news in Kannada For Kannadigas Worldwide.ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ರಾಜಕೀಯ, ಹಣಕಾಸು, ಕ್ರೀಡೆ, ಮನರಂಜನೆ ಮತ್ತು ವ್ಯಾಪಾರ ಸಂಬಂಧಿ ಕನ್ನಡ ಸುದ್ದಿಗಳನ್ನು ಇಲ್ಲಿ ಪ್ರಕಟಿಸಲಾಗುವುದು. ಇತ್ತೀಚಿನ ಸುದ್ದಿ ಸಮಾಚಾರಗಳು, ಸುದ್ದಿ ಚಿತ್ರಗಳು ಮತ್ತು ವಿಡಿಯೋಗಳಿಗಾಗಿ ಈ ವಿಭಾಗವನ್ನು ನೋಡುತ್ತಿರಿ. ವಿಶ್ವದ ಕನ್ನಡಿಗರಿಗಾಗಿ ಕನ್ನಡ ಸುದ್ದಿ ಸುಗ್ಗಿ.