ಕನ್ನಡ ಸುದ್ದಿಗಳನ್ನು ಓದಿರಿ.
ಆದಾಯ ತೆರಿಗೆ ವಂಚನೆ ಸುಳಿಯಲ್ಲಿ ಚಕ್ರಪಾಣಿಬೆಂಗಳೂರು, ನ. 20 : ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಚಕ್ರಪಾಣಿ ಸೇರಿದಂತೆ ನಗರದ ನಾಲ್ಕು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಏಕಾಕಾಲದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿ ರಸ್ತೆಯಲ್ಲಿರುವ ಕೋಡಿಗೆಹಳ್ಳಿ ನಿವಾಸಿ ಕಾಂಗ್ರೆಸ್ ನಾಯಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಚಕ್ರಪಾಣಿ, ಜಯಮಹಲ್ ನಲ್ಲಿರುವ...
ಇದು ರಿವರ್ಸ್ ಲವ್ ಜಿಹಾದ್ !ಇದು ಲವ್ ಜಿಹಾದ್‌ನ ಪರಿವರ್ತಿತ ರೂಪ. ಮುಸ್ಲಿಂ ಜನಾಂಗದ ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಹೆಣವಾಗಿ ಹೋದ ರಿಯಲ್ ಎಸ್ಟೇಟ್ ಉದ್ಯಮಿಯ ದಾರುಣ ಕತೆ ಇದು.ಅನಾಥ ಶವ ಎಂದು ಬಿ ರಿಪೋರ್ಟ್ ಹಾಕಿ ಕೈ ಚೆಲ್ಲುತ್ತಿದ್ದ ಪೊಲೀಸರು ಅಪರೂಪಕ್ಕೆ ತೋರಿದ ಸಮಯ ಪ್ರಜ್ಞೆಯಿಂದ 8 ತಿಂಗಳ ಹಿಂದೆ ನಡೆದ ನರಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಜನಾಂಗದ ಯುವತಿಯನ್ನು..
ಆನ್ ಲೈನ್ ದೂರು ಸಲ್ಲಿಸಲು ಬಿಬಿಎಂಪಿ ಕ್ರಮಬೆಂಗಳೂರು, ನ. 19 : ನಿಮ್ಮ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿವೆಯೇ ? ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೇ ? ಚರಂಡಿಗಳು ಹಾಳಾಗಿವೆಯೇ ? ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆಯೇ ? ಈ ತರಹದ ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ..
ಬೆಂಗಳೂರಿನಲ್ಲಿ ಮಿಡ್ ನೈಟ್ ಮಸಾಲಾ : 20 ಬಂಧನಬೆಂಗಳೂರು, ನ. 19 : ಮಧ್ಯರಾತ್ರಿಯಲ್ಲಿ ಅನೈತಿಕ ಚಟುವಟಿಕೆ ಹಾಗೂ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ 20 ಯುವತಿಯರು ಸೇರಿದಂತೆ ಸುಮಾರು 38 ಮಂದಿಯನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಶೂಲೆ ವೃತ್ತದಲ್ಲಿರುವ ಟೊಪಾಜ್ ಬಾರ್ ನಲ್ಲಿ ಬುಧವಾರ ಮಧ್ಯರಾತ್ರಿವರೆಗೂ 20 ಮಂದಿ ಯುವತಿಯರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದರು. ವಿಷಯ ತಿಳಿದ..
ಬೆಂಗ್ಳೂರಿನ ಐಐಎಂ ಅತ್ಯುತ್ತಮ ಬಿಸಿನೆಸ್ ಸ್ಕೂಲ್ಬೆಂಗಳೂರು, ನ. 18 : ಆರ್ಥಿಕ ಕುಸಿತದ ನಡುವೆಯೂ ತನ್ನ ಎಲ್ಲ ವಿದ್ಯಾರ್ಥಿಗಳೂ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವಂತೆ ನೋಡಿಕೊಂಡಿರುವ ದೇಶದ ಪ್ರತಿಷ್ಠಿತ ಮ್ಯಾನೇಡ್ ಮೆಂಟ್ ಸ್ಕೂಲ್ ಗಳಲ್ಲಿ ಒಂದಾದ ಬೆಂಗಳೂರಿನ ಇಂಡಿಯನ್ ಇನ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಗೆ ಮತ್ತೊಂದು ಗರಿ ಲಭಿಸಿದ್ದು, 2009ರ ಸಾಲಿನ ದೇಶದ ಅಗ್ರ ಕ್ರಮಾಂಕದ ಬಿಸಿನೆಸ್ ಸ್ಕೂಲ್ ಎಂಬ ಕೀರ್ತಿಗೆ..
ಕೊನೆಗೂ ವಂಚಿತೆ ಪ್ರಿಯಾಂಕಾಗೆ ಬುದ್ಧಿಬಂತು !ಬೆಂಗಳೂರು, ನ. 18 : ಪ್ರೀತಿಸಿದವನಿಂದ ವಂಚನೆಗೊಳಗಾದ ಪ್ರಿಯಾಂಕಾಗೆ ಕೊನೆಗೂ ಬುದ್ಧಿ ಬಂದಿದೆ. ಅವನಾಗಿಯೇ ಬಂದು ನನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದರೂ ಸಹ ಆತನ ಜೊತೆ ನಾನು ಹೋಗುವುದಿಲ್ಲ. ಇನ್ನೇನಿದ್ದರೂ ನನ್ನದು ನನ್ನ ಭವಿಷ್ಯದ ಬಗೆಗಿನ ಚಿಂತನೆ ಮಾತ್ರ ಎಂದು ಮಂಗಳವಾರ ತಿಳಿಸಿದ್ದಾರೆ. ಅವನೊಬ್ಬ ಮೋಸಗಾರ, ವಂಚಕ ಮತ್ತು ಪ್ರೀತಿ ಎದುರಿಸಲಾಗದೇ ಹೆದರಿ ಓಡಿದ ಹೇಡಿ. ಅವನಿಗೆ..
ಮರೀಬೇಡಿ ಸೋಮವಾರ ಕಡಲೆಕಾಯಿ ಪರಿಷೆ!ಬೆಂಗಳೂರು, ನ.15: ಪ್ರತಿ ವರ್ಷದಂತೆ ಕಾರ್ತೀಕ ಮಾಸದ ಕಡೆಯ ಸೋಮವಾರ (ನ.16) ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಸೋಮವಾರ ಬೆಳಗ್ಗೆ 10ಗಂಟೆಗೆ ಸಂಸದ ಅನಂತಕುಮಾರ್ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ಅವರು ಕಡಲೆಕಾಯಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಬಿ.ಎನ್.ವಿಜಯಕುಮಾರ್, ಡಾ.ಪ್ರೇಮಚಂದ್ರ..
ಹೊಸೂರು ರಸ್ತೆಯ ವಿಷ್ಣು ಲಾಡ್ಜ್ ಗೆ ಬೆಂಕಿಬೆಂಗಳೂರು, ನ.15: ಹೊಸೂರು ರಸ್ತೆಯಲ್ಲಿನ ವಿಷ್ಣು ಲಾಡ್ಜ್ ಗೆ 50ಕ್ಕೂ ಹೆಚ್ಚು ಮಂದಿಯಿದ್ದ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿ ದಾಳಿ ಮಾಡಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶನಿವಾರ ಆನಂದ್ ಎಂಬ ವ್ಯಕ್ತಿಯ ಹತ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಬನ್ನಹಳ್ಳಿ ಗ್ರಾಮಸ್ಥರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.ವಿಷ್ಣು ಲಾಡ್ಜ್..
ವಂಚಿತೆ ಪ್ರಿಯಾಂಕಾಳಿಗೆ ಆಚಾರ್ಯರ ಶ್ರೀರಕ್ಷೆಬೆಂಗಳೂರು, ನ.14: ಪ್ರೀತಿ, ಪ್ರೇಮ, ಕಾಮ, ವಂಚನೆಗೆ ಬಲಿಯಾದ ನಂದಿನಿಲೇಔಟ್ ನಿವಾಸಿ ಪ್ರಿಯಾಂಕಾ ಅವರ ನ್ಯಾಯದ ಆಗ್ರಹ ತ್ವರಿತ ಗತಿಯಿಂದ ಸಾಗಿದ್ದು, ಇಂದು ಗೃಹ ಇಲಾಖೆಯ ಬಾಗಿಲು ತಟ್ಟಿದೆ. ಗೃಹ ಸಚಿವ ವಿಎಸ್ ಆಚಾರ್ಯಅವರ ನಿವಾಸಕ್ಕೆ ಪ್ರಿಯಾಂಕಾಸೇರಿದಂತೆ ಅವರ ಕುಟುಂಬದ ಸದಸ್ಯರು ಭೇಟಿ ಮಾಡಿದರು.ವಂಚಿತೆ ಪ್ರಿಯಾಂಕಾರಿಂದ ದೂರು ಸ್ವೀಕರಿಸಿದ ಅಚಾರ್ಯ ಅವರು, ತಕ್ಷಣ ನಗರ ಪೊಲೀಸ್..
ಪ್ರೀತಿ ಕೊಂದ ಮದುಮಗ ಈ ಕಥೆ ವಿಲನ್ಬೆಂಗಳೂರು, ನ. 13 : ಮದುವೆಯಾಗುವೆ ಎಂದು ನಂಬಿಸಿ ಗರ್ಭಿಣಿ ಮಾಡಿ ಪ್ರೀತಿಸಿದಾಕೆಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಮದುವೆಯಾದ ಘಟನೆ ಇಂದು ನಡೆದಿದೆ. ಈ ಸಂದರ್ಭದಲ್ಲಿ ಪ್ರೀತಿಸಿದ ಯುವತಿ ಮದುವೆ ಮಂಟಪಕ್ಕ ನುಗ್ಗಿ ಗಲಾಟೆ ಮಾಡಿದ ಘಟನೆ ರಾಜಾಜಿನಗರದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ನಡೆದಿದೆ. ಪ್ರೀತಿಸಿದ ಯವತಿ ಹಾಗೂ ಆಕೆ ಸಹೋದರಿಯರು ಮತ್ತು ಪ್ರಿಯಕರನ ಮನೆಯವರೊಂದಿಗೆ ಮಾರಾಮಾರಿ..