clear
clear
clear
clear
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ » ಪೂರ್ಣಪಾಠ
ಡಿ.10 ರಿಂದ ಅಧಿವೇಶನ : ಆಚಾರ್ಯ

VS Acharya
ಬೆಂಗಳೂರು, ನ. 11 : ಡಿಸೆಂಬರ್ 10 ರಿಂದ 10 ದಿನಗಳ ಕಾಲ ಅಧಿವೇಶನ ನಡೆಸಲಾಗುವುದು. ಜೊತೆಗೆ 2006 ರ ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ನೂತನ ಪಿಂಚಣಿ ಸ್ಕೀಮ್ ನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು.

ಸಂಪುಟ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಸಭೆ ವಿವರವನ್ನು ನೀಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಸುವ ಉದ್ದೇಶದಿಂದ ಅಧಿವೇಶನ ಸ್ವಲ್ಪ ತಡವಾಗಿದೆ ಎಂದರು. ಡಿಸೆಂಬರ್ 10 ರಿಂದ 10 ದಿನಗಳ ಕಾಲ ಅಧಿವೇಶನ ಮತ್ತು 2006 ಏಪ್ರಿಲ್ ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ವಿಶೇಷ ಪಿಂಚಣಿ ಸ್ಕೀಮ್ ನ್ನು ಜಾರಿಗೊಳಿಸಲಾಗಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ಕಾವೇರಿ ನೀರು ಸರಬರಾಜು ವ್ಯವಸ್ಥೆಗಾಗಿ 24 ಲಕ್ಷ ರುಪಾಯಿ ವ್ಯಯಿಸುವುದು ಸೇರಿದಂತೆ ಒಟ್ಟು ಇಂದಿನ ಸಂಪುಟದಲ್ಲಿ 700 ಕೋಟಿ ರುಪಾಯಿಗಳ ಯೋಜನೆಗಳಿಗೆ ಒಪ್ಪಿಗೆ ಪಡೆಯಲಾಯಿತು ಎಂದು ಆಚಾರ್ಯ ಹೇಳಿದರು.

ಶೆಟ್ಟರ್ ರಾಜೀನಾಮೆ?

ಹೈಕಮಾಂಡ್ ಸೂಚನೆಯಂತೆ 24 ಗಂಟೆಗೊಳಗೆ ಜಗದೀಶ್ ಶೆಟ್ಟರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದೆ. ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಜಗದೀಶ್ ಶೆಟ್ಟರ್ ಭೇಟಿ ಮಾಡಿ ಚರ್ಚಿಸಿ ದೀಢೀರ್ ದೆಹಲಿಗೆ ವಾಪಸ್ಸಾಗಿದ್ದಾರೆ. ನಾಳೆ ಸಂಜೆ ವೇಳೆಗೆ ಶೆಟ್ಟರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 11, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು