clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ನನ್ನನ್ಯಾಕೆ ಬಲಿಪಶು ಮಾಡಿದ್ರಿ : ಶೋಭಾ

Shobha Karandlaje
ಬೆಂಗಳೂರು, ನ. 10 : ನಾನೇನು ತಪ್ಪು ಮಾಡಿರುವೆ? ಯಾವ ಹಗರಣದಲ್ಲಿ ಸಿಲುಕಿಕೊಂಡಿದ್ದೇನೆ? ನನ್ನ ಮೇಲೆ ಗಂಭೀರವಾದ ಆರೋಪ ಕೇಳಿ ಬಂದಿದೆಯೇ? ಭ್ರಷ್ಟಾಚಾರ ಎಸಗಿದ್ದೇನೆಯೇ? ಅಥವಾ ನಾನು ಅಸಮರ್ಥಳೆ? ನನ್ನ ರಾಜೀನಾಮೆ ಪಡೆಯಲು ಏನಾದರೊಂದು ಕಾರಣವಿದ್ದರೆ ಹೇಳಿ. ಹೀಗೆ ಪ್ರಶ್ನೆಗಳ ಮಳೆಗರೆದವರು ಸಚಿವ ಸ್ಥಾನ ಕಳೆದುಕೊಂಡ ಶೋಭಾ ಕರಂದ್ಲಾಜೆ.

ರಾಜೀನಾಮೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಮತ್ತು ರೆಡ್ಡಿ ಸೇರಿದಂತೆ ಬಂಡಾಯ ಶಾಸಕರಿಗೆ ಎಸೆದಿರುವ ಸವಾಲಿದು. ನನ್ನ ರಾಜೀನಾಮೆಯಿಂದ ಒಳ್ಳೆಯದಾಗುವುದಾದರೆ ಅದಕ್ಕಿಂತ ಸಂತೋಷ ಸಂಗತಿ ಬೇರೆ ಏನಿದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಮೊದಲಿನಿಂದಲೂ ಸಮಾಜಸೇವೆಯಲ್ಲಿ ತೊಡಗಿದ್ದೆ. ಇನ್ನು ಮುಂದೆಯೂ ಸಮಾಜಸೇವೆ ಮಾಡುತ್ತೇನೆ. ಪಕ್ಷ ಹಾಗೂ ಸಂಘ ಪರಿವಾರ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 10, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ರಜೋಹು
ದಿನಾಂಕ: 11 Nov 2009 8:59 am
ನೀನು ಮಾಡಿರುವ ಹಗಲು ದರೋಡೆ ಮಾಡಿದ್ದು ಯಾರಿಗೆ ಗೊತ್ತಿಲ್ಲ, ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳ ಪೋಸ್ಟಗೆ ನೀನು ಮಾತು ಎಡ್ಡಿ ಏನೇನು ಹೊಲಗೇರಿ ಮಾಡಿದ್ರಿ. ಮತ್ತೆ ಅದರಲ್ಲಿ ಎಷ್ಟು ದುಡ್ಡು ತಿಂದಿರಿ ಅನ್ನೋದು ಕರ್ನಾಟಕದ ಐದೂವರೆ ಕೋಟಿ ಜನಗಳಿಗೆ ಗೊತ್ತು. ಮತ್ತೆ ನೀನು ಎಷ್ಟು ಸಚ ಅಂತ ಮಾತನಾಡ್ತ್ಹಿಯಲ್ಲ ನಿನ್ನ ಯಾವುದರಲ್ಲಿ ಹೊಡೆಯಬೇಕು.

ಇಂದ: ಶೋಬ
ದಿನಾಂಕ: 10 Nov 2009 9:56 pm
ವಾರ್ತಾ ಖಾತೆಯ ಸಚಿವರ ಕೆಲಸಾನ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ್ಲೇ ನೀನು ಮಾಡ್ತಿದ್ದೆ. ಆವಾಗಲೇ ಕೆಲವು ಪತ್ರಿಕೆಗಳು ಇದನ್ನ ಬರ್ದಿದ್ವು. ಈಯಮ್ಮ ಯಾಕೆ ಈ ಕೆಲಸ ಮಾಡ್ತಾವ್ಲೇ ಅಂತ. ೧೭ ತಿಂಗ್ಳು ಮಜಾ ಮಾಡ್ದೆಲ್ಲ ಅದನ್ನೇ ಸಾಧನೆ ಅನ್ಕಂಡು ನೀನೆ ಕೂತು ಉತ್ರ ಹುಡ್ಕೋ .. ನಿನ್ನ ಪ್ರಶ್ನೆ ಪ್ರಶ್ನೇನೆ ಅಲ್ಲ ಅನ್ನೋಕ್ಕೆ ಶುರುವಾಗುತ್ತೆ. ಆಗ ನೀನೆ ಹೇಳ್ತೀಯ, ತಪ್ಪು ನಂದಲ್ಲ ಬಿಜೆಪಿ ಸರ್ಕಾರದಲ್ಲಿ ಕೊಟ್ಟ ಕೆಲಸ ನಾನು ಸರ್ಯಾಗೆ ಮಾಡಿದ್ದೆ ಅಂತ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು