clear
clear
clear
clear
ಮುಖಪುಟ » ಸುದ್ದಿಜಾಲ » ಬೆಂಗಳೂರು ಡೈರಿ » ಪೂರ್ಣಪಾಠ
ನನ್ನ ತಪ್ಪಾದರೂ ಏನು ಹೇಳಿ ? ನ್ಯಾ. ದಿನಕರನ್

PD Dinakaran
ಬೆಂಗಳೂರು, ನ . 10 : ನಾನು ಮೌನವಾಗಿರುವುದು ಆರೋಪ ಒಪ್ಪಿಕೊಂಡಂತಲ್ಲ. ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ ? ನೀವೇ ನನ್ನ ರಕ್ಷಣೆಗೆ ಬಾರದಿದ್ದರೆ ನಾನೆಲ್ಲಿ ಹೋಗಬೇಕು ಎಂದು ನ್ಯಾಯಮೂರ್ತಿ ಪಿಡಿ ದಿನಕರನ್ ಅವರು ಭಾವುಕರಾಗಿ ಮಾತನಾಡಿದ್ದಾರೆ.

ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದ ವಕೀಲರ ಗುಂಪು ನ್ಯಾ. ಪಿಡಿ ದಿನಕರನ್ ಹಾಗೂ ನ್ಯಾ. ಮೋಹನ್ ಶಾಂತನಗೌಡರ್ ಅವರಿದ್ದ ವಿಭಾಗೀಯ ಪೀಠಕ್ಕೆ ನುಗ್ಗಿ ದಾಂಧಲೆ ನಡೆಸಿದಾಗ ಮುಖ್ಯ ನ್ಯಾ. ದಿನಕರನ್ ಈ ರೀತಿ ಪ್ರತಿಕ್ರಿಯಿಸಿದರು. ಪೀಠದಲ್ಲಿ ಕುಳಿತು ಕಲಾಪ ನಡೆಸದಂತೆ ವಕೀಲರು ದಿಕ್ಕಾರದ ಘೋಷಣೆ ಕೂಗುತ್ತಿದ್ದಾಗ ಎದ್ದು ನಿಂತು ಎರಡು ನಿಮಿಷ ಮಾತನಾಡಲು ತಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಆದರೂ ವಕೀಲರು ಘೋಷಣೆ ಕೂಗುತ್ತಲೇ ಇದ್ದರು. ಇದರ ನಡುವೆಯೂ ಮಾತನಾಡಿದ ಅವರು ನಾನು ನಿಮ್ಮ ಬೇಡಿಕೆ, ಭಾವನೆಗಳನ್ನು ಗೌರವಿಸುತ್ತೇನೆ. ಸಂವಿಧಾನಾತ್ಮಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಅಡ್ಡಿ ಬಂದರು ಕರ್ತವ್ಯ ನಿಭಾಯಿಸಲೇಬೇಕು. ಅದು ನನ್ನ ಕರ್ತವ್ಯ ಎಂದು ದಿನಕರನ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 10, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪ್ರಮೋದ್
ದಿನಾಂಕ: 11 Nov 2009 12:28 am
ಈತ ಮಹಾನ್ ಕನ್ನಡ ವಿರೋಧಿ, ಕನ್ನಡ ಹೋರಾಟಗಾರರನ್ನು ಮತ್ತ ಹಾಕಲು ಕೊಟ್ಟ ತೀರ್ಪುಗಳೇ ಸಾಕ್ಷಿ. ಅತ್ತ ತಮಿಳರಿಗೂ ಮೋಸ ಮಾಡಿದ್ದಾನೆ. ಇಷ್ಟೊಂದು ಬ್ರಷ್ಟಚಾರದ ಅಪವಾದ ಇರುವ ಈತನಿಗೆ ನ್ಯಾಯಮೂರ್ತಿ ಸ್ಥಾನದಲ್ಲಿ ಮೂಂದೂವರೆಯಲು ಯಾವುದೇ ನೈತಿಕ ಹಕ್ಕಿಲ್ಲ.

ಇಂದ: ಸಂಪತ್ ಸಕಲೇಶಪುರ
ದಿನಾಂಕ: 10 Nov 2009 9:40 pm
ಇಸ್ಟೆಲ್ಲಾ ಹಗರಣ ಆದಮೇಲೆ ದಿನಕರನ್ ಕರ್ತವ್ಯದಲ್ಲಿ ಮುಂದುವರೆಯಲು ಕಷ್ಟ ವಾಗಬಹುದು.(ಮುಜಗರ) ನ್ವ್ರುತ್ತಿಯಾಗುವುದು ಒಳಿತು. ಮತ್ತು ಊರಿಗೆ ಹೋಗಿ ನೇಗಿಲು ಹಿಡಿಯುವುದು ಸೂಕ್ತ.ಬರುವ ಕೈ ತುಂಬಾ ನಿವುತ್ತಿ ವೇತನದಲ್ಲಿ ತಾನು ತಿಂದು ಊರಿನವರಿಗೂ ಸಹಾಯ ಮಾಡಿ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡಂತೆ ಆಗುತ್ತದೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು