clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಮುಂದಿಟ್ಟ ಹೆಜ್ಜೆ ಹಿಂದಿಡಲೊಲ್ಲದ ರೆಡ್ಡಿ ಬ್ರದರ್ಸ್

No change in Reddy brothers stand
ಬೆಂಗಳೂರು, ನ.7: ಸತತ ಹದಿಮೂರು ದಿನಗಳು ಕಳೆದರೂ ರಾಜ್ಯದಲ್ಲಿ ಉಂಟಾಗಿರುವ ಬಿಜೆಪಿ ಬಿಕ್ಕಟ್ಟು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾಗಲೇಬೇಕು ಎಂದು ಪಟ್ಟುಹಿಡಿದಿರುವ ರೆಡ್ಡಿ ಸಹೋದರರು ತಮ್ಮ ನಿಲುವನ್ನು ಸಡಿಲಿಸಿಲ್ಲ. ವರಿಷ್ಠರನ್ನು ಭೇಟಿ ಮಾಡಲು ಇನ್ನು ದೆಹಲಿಗೆ ತೆರಳುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜಿ ಜನಾರ್ದನರೆಡ್ಡಿ ಹೇಳಿದ್ದಾರೆ.

ಕಂದಾಯ ಸಚಿವ ಕರುಣಾಕರರೆಡ್ಡಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ರಾಜ್ಯದ ಹಿತದೃಷ್ಟಿಯಿಂದ ಹಾಗೂ ಬಿಜೆಪಿ ಪಕ್ಷದ ಉಳಿವಿಗಾಗಿ ನಾಯಕತ್ವ ಬದಲಾಗಲೇ ಬೇಕು ಎಂದು ಅದೇ ರಾಗ ಅದೇ ಹಾಡು ಹಾಡಿದರು. ಪಕ್ಷದ ವರಿಷ್ಠರಿಗೆ ಎಲ್ಲವನ್ನೂ ಹೇಳಿದ್ದೇನೆ. ಎರಡು ದಿನಗಳಲ್ಲಿ ಒಳ್ಳೆಯ ನಿರ್ಧಾರ ಹೊರ ಬೀಳಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಒಳ್ಳೆಯ ಕೆಲಸ ಮಾಡಲು ಸರ್ಕಾರದ ಯಜಮಾನರು ಅಡ್ಡಗಾಲು ಹಾಕಿದರು. ಬಳ್ಳಾರಿ ಸಚಿವರಿಗೆ ಒಳ್ಳೆಯ ಹೆಸರು ಬರುವುದನ್ನು ಯಜಮಾನ ಸಹಿಸಲಿಲ್ಲ ಎಂಬ ಹಳೆಯ ಆರೋಪವನ್ನು ಜನಾರ್ದನರೆಡ್ಡಿ ಮಾಡಿದರು. ನಮ್ಮ ನಿಲುವನ್ನು ತಾಯಿ ಸುಷ್ಮಾ ಸ್ವರಾಜ್ ಅವರಿಗೆ ಹಾಗೂ ಹೈಕಮಾಂಡ್ ಗೆ ವಿವರಿಸಲಾಗಿದೆ ಎಂದರು.

ಶೆಟ್ಟರ್ ಭೇಟಿ ಮಾಡಿದ ರೆಡ್ಡಿ ಬ್ರದರ್ಸ್
ಇಂದು ಬೆಂಗಳೂರಿಗೆ ಆಗಮಿಸಿದ ಜರ್ನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಕರುಣಾಕರರೆಡ್ಡಿ ಸ್ಪಷ್ಟಪಡಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದರು. ರೆಡ್ಡಿ ಸಹೋದರರು ಮತ್ತು ಶೆಟ್ಟರ್ ಅವರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆಯಲಾಗಿದೆ. ನಾಯಕತ್ವ ಬದಲಾವಣೆ ಬಿಟ್ಟು ಮಿಕ್ಕೆಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂಬ ಬೇಡಿಕೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 7, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ದುರುಗಪ್ಪ ಹರಪನಹಳ್ಳಿ
ದಿನಾಂಕ: 08 Nov 2009 11:09 am
ಪ್ರಿಯ ಸಚಿವರೇ ? ಎಲ್ಲಿದ್ದಿರಾ ? ನಿಮ್ಮ ಕ್ಷೇತ್ರವನ್ನು ಮರೆತೀರಾ ? ಮತದಾರರಿಗೆ ದ್ರೊಹ ಬಗೆಯದಿರೀ....

ಇಂದ: ಅಪರಿಚಿತ
ದಿನಾಂಕ: 08 Nov 2009 11:07 am
ರೆಡ್ಡಿಗಳು ಒಳ್ಳೆ ಹಳೆ ಪಿಕ್ಚರ್ ಕೇಡಿಗಳ ಥರ ಕಾಣ್ತಾ ಇದಾರೆ,ಈ ಹೊತ್ನಲ್ಲಿ ಅಣ್ಣಾವ್ರು ಬೇರೆ ಇಲ್ಲ, ನಮ್ ಅಂಬರೀಸ್ಗೆ ಪಾಪ ವಯಸ್ಸಾಗಿದೆ ಇಲ್ಲ ಅಂದಿದ್ರೆ ಇಷ್ತೊಥ್ಗೆ ಚಕ್ರವ್ಯೂಹ ಪಿಕ್ಚರ್ಅಲ್ಲಿ ಮಿಸಿನ್ ಗನ್ ತಗಂಡು ಕೇಡಿಗಳನ್ನೆಲ್ಲ ಡಗ ಡಗ ಅಂತ ಒಡೆದು ಸಾಯಿಸ್ದಂಗೆ ಸಾಯಿಸ್ಬಿಡ್ತಾ ಇದ್ದ, ಇವರೆಲ್ಲ ಯಾವ್ ಲೆಕ್ಕ ನಮ್ ಅಂಬರೀಸ್ಅಣ್ಣಂಗೆ. ಆದರು ನಮ್ ಯಡಿಯೂರಪ್ಪ ಒಂದಪ ನಮ್ ಅಂಬರೀಸ್ಗೆ ಒಂದಪ ಕೇಳದೆ ಒಳ್ಳೆದೆನಪ್ಪ ಹೆಲ್ಪ್ ಮಾಡುದ್ರು ಮಾಡ್ಬೋದು. ಓಗ್ಲಿ ನಮ್ ವಿಷ್ಣುನಾದ್ರು ಕೇಳಿದ್ರೆ ಎಂಗೆ ಅಂತ? ಯೇನೋಪ ತಿಲ್ದವ್ರು ಯಾರಾನ ಇದ್ರೆ ಒಂಚೂರು ಯೋಚನೆ ಮಡಿ ಅದೇನೋ ಮಾಡ್ಬುಡಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು