clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ರೆಡ್ಡಿ, ಯಡಿಯೂರಪ್ಪ ಇಬ್ಬರದೂ ಅದೇ ವಿಶ್ವಾಸ!

CM says crisis resolved, Reddys refuse to budge
ಬೆಂಗಳೂರು, ನ.7: ಹೈದರಾಬಾದ್ ನಲ್ಲಿರುವ ರೆಡ್ಡಿ ಬಣದ ಶಾಸಕರ ಸಭೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬೇಡಿಕೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಮುಂದಿನ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಜನಾರ್ದನರೆಡ್ಡಿ ಅವರಿಗೆ ರೆಡ್ಡಿ ಬಣದ ಶಾಸಕರು ನೀಡಿದ್ದಾರೆ.

ಭಿನ್ನಮತೀಯ ಶಾಸಕರು ಇನ್ನೂ ಎರಡು ದಿನ ಹೈದರಾಬಾದ್ ನಲ್ಲೇ ಉಳಿಯಲಿದ್ದು, ಬಿಜೆಪಿ ವರಿಷ್ಠರು ತಮ್ಮ ಪರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ತಮ್ಮ ಬೆಂಬಲಿಗರಿಗೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇ ಬೇಕು ಎಂಬ ದೃಢ ನಿಲುವಿನಲ್ಲಿ ಜನಾರ್ದನ ರೆಡ್ಡಿ ಇದ್ದಾರೆ.

ರಾಜ್ಯದಲ್ಲಿ ಬಿಜೆಪಿ ಭಿನ್ನಮತ ಇನ್ನೂ ಬಗೆಹರಿದಿಲ್ಲ. ತಮ್ಮ ಬೆಂಬಲಿಗ ಶಾಸಕರ ಅಭಿಪ್ರಯ ಸಂಗ್ರಹಿಸಲಾಗಿದೆ. ನಾಯಕತ್ವ ಬದಲಾವಣೆ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶುಕ್ರವಾರ ಮಧ್ಯರಾತ್ರಿ ಹೈದರಾಬಾದ್ ನಲ್ಲಿ ಜನಾರ್ದನರೆಡ್ಡಿ ಹೇಳಿದ್ದಾರೆ.

ಶನಿವಾರ ಜನಾರ್ದನರೆಡ್ಡಿ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದು ಕಂದಾಯ ಸಚಿವ ಕರುಣಾಕರರೆಡ್ಡಿ ಜತೆ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು ಭಾನುವಾರದಿಂದ ನೆರೆ ಸಂತ್ರಸ್ತರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಭಿನ್ನಮತದ ಸಮಸ್ಯೆ ಬಗೆಹರಿದಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 7, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಅಪರಿಚಿತ
ದಿನಾಂಕ: 08 Nov 2009 11:10 am
ರೆಡ್ಡಿಗಳು ಒಳ್ಳೆ ಹಳೆ ಪಿಕ್ಚರ್ ಕೇಡಿಗಳ ಥರ ಕಾಣ್ತಾ ಇದಾರೆ,ಈ ಹೊತ್ನಲ್ಲಿ ಅಣ್ಣಾವ್ರು ಬೇರೆ ಇಲ್ಲ, ನಮ್ ಅಂಬರೀಸ್ಗೆ ಪಾಪ ವಯಸ್ಸಾಗಿದೆ ಇಲ್ಲ ಅಂದಿದ್ರೆ ಇಷ್ತೊಥ್ಗೆ ಚಕ್ರವ್ಯೂಹ ಪಿಕ್ಚರ್ಅಲ್ಲಿ ಮಿಸಿನ್ ಗನ್ ತಗಂಡು ಕೇಡಿಗಳನ್ನೆಲ್ಲ ಡಗ ಡಗ ಅಂತ ಒಡೆದು ಸಾಯಿಸ್ದಂಗೆ ಸಾಯಿಸ್ಬಿಡ್ತಾ ಇದ್ದ, ಇವರೆಲ್ಲ ಯಾವ್ ಲೆಕ್ಕ ನಮ್ ಅಂಬರೀಸ್ಅಣ್ಣಂಗೆ. ಆದರು ನಮ್ ಯಡಿಯೂರಪ್ಪ ಒಂದಪ ನಮ್ ಅಂಬರೀಸ್ಗೆ ಒಂದಪ ಕೇಳದೆ ಒಳ್ಳೆದೆನಪ್ಪ ಹೆಲ್ಪ್ ಮಾಡುದ್ರು ಮಾಡ್ಬೋದು. ಓಗ್ಲಿ ನಮ್ ವಿಷ್ಣುನಾದ್ರು ಕೇಳಿದ್ರೆ ಎಂಗೆ ಅಂತ? ಯೇನೋಪ ತಿಲ್ದವ್ರು ಯಾರಾನ ಇದ್ರೆ ಒಂಚೂರು ಯೋಚನೆ ಮಡಿ ಅದೇನೋ ಮಾಡ್ಬುಡಿ.

ಇಂದ: ಸಿದ್ದು
ದಿನಾಂಕ: 07 Nov 2009 1:53 pm
ರೆಡ್ಡಿಗಳು ಮತ್ತು ಅವರ ಬೆಂಬಲಿಗರನ್ನು ಬಿ ಜೆ ಪಿ ಯಿಂದ ಹೊರ ಹಾಕಿ ಚುನಾವಣೆಗೆ ಹೋಗಿ ಚುನಾವಣೆ ಸೋತು ವಿರೋದ ಪಕ್ಷದಲ್ಲಿ ಕೂತರು ಪರ್ವಗಿಲ್ಲ್ ರೆಡ್ಡಿ ಮತ್ತು ಅವರ ಬೆಂಬಲಿಗರು ಬಿ ಜೆ ಪಿ ಗೆ ಬೇಡ ........ಸತ್ತರು ಗಂಡಸರಾಗಿ ಸಯರಿ ಹೆದಿಗಳಗಿ ಅಲ್ಲ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು