clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ನಾಯಕತ್ವ ಬದಲಾದ್ರೆ, ನಮ್ಮ ನಿರ್ಧಾರ ಚೇಂಜ್

Umesh Katti
ಬೆಂಗಳೂರು, ನ. 6 : ಒತ್ತಡಕ್ಕೆ ಮಣಿದು ರಾಜ್ಯ ನಾಯಕತ್ವ ಬದಲಿಸುವ ನಿರ್ಧಾರಕ್ಕೆ ಹೈಕಮಾಂಡ್ ಮುಂದಾದರೆ ನಾವು ನಮ್ಮ ಮುಂದಿನ ಹೆಜ್ಜೆಯ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಯಡಿಯೂರಪ್ಪ ಬಣದ ಮುಖಂಡ ಸಚಿವ ಉಮೇಶ್ ಕತ್ತಿ ಅವರ ನೇರ ನುಡಿ. ಇನ್ನೊಂದಡೆ ಯಡಿಯೂರಪ್ಪ ಅವರ ನಾಯಕತ್ವ ಒಪ್ಪಲು ಸಾಧ್ಯವೇ ಇಲ್ಲ ಎಂದು ರೆಡ್ಡಿ ಬಣದ ರೇಣುಕಾಚಾರ್ಯ ರಾಜೀನಾಮೆ ನೀಡಲು ದೆಹಲಿಗೆ ತೆರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಸಿಎಂ ನಿವಾಸದಲ್ಲಿ ಸಚಿವರಾದ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ ನಿರಾಣಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಉಮೇಶ್ ಕತ್ತಿ ಮಾತನಾಡುತ್ತಿದ್ದರು. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರಕಾರ ಸುಭದ್ರವಾಗಿದೆ. ನಾಯಕತ್ವ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಪಕ್ಷದ ಹೈಕಮಾಂಡ್ ಸ್ಪಷ್ಟಪಡಿಸಿದೆ. ಭಿನ್ನರ ಬೇಡಿಕೆಗಳಿಗೆ ಸ್ಪಂದಿಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಷ್ಟಾದರೂ ಕೆಲವರು ತಮ್ಮ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ವೇಳೆ ಒತ್ತಡ ತಂತ್ರಕ್ಕೆ ಮಣಿದು ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ನಿರ್ಧಾರ ಕೈಗೊಂಡರೆ ನಾವು ನಮ್ಮ ನಿರ್ಧಾರದ ಬಗ್ಗೆ ಚಿಂತನೆ ನಡೆಸುವುದು ಖಚಿತ ಎಂದರು. ಈ ಮಧ್ಯೆ ರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಜಗದೀಶ್ ಮೆಟಗುಡ್ಡ, ಸುರೇಶ ಮಾಶ್ಯಾಳ ಅವರು ನಮ್ಮ ನಿಷ್ಠೆ ಯಡಿಯೂರಪ್ಪ ಅವರಿಗೆ, ನಾವು ರೆಸಾರ್ಟ್ ನಲ್ಲಿ ತಂಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅತ್ತ ಹೈದರಾಬಾದಿನ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ರೇಣುಕಾಚಾರ್ಯ ಮತ್ತವರ ಗ್ಯಾಂಗ್ 51 ಮಂದಿ ಶಾಸಕರು ನೀಡಿರುವ ರಾಜೀನಾಮೆ ಪತ್ರವನ್ನು ಮಾಧ್ಯಮಕ್ಕೆ ಪ್ರದರ್ಶಿಸಿ, ನಮ್ಮ ನಿರ್ಧಝಾರ ಅಚಲ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾಯಕತ್ವ ಬದಲಾಗಲೇಬೇಕು. ಸಂಜೆವರಿಗೂ ಕಾದು ನಂತರ ದೆಹಲಿಗೆ ತೆರಳಿ ರಾಜೀನಾಮೆ ನೀಡುವುದಾಗಿ ರೇಣುಕಾಚಾರ್ಯ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 6, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: gubbi
ದಿನಾಂಕ: 07 Nov 2009 12:05 pm
ಇಲ್ಲ ಇಲ್ಲ

ಇಂದ: salahe
ದಿನಾಂಕ: 07 Nov 2009 11:51 am
ಒಂದು ಸಲಹೆ, ಬಿಜೆಪಿ ಗೆ ವೋಟು ಮಾಡಿದವರು, ತಮ್ಮ ಮನೆಯಲ್ಲಿ ಇರುವ ಹಳೆ ಸವೆದು ಹೋದ ಒಂದು ಜೊತೆ ಚಪ್ಪಲಿಯನ್ನು ಹುಡುಕಿ ತೆಗೆದಿಡಿ, ನಾಳೆ ಮತ್ತೆ ವೋಟು ಕೆಳಕೆ ಬರತ್ತರಲ್ಲ ಆವಾಗ ಬಹುಮಾನವಾಗಿ ಅವರಿಗೆ ಕೊಡಿ, ಸಿಟ್ಟಿದ್ದರೆ ಅದರಲ್ಲೇ ಎರಡು ಹಾಕಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು