clear
clear
clear
clear
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ಡಿಫೆನ್ಸ್ ಕಾಲೇಜಿನ ಮೇಲೆ ಲಷ್ಕರ್ ಗುರಿ

ವಾಷಿಂಗ್ ಟನ್, ನ. 4 : ಭಾರತದ ರಾಷ್ಟ್ರೀಯ ಡಿಫೆನ್ಸ್ ಕಾಲೇಜಿನ ಮೇಲೆ ದಾಳಿ ನಡೆಸಲು ಲಷ್ಕರ್ ಇ ತೊಯ್ಬಾ ಸಂಘಟನೆ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಬಯಲುಗೊಳಿಸಿದೆ.

ಕಳೆದ ತಿಂಗಳ ಅಮೆರಿಕ ನಿವಾಸಿ ಡೆವಿಡ್ ಕೋಲ್ ಮನ್ ಹೆಡ್ಲಿ ಮತ್ತು ಪಾಕಿಸ್ತಾನ ಮೂಲದ ಕೆನಡಾ ನಿವಾಸಿ ತವಾಹರ್ ಹುಸೇನ್ ರಾಣಾ ಅವರನ್ನು ಬಂಧಿಸಿದ್ದ ಎಫ್ ಬಿಐ, ನಂತರ ನಡೆಸಿದ ವಿಚಾರಣೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ. ರಾಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ರಾಣಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿರುವ ಸಂಗತಿಯನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ರಾಣಾ ಉಗ್ರರೊಂದಿಗೆ ನಂಟಿರುವುದು ದೃಢಪಟ್ಟರೆ, ಕನಿಷ್ಠ 30 ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆವಿಡ್ ಹೆಡ್ಲಿ ಮತ್ತು ರಾಣಾ ಇಬ್ಬರೂ ಬಾಲ್ಯ ಸ್ನೇಹಿತರು. ಅಮೆರಿಕದ ನಿವಾಸಿಯಾಗಿರುವ ಹೆಡ್ಲಿ ರಾಣಾ ಜೊತೆ ಸೇರಿಕೊಂಡು ಭಾರತ ಮತ್ತು ಡೆನ್ಮಾರ್ಕ್ ನಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿರುವುದು ಈಗಾಗಲೇ ಪತ್ತೆ ಹಚ್ಚಲಾಗಿದೆ. ಭಾರತದ ರಕ್ಷಣಾ ಕಾಲೇಜು ಮತ್ತು ಡೆನ್ಮಾರ್ಕ್ ನಲ್ಲಿ ಸ್ಫೋಟ ಕೃತ್ಯ ನಡೆಸುವವರಿದ್ದರು. ಈ ವಿಷಯವನ್ನು ಡೆನ್ಮಾರ್ಕ್ ನ ರಾಷ್ಟ್ರೀಯ ಪತ್ರಿಕೆಯೊಂದು ಈ ಹಿಂದೆ ವರದಿ ಮಾಡಿತ್ತು. ಇದರ ಜಾಲ ಹಿಡಿದ ಅಮೆರಿಕದ ಎಫ್ ಬಿಐ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

(ಏಜನ್ಸೀಸ್)

ನವೆಂಬರ್ 4, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ವೇಣು
ದಿನಾಂಕ: 05 Nov 2009 3:08 pm
ನಮ್ಮಲ್ಲೂ ನ್ಯಾoಗ ಇದೆ , ಆದರೆ ಅದು ಶಿಕ್ಷೆ ಕೊಡುದು ಕೇವಲ ಬಡ ಹಿಂದುಗಳಿಗೆ ಮಾತ್ರ, ತಪ್ಪು ಮಡಿದ ಸಾಬರಿಗೆ ಶ್ರೀ ರಕ್ಷೆ ............. ಇದು ನಮ್ಮ ದೇಶ

ಇಂದ: ರಾಮ್ ಶರ್ಮ
ದಿನಾಂಕ: 04 Nov 2009 9:06 pm
ನೋಡ್ರಿ ಇದೆ ನಮಗೂ ಅಮೇರಿಕನ್ನರಿಗೂ ಇರೋ ವ್ಯತ್ಯಾಸ. ಅಲ್ಲಿ 'ಭಯೋತ್ಪಾದನೆ ಜೊತೆ ನಂಟು ಇದ್ದಾರೆ' ೩೦ ವರ್ಷ ಸಜೆ. ಭವ್ಯ ಭಾರತದಲ್ಲಿ? ೩ ತಿಂಗಳು! ನಂತರ ಇವರೇ ಅವನನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ!! ಸಾಬರಿಗೆ ನಮ್ಮ ದೇಶದಲ್ಲಿ ರಾಜ ಮರ್ಯಾದೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು