clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ರೆಡ್ಡಿಗಳಿಂದ ಪ್ರಾದೇಶಿಕ ಪಕ್ಷ ಸ್ಥಾಪನೆ ?

Janardhan Reddy
ಬೆಂಗಳೂರು, ನ. 4 : ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಬೇಕು ಎಂದು ಕಂಕಣ ತೊಟ್ಟಿರುವ ರೆಡ್ಡಿ ಸಹೋದರರು ಒಂದು ವೇಳೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿಯೂ ಒಪ್ಪದಿದ್ದರೆ ಅವರು ತುಳಿಯುವ ಹಾದಿಯ ಬಗ್ಗೆ ಭಾರಿ ಕುತೂಹಲವಂತೂ ಹುಟ್ಟಿಸಿದೆ.

ಒಂದು ಮೂಲಗಳ ಪ್ರಕಾರ ರೆಡ್ಡಿಗಳು ಪರ್ಯಾಯ ಸರಕಾರ ರಚನೆ ಯತ್ನ ವಿಫಲವಾಗಿ ಚುನಾವಣೆ ಎದುರಿಸುವ ಸ್ಥಿತಿ ನಿರ್ಮಾಣವಾದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟುಹಾಕುವ ಆಲೋಚನೆಯಲ್ಲಿ ರೆಡ್ಡಿ ಸಹೋದರರು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಜನಾರ್ದನರೆಡ್ಡಿ ತಮ್ಮ ಪಟ್ಟನ್ನು ಬಿಡುತ್ತಿಲ್ಲ. ನಾಯಕತ್ವ ಬದಲಾವಣೆಯೇ ನಮ್ಮ ಏಕೈಕ ಉದ್ದೇಶ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮಧ್ಯೆ ರೆಡ್ಡಿಗಳಿಗೆ ಆಪ್ತರು ಎನ್ನಲಾದ ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ಈಗಾಗಲೇ ಎರಡು ಸಾರಿ ನಡೆಸಿದ ಮಾತುಕತೆ ವಿಫಲವಾಗಿದೆ. ಇಂದು ಮೂರನೇ ಸುತ್ತಿನ ಮಾತುಕತೆ ಆರಂಭವಾಗಿದೆ.

ತಮ್ಮ ಬೇಡಿಕೆ ಒಪ್ಪದೆ ಬಿಕ್ಕಟ್ಟು ಉಲ್ಬಣಿಸಿ ಚುನಾವಣೆ ಎದುರಾದರೆ ಪ್ರಾದೇಶಿಕ ಪಕ್ಷ ಕಟ್ಟುವುದು ರೆಡ್ಡಿಗಳ ಲೆಕ್ಕಚಾರ. ಇದಕ್ಕಾಗಿ ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಗದಗ, ಬಿಜಾಪುರ ಹಾಗೂ ಚಿತ್ರದುರ್ಗಗಳನ್ನು ಕೇಂದ್ರಕರಿಸಿ ಪ್ರಾದೇಶಿಕ ಪಕ್ಷ ಸ್ಥಾಪಿಸಿದರೆ ಹೆಚ್ಚು ಸ್ಥಾನ ಗಳಿಸಬಹುದು ಎನ್ನುವುದು ರೆಡ್ಡಿ ಉದ್ದೇಶ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 4, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: jay
ದಿನಾಂಕ: 07 Nov 2009 12:12 pm
ಈ ತೆಲುಗು ರಡ್ಡಿಗಳಿಗೆ ಚುನಾವಣೆಯಲ್ಲಿ ಮೂರು ಒಟುಗಳೂ ಬರಲ್ಲ ಖಂಡಿತ. ಕನ್ನಡಿಗರು ಇವರನ್ನ ಮೂಲೆ ಕಾಣಿಸ್ತಾರೆ.

ಇಂದ: ರಾಘವೇಂದ್ರ
ದಿನಾಂಕ: 06 Nov 2009 3:07 pm
ಯಡಿಯೂರಪ್ಪ ಒಬ್ಬ ಸ್ವಾರ್ಥಿ ರೆಡ್ಡಿಗಳು ಮತ್ತು ಎಲ್ಲಾ ಗಣಿ ಧಣಿಗಳು ತಮ್ಮ ಸ್ವಂತ ಹಣದಲ್ಲಿ ಮನೆ ಹಾಗು ಸಂತ್ರಸ್ಥರಿಗೆ ನೆರವು ನೀಡಲು ಮುಂದಾದಾಗ ಮಾನ್ಯ ಮಕ್ಯಮಂತ್ರಿಗಳು ತಮ್ಮ ಸ್ವಾರ್ಥ ರಾಜಕೀಯ ರೆಡ್ಡಿ ಗಳು ಎಲ್ಲಿ ಬೆಳೆಯುತಾರೋ ಎಂದು ಅದಕ್ಕೆ ಅಡ್ಡಿಪಡಿಸಲು ಹೋಗಿ ಈಗ ತಮ್ಮ ಬಲೆಯಲ್ಲಿ ತಾವೇ ಬಿದ್ದಿದ್ದಾರೆ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು