clear
clear
clear
clear
ಮುಖಪುಟ » ಸುದ್ದಿಜಾಲ » ಜಿಲ್ಲಾ ಸುದ್ದಿಗಳು » ಪೂರ್ಣಪಾಠ
ಮತಾಂತರ,ಭಜರಂಗದಳ ದಾಳಿ

ಮಂಗಳೂರು ನ 4: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ ಇರುವ ಪಿ ಸಿ ಕೋರ್ಟ್ ಅಪಾರ್ಟ್ಮೆಂಟ್ ನಲ್ಲಿ ಮತಾಂತರ ನಡೆಯುತ್ತಿದೆ ಎಂಬ ಆರೋಪದ ಮೇಲೆ ಮಂಗಳವಾರ (ನ.3) ರಾತ್ರಿ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. 20ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿ ಆಶಾಲತಾ ಮತ್ತು ಇಪ್ಸನ್ ಎಂಬವರು ಗುಪ್ತವಾಗಿ ಮತಾಂತರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಆಶಾಲತಾ ಎನ್ನುವವರು ಕೆಎಂಸಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದು ತಮಗೆ ಪರಿಚಯವಾದವರನ್ನು ಮನೆಗೆ ಕರೆದುಕೊಂಡು ಬಂದು ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. 'ನಮ್ಮ ದೇವರನ್ನು ನಂಬಿದರೆ ನಿಮಗೆ ಒಳ್ಳೆದಾಗುತ್ತದೆ' ಎಂದು ಅಮಾಯಕರನ್ನು ಪುಸಲಾಯಿಸಿ ಮತಾಂತರ ನಡೆಸುತ್ತಿದ್ದಾರೆಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಮಾಹಿತಿ ತಿಳಿದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.


(ಏಜೆನ್ಸೀಸ್)

ನವೆಂಬರ್ 4, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: pcj
ದಿನಾಂಕ: 04 Nov 2009 3:50 pm
can any say that conversion is not taking there? ........... u cant bcoz it is there............ so dnt give comments like ಬುಧಿ ಜೀವಿ ok 1st know wot is wot? then only u will realise the fact

ಇಂದ: ಮಂಗಳೂರನವ
ದಿನಾಂಕ: 04 Nov 2009 11:48 am
ದಕ್ಷಿಣ ಕನ್ನಡದ ರಸ್ತೆಗಳ ದುರವಸ್ತೆ, ವಿದುತ್ ಅಬಾವ ನೀರಿನ ಸಮ್ಯಸೆ, SEZ ಗೆ ಬಲವಂತದ ಭೂ ಸ್ವಾದಿನತೆ, MRPL ನಿಂದ ಸ್ತಳಿಯರಿಗೆ ಉದ್ಯೋಗ ಕೊಡದೆ ೩ ನೆ ಹಂತದ ವಿಸ್ತರಣೆ, ಅದಿರು ಲಾರಿಗಳ ಅಟ್ಟಹಾಸ, ಇದರ ನಡುವೆ ಮೋಹನ್ ಕುಮಾರ ನಂತ ವಿಕ್ರತ ಕಾಮಿಗಳಿಗೆ ಬಲಿಯಾದ ಹೆಣ್ಣುಮಕ್ಕಳ ಕುಟೂಂಬದವರಿಗೆ ಸ್ಪಂದನೆ ಅಯ್ಯೋ RAMA RAMA ಇಂತಹ ನೂರಾರು ಸಮಸೆ ಗಳನ್ನೂ ಬಿಟ್ಟು ಇ ಭಜರಂಗದಳದವರು .................!

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು