clear
clear
clear
clear
ಮುಖಪುಟ » ಸುದ್ದಿಜಾಲ » ಜಿಲ್ಲಾ ಸುದ್ದಿಗಳು » ಪೂರ್ಣಪಾಠ
ಭಟ್ಕಳಕ್ಕೂ ಕಾಲಿಟ್ಟ ಬುರ್ಖಾ ವಿವಾದ

Burqa ban in Bhatkal
ಭಟ್ಕಳ, ನ. 3 : ಬುರ್ಖಾ ಧರಿಸಿ ಕಾಲೇಜಿಗೆ ಬರುವ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಿವಾದ ಉಂಟಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭಟ್ಕಳ ಸರಕಾರಿ ಕಾಲೇಜಿನಲ್ಲೂ ಈ ವಿವಾದ ತಲೆದೋರಿದೆ.

ಭಟ್ಕಳದಿಂದ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಸರಕಾರಿ ಪದವಿ ಕಾಲೇಜು ಪುರಸಭೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎರಡು ವಾರಗಳಿಂದ ಕೆಲವು ವಿದ್ಯಾರ್ಥಿಗಳು, ಬುರ್ಖಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಬಾಗಿಲು ಎದುರು ತಡೆದು ಬುರ್ಖಾ ಧರಿಸದಂತೆ ಒತ್ತಾಯಿಸುತ್ತಿರುವ ವಿಷಯವನ್ನು ವಿದ್ಯಾರ್ಥಿನಿಯರು ಪ್ರಾಚಾರ್ಯರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶಾಸಕ ಜೆಡಿ ನಾಯ್ಕರನ್ನು ಸಂಪರ್ಕಿಸಿದಾಗ, ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿ ಕಾಲೇಜಿಗೆ ಬರದಂತೆ ಎಚ್ಚರಿಕೆ ನೀಡಿದ ಬಗ್ಗೆ ದೂರೊಂದು ಬಂದಿದೆ. ಈ ವಿದ್ಯಾರ್ಥಿಗಳನ್ನು ಕರೆಸಿ ಕ್ರಮ ಕೈಗೊಳ್ಳುವಂತೆ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ತಪ್ಪಿತಸ್ಥ ವಿದ್ಯಾರ್ಥಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ನಾಯ್ಕ ಹೇಳಿದರು. ಬಂಟ್ವಾಳದ ಎಸ್ ವಿಎಸ್ ಕಾಲೇಜಿನಲ್ಲೂ ಬುರ್ಖಾ ವಿವಾದ ಸಾಕಷ್ಟು ಗೊಂದಲ ಸೃಷ್ಟಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಅಬ್ದುಲ್ ಪಾಷ ಮೈಸೂರ್
ದಿನಾಂಕ: 04 Nov 2009 11:05 am
ನಮ್ಮ ಸಮಾಜ ಬಂದವರು ಕೊಳಕು ಮನಸಿನಿಂದ ಯಾವಾಗ ಸರಿಯಗುತರೋ ದೇವರೇ ಬಲ್ಲ ಶಾಂತಿ ನೆಮ್ಮದಿ ಇಲ್ಲ

ಇಂದ: ವೈಶಾಲಿ ಮಂಗಳೂರು
ದಿನಾಂಕ: 04 Nov 2009 10:20 am
ಮೋಹನ್ ಕುಮಾರನಂತ ಪುಂಡ ಕಾಮ ಪಿಶಾಚಿಗಳಿಂದ ರಕ್ಷಣೆ ಪಡೆಯಲು ನಮ್ಮ ಧರ್ಮದ ಯುವತಿಯರಿಗೂ ಬುರ್ಖಾ ಅತೀ ಆವಷ್ಯವಾಗಿದೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು