clear
clear
clear
clear
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ವಂದೇ ಮಾತರಂ ವಿರುದ್ಧ ಫತ್ವಾ!
Read  In English

JeU Hind fatwa against Vande Mataram
ದಿಯೋಬಂದ್(ಉತ್ತರ ಪ್ರದೇಶ), ನ. 3 : ಇಸ್ಲಾಂ ಧರ್ಮಕ್ಕೆ ವಿರೋಧಿ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಗೀತೆ ವಂದೇ ಮಾತರಂ ವಿರುದ್ಧ ಇಸ್ಲಾಂ ಸಂಘಟನೆಗಳು ಇಂದು ಫತ್ವಾ ಹೊರಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜಮಾತೆ ಇ ಉಲೇಮಾ ಹಿಂದ್ ಸಂಘಟನೆಯ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸುವ ಸಾಲುಗಳಿವೆ. ಆ ಸಾಲುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿವೆ. ಮುಸ್ಲಿಮರು ಯಾವುದೇ ಕಾರಣಕ್ಕೂ ವಂದೇಮಾತರಂ ಗೀತೆಯನ್ನು ಹಾಡಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುವ ರಾಜ್ಯಸಭಾ ಸದಸ್ಯ ಮಹ್ಮದ್ ಮದಾನಿ ಕೂಡಾ ಫತ್ವಾ ಪರ ದನಿಗೂಡಿಸಿದ್ದು, ಇಸ್ಲಾಂ ಧರ್ಮಕ್ಕೆ ವಿರೋಧಿಯಾಗಿರುವ ಸಾಲುಗಳನ್ನು ಕೈಬಿಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇಂದು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ವಿವಿಧ ಭಾಗದ ಮುಸ್ಲಿಂ ಮೌಲ್ವಿಗಳು ಭಾಗವಹಿಸಿದ್ದಾರೆ. ಭಯೋತ್ಪಾದನೆ ಮತ್ತಿತರ ವಿಷಯಗಳ ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆ ಗೃಹ ಸಚಿವ ಪಿ ಚಿದಂಬರಂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

(ಏಜನ್ಸೀಸ್)

ನವೆಂಬರ್ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಗಾಂಡು ಮುಲ್ಲ ಪಾಕಿಸ್ತಾನ
ದಿನಾಂಕ: 05 Nov 2009 2:39 pm
ನಾಯಿಯನ್ನು ಸಿಂಹಾಸನದ ಮೇಲೆ ಇಟ್ಟರೆ ಅದು ಹೇಳು ತಿನ್ನುವುದನ್ನು ಬಿದುತದೆಯೇ ಅದಕ್ಕೆ ಪಾಕಿಸ್ತಾನವೇ ಒಳ್ಳೆ ಉದಾಹರಣೆ

ಇಂದ: ಕನ್ನಡತಿ
ದಿನಾಂಕ: 05 Nov 2009 1:14 pm
ಮಹಿಳೆ ಮತ್ತು ದೇಶವನ್ನು ಅವಮಾನಿಸುವ ಧರ್ಮ ಅದೆಂತ ಧರ್ಮವಯ್ಯ ಅಂತ ಧರ್ಮ ನಮ್ಮ ದೇಶದಲ್ಲಿ ಬೇಕೇ?

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು