clear
clear
clear
clear
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ » ಪೂರ್ಣಪಾಠ
ಕುರ್ಚಿ ಗಡಗಡ : ಕೋಡಿಮಠ ಭವಿಷ್ಯ ನಿಜ?

Kodimatha Swamijis prediction on BSY comes true
ಬೆಂಗಳೂರು, ನ. 2 : ಡಿಸೆಂಬರ್ ಅಂತ್ಯದೊಳಗೆ ಕಾರ್ತೀಕ ಮಾಸದ ಅಸುಪಾಸಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾರಿ ಗಂಡಾಂತರ ಎದುರಿಸುತ್ತಾರೆ ಎಂದು ಹಾಸನ ಜಿಲ್ಲೆಯ ಕೋಡಿಮಠದ ಕಾಲಜ್ಞಾನಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದ ಭವಿಷ್ಯ ಇದೀಗ ನಿಜವಾಗಲಿದೆಯೆ?

ಕಳೆದ ಮಾರ್ಚ್ ನಲ್ಲಿ ಶ್ರೀಗಳು ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಕುರಿತಾಗಿ ಭವಿಷ್ಯ ನುಡಿದ್ದರು. ತಾಡೋಲೆ ಹೊತ್ತಿಗೆ ಭವಿಷ್ಯವನ್ನು ಯಾರು ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜಕಾರಣಿಗಳು ಮಾತ್ರ ಚಾಚು ತಪ್ಪದೇ ಕೋಡಿಮಠದ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಭಾರತದ ಪ್ರಧಾನಮಂತ್ರಿಯಿಂದ ಹಿಡಿದು ಅನೇಕ ಘಟಾನುಘಟಿ ರಾಜಕೀಯ ನೇತಾರರು ಕೋಡಿಮಠಕ್ಕೆ ಭೇಟಿ ನೀಡಿ ಭವಿಷ್ಯ ಕೇಳಿದ್ದು ಈ ಮಠದ ಹೆಗ್ಗಳಿಕೆ. ಏನೇ ಇರಲಿ. ಕಳೆದ ಮಾರ್ಚ್ ನಲ್ಲಿ ಶ್ರೀಗಳು ಹೇಳಿದ್ದ ಭವಿಷ್ಯ ಇಂದು ನಿಜವಾಗಿದೆ. ಡಿಸೆಂಬರ್ ಒಳಗೆ ಯಡಿಯೂರಪ್ಪ ಅವರ ಕುರ್ಚಿಗೆ ಗಂಡಾಂತರವಿದೆ ಎಂದು ಹೇಳಿದ್ದರು. ಅದೀಗ ನಿಜವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಡಿಮಠದ ಮಠಾಧೀಶ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಕಾಲ ಮಿಂಚಿ ಹೋದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ ನಮ್ಮನ್ನು ಸಂಪರ್ಕಿಸಿದ್ದಾರೆ. ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನು ಇರಿಸಿದ್ದಾರೆ. ಸದ್ಯ ಏನೂ ಮಾಡಲು ಅಸಾಧ್ಯ ಎಂದು ಶ್ರೀಗಳು ಖಡಾಖಂಡಿತವಾಗಿ ಹೇಳಿದ್ದಾರೆ. ನವೆಂಬರ್ 8ರವರೆಗೆ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾವು ಹೆಚ್ಚೇನೂ ಹೇಳುವುದಿಲ್ಲ ಎಂದು ಶ್ರೀಗಳು ನುಡಿದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ನವೆಂಬರ್ 2, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ರವೀಂದ್ರ ರಾಜನ್
ದಿನಾಂಕ: 04 Nov 2009 11:41 am
ನನಗೆ ಸ್ವಾಮಿಗಳ ಬಗ್ಗೆ ಗೌರವ ಇದೆ. ಆದರೆ ಸ್ವಾಮಿಗಳು ರಾಜಕೀಯ ಜೋತಿಷ್ಯ ಹೇಳುವುದು ಬಿಟ್ಟು, ಸಾಮಾನ್ಯ ಜನತೆಗೆ ಬೇಕಾದ ಮಾರ್ಗಧರ್ಶನ ಮಾಡಿದರೆ ದೇವರು ಮೆಚ್ಚುತಾನೆ. ಇವರು ರಾಜಕೀಯ ಬವಿಷ್ಯ ಹೇಳುವ ಸ್ವಾಮೀಜಿಗಳು. ಸಾಮಾನ್ಯ ಜನರ ಭವಿಷ್ಯ ಹೇಳುವುದಿಲ್ಲ.

ಇಂದ: ದೇವ್
ದಿನಾಂಕ: 03 Nov 2009 8:46 pm
ನನಗೆ ಸ್ವಾಮಿಗಳ ಬಗ್ಗೆ ಗೌರವ ಇದೆ. ಆದರೆ ಸ್ವಾಮಿಗಳು ರಾಜಕೀಯ ಜೋತಿಷ್ಯ ಹೇಳುವುದು ಬಿಟ್ಟು, ಸಾಮಾನ್ಯ ಜನತೆಗೆ ಬೇಕಾದ ಮಾರ್ಗಧರ್ಶನ ಮಾಡಿದರೆ ದೇವರು ಮೆಚ್ಚುತಾನೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು