clear
clear
clear
clear
x

ಮೂರನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ

ಮಂಗಳವಾರ, ಆಗಸ್ಟ್ 25, 2009, 13:05[IST]
Vote this article
Up  
Down  


{image-25-truck-strike.jpg thatskannada.oneindia.in}ಬೆಂಗಳೂರು, ಆ. 25: ಮೂರು ದಿನದಿಂದ ನಡೆದಿರುವ ಲಾರಿ ಮುಷ್ಕರದಿಂದ ನಗರದಲ್ಲಿ ಮನೆ, ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾರಿ ಹೊಡೆತ ಬಿದ್ದಿದೆ. ಲಾರಿಮಾಲೀಕರೊಡನೆ ಸರ್ಕಾರದ ಸಂಧಾನ ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಷ್ಕರ ಅನಿರ್ದಿಷ್ಟಾಧಿ ಬಂದ್ ಮುಂದುವರೆಯಲಿದೆ. ಲಾರಿ ಸಾಗಣಿಕೆಗೆ ಅಧಿಕಾರಿಗಳು ನೀಡುವ ಕಿರುಕುಳ ಮುಷ್ಕರಕ್ಕೆ ಮಾಡಲು ಕಾರಣವಾಗಿದೆ.

ಕರ್ನಾಟಕ ರಾಜ್ಯ ಲಾರಿ ಮಾಲೀಕರ ಒಕ್ಕೂಟದ ಪ್ರಕಾರ ಸುಮಾರು 2 ಸಾವಿರಕ್ಕೂ ಅಧಿಕ ಮರಳು ಸಾಗಣೆ ಲಾರಿಗಳು ರಸ್ತೆಗಿಳಿದಿಲ್ಲ. ಬೇಡಿಕೆಗಳ ಈಡೇರಿಕೆಗೆ ಆ.22 ರ ವರೆಗೂ ಗಡವು ನೀಡಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಸ್ಪಂದಿಸಿಲ್ಲಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ ಚೆನ್ನಾರೆಡ್ಡಿ ತಿಳಿಸಿದ್ದಾರೆ. ಆದರೆ, ಜಿಆರ್ ಷಣ್ಮುಗಪ್ಪ ನೇತೃತ್ವದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ (FOKLOA) ಈ ಮುಷ್ಕರಲ್ಲಿ ಪಾಲ್ಗೊಂಡಿಲ್ಲ.ಆ.26 ರಂದು ಸಾಗಣೆದಾರರ ಸಭೆ ನಡೆಸಲಾಗುವುದು ನಂತರ ನಿರ್ಧಾರ ಬಗ್ಗೆ ತಿಳಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ>
(ದಟ್ಸ್ ಕನ್ನಡವಾರ್ತೆ)



ಆಗಸ್ಟ್ 25, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು