clear
clear
clear
clear
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ಹೌರಾ ಬ್ರಿಜ್ಜಿನಿಂದ ಬಸ್ ಉರುಳಿ 8 ಜನರ ಸಾವು

ಕೋಲ್ಕತಾ, ಜು. 4 : ಚಾಲಕನ ಅಜಾಗರೂಕತೆಯಿಂದ ಹೌರಾ ಸೇತುವೆಯ ಮೇಲಿಂದ ರೈಲು ಹಳಿಯ ಮೇಲೆ ಬಸ್ ಬಿದ್ದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನ ಸಾವಿಗೀಡಾದ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.

ಮಿನಿ ಬಸ್ಸಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಸೇತುವೆಯ ಬದಿಗೆ ಡಿಕ್ಕಿ ಹೊಡೆದು ಹಳಿಗಳ ಮೇಲೆ ಉರುಳಿದೆ. ಸತ್ತವರ ಸಂಖ್ಯೆ 15 ದಾಟುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಗಾಯಗೊಂಡ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂತು ತಿಳಿದುಬಂದಿದೆ. ದುರ್ಘಟನೆ ಯಾವ ಮಟ್ಟದ್ದಿತ್ತೆಂದರೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತವಾದ ತಕ್ಷಣ ಅಧಿಕಾರಿಗಳು ಮತ್ತು ಆಂಬುಲನ್ಸ್ ತಕ್ಷಣ ಸ್ಥಳಕ್ಕೆ ಧಾವಿಸದ ಕಾರಣ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುತ್ತಲಿನ ಸಾರ್ವಜನಿಕರೇ ಜನರ ರಕ್ಷಣೆಗಾಗಿ ಧಾವಿಸಿದ್ದಾರೆ.

(ಏಜೆನ್ಸೀಸ್)

ಜುಲೈ 4, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು