clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಮೊಮ್ಮಕ್ಕಳಿಗೆ ತಮ್ಮ ಕಥೆ ವಿವರಿಸಿದ ಗೌಡರು

HD Devegowda
ಹಾಸನ, ಜು. 1 : ಅಲ್ಲಿ ನೋಡು ಅದು ಕಬ್ಬಿನಹಳ್ಳಿ. ಆ ಊರಿಗೆ ರಸ್ತೆ, ಸೇತುವೆ ಮಾಡಿಸಿದ್ದು ನಾನೇ. ಪಕ್ಕದ ಊರಿಗೂ ರಸ್ತೆ ಮಾಡಿಸಿದ್ದೆ. ಅಲ್ಲಿ ಕಾಣುತ್ತಿದೆಯಲ್ಲ ಆ ಕೆರೆ, ಭಾರತ ಮ್ಯಾಪ್ ಥರ ಕಾಣುತ್ತಿದೆ ನೋಡು. ಅದೇ ಈ ಕೆರೆ ವಿಶೇಷ. ಮಂಗಳವಾರ ಮೊಮ್ಮಕ್ಕಳ ಜೊತೆಗೆ ದೇವೇಗೌಡರು ತಮ್ಮ ಸಾಧನೆಗಳ ವಿವರ ಬಿಚ್ಚಿಟ್ಟಾಗ ಸ್ಥಳೀಯರೂ ಅಚ್ಚರಿಪಟ್ಟರು.

ಲೋಕಸಭೆ ಚುನಾವಣೆ ಮುಗಿದು ಎರಡು ತಿಂಗಳ ಬಳಿಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಥಮ ಬಾರಿಗೆ ತವರಿಗೆ ಭೇಟಿ ನೀಡಿದ್ದರು. ಗೌಡರ ಈ ಭೇಟಿ ದೈವ ಕಾರ್ಯಗಳಿಗೆ ಮೀಸಲಾಗಿತ್ತು. ಕುಟುಂಬ ಸಮೇತ ದೇಗುಲಗಳಿಗೆ ಭೇಟಿ ನೀಡಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೊತ್ತಿದ್ದ ಹರಕೆ ತೀರಸಲೆಂದೇ ಇಲ್ಲಿಗೆ ಆಗಮಿಸಿದ್ದರು.

ಗುಡ್ಡದ ಶ್ರೀರಂಗನ ಸನ್ನಿಧಿಯಲ್ಲಿ ದೊಡ್ಡ ಕವರ್ ವೊಂದರಲ್ಲಿ ಪೇಪರ್ ಗಳನ್ನು ಇಟ್ಟು ಪೂಜೆ ಮಾಡಿಸಿದರು. ಪೂಜೆ ಬಳಿಕ ಆ ಕವರ್ ಪಡೆದ ರೇವಣ್ಣ ಅದನ್ನು ಪ್ರತ್ಯೇಕವಾಗಿಟ್ಟುಕೊಂಡರು. ನಂತರ ಮಾವಿನಕೆರೆ ಬೆಟ್ಟಗ ಹೊರಗೆ ಬಂದ ಗೌಡರು, ಬೆಟ್ಟದ ಸುತ್ತಲಿರುವ ಪ್ರಕೃತಿ ಸೊಬಗು ಸವಿದರು. ತಮ್ಮಲ್ಲೇ ಹಳೆ ನೆನಪುಗಳನ್ನು ಕಲುಕುತ್ತಿದ್ದವರಂತೆ ಅಲ್ಲಿನ ಮರ, ದೇಗುಲದ ಕಂಬಗಳಿಗೆ ಕೆಲ ಹೊತ್ತು ಒರಗಿ ನಿಂತುಕೊಂಡರು. ಜೊತೆಯಲ್ಲಿದ್ದ ಮೊಮ್ಮಕ್ಕಳನ್ನು ಕರೆದು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಗೌಡರ ಜೊತೆಗಿದ್ದವರು ಪತ್ನಿ ಚೆನ್ನಮ್ಮ, ಮಗ ಎಚ್ ಡಿ ರೇವಣ್ಣ. ಮೊಮ್ಮಕ್ಕಳಾದ ಪ್ರಜ್ವಲ್, ಕನ್ವಲ್.

(ದಟ್ಸ್ ಕನ್ನಡ ವಾರ್ತೆ)

ಜುಲೈ 1, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: manka
ದಿನಾಂಕ: 05 Jul 2009 12:11 am
ನಮ್ ಗೌಡ್ರುನ್ನ ಅಂಗೆಲ್ಲ ಬಯ್ಯದು ತೆಪ್ಪು. ಅವ್ರು ಕರ್ಣಾಟಕದ ಗಾಂಧಿ ತಾತ ಇದ್ದಂಗೆ. ಮಾವಿನಕೆರೆ ಬೆಟ್ಟದ ರಂಗಯ್ಯ ನಿಮಗೆಲ್ಲ ಒಳ್ಳೆ ಬುದ್ಧಿ ಕರುಣೆ ಮಾಡ್ಲಿ ಅಂತ ಅವನ ಕಾಲಿಗೆ ಬಿದ್ದು ಬೇದ್ಕಂತೀನಿ ಕಣ್ರಪ್ಪ. ಪುಟ್ಸಾಮಿ ಆತ್ಮಕ್ಕೂ ಸಾಂತಿ ಸಿಗಲಿ.

ಇಂದ: ಮ೦ಡ್ಯದ ಗೌಡ
ದಿನಾಂಕ: 02 Jul 2009 5:27 am
ದೇವಪ್ಪಾ,ಅ೦ಗೇನೇ ವಸಿ ಕಳ್ಳತನದಲ್ಲಿ ದುಡ್ಡು ಮಾಡೋದು ಹೇಳಿ ಕೊಡಪ್ಪಾ ಮಕ್ಕಳಿಗೆ.ಕುಮಾರನ್ನೂ ರೇವಣ್ಣನ್ನೂ ತೋರಿಸಿ ಇವರ೦ತೆ ನೀವೂ ಬೆಳೆದು ದೇಶ ಯಕ್ಕುಟ್ತಿಸಿ ಅ೦ತನೂ ಹೇಳಿಕೊಡು.ರಾಧಿಕಾಳನ್ನು ತೋರಿಸಿ ಹಾದರ ಮಾಡೋದು ಹೇಗೆ ಅ೦ತನೂ ಹೇಳಿಕೊಡು.ನಮ್ಮ ದೇಷ ಉದ್ದಾರ ಆಗತೈತೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು