ನವದೆಹಲಿ, ಮೇ.17: ಬಿಜೆಪಿ ಯುವ ನೇತಾರ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ದ ಅವಹೇಳನಕಾರಿ ಭಾಷಣದ ಮಾಡಿದ್ದೇ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಹೀನಾಯವಾಗಿ ಸೋಲನುಭವಿಸಲು ಕಾರಣವಾಯಿತು ಎಂದು ಜೆಡಿ (ಯು) ಮುಖ್ಯಸ್ಥ ಶರದ್ ಯಾದವ್ ಆರೋಪಿಸಿದ್ದಾರೆ.
ಬಿಜೆಪಿಯ ಭವಿಷ್ಯದ ಪ್ರಧಾನಿ ಎಂದು ನರೇಂದ್ರ ಮೋದಿ ಅವರನ್ನು ಬಿಜೆಪಿಯ ಕೆಲವು ನಾಯಕರು ಬಿಂಬಿಸಿದ್ದು ಪಕ್ಷಕ್ಕೆ ಮುಳುವಾಯಿತು ಎಂದು ಶರದ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎ ಸೋಲಲು ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತೇವೆ ಎಂದು ಅವರು ತಿಳಿಸಿದರು.
ವರುಣ್ ಗಾಂಧಿ ಹೇಳಿದ್ದು ಸರಿಯೋ, ತಪ್ಪೋ ಒಟ್ಟಿನಲ್ಲಿ ಅವರ ಭಾಷಣದ ಪ್ರಭಾವ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರ ಹೇಳಿಕೆ ಅಸಂವಿಧಾನಿಕ. ಅವರ ಹೇಳಿಕೆ ದೇಶದ ಏಕತೆಗೆ ಭಂಗ ತರುವ ರೀತಿಯಲ್ಲಿತ್ತು. ಇದು ಚುನಾವಣೆ ಮೇಲೆ ಪರಿಣಾಮ ಬೀರಿತು ಎಂದು ಶರದ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮೋದಿ ಪಿಎಂ ಹೇಳಿಕೆ ಸೋಲಿಗೆ ಕಾರಣ, ಬಿಜೆಡಿಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ