clear
clear
clear
clear
ಮುಖಪುಟ » ಸುದ್ದಿಜಾಲ » ಕ್ರೀಡಾಲೋಕ » ಪೂರ್ಣಪಾಠ
ಸಿಧುಗೆ ಹ್ಯಾಟ್ರಿಕ್, ಅಜರ್ ಗೆ ಪ್ರಥಮ ಚುಂಬನ

Sidhu
ನವದೆಹಲಿ, ಮೇ. 16: ಮಾಜಿ ಕ್ರಿಕೆಟಿಗ ಸಿಕ್ಸರ್ ಸಿಧು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ್ದರೆ, ಮಾಜಿ ನಾಯಕ ಅಜರುದ್ದೀನ್ ಪ್ರಥಮ ಗೆಲುವಿನೊಂದಿಗೆ ರಾಜಕೀಯ ಆಟದ ಇನ್ನಿಂಗ್ಸ್ ಆರಂಭಿಸಿದ್ದಾರೆ.15 ನೇ ಲೋಕಸಭಾ ಚುನಾವಣೆಯ ಕಣಕ್ಕೆ ಸಿನಿಮಾ ತಾರೆಯರು, ಉದ್ಯಮಿಗಳು, ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇಳಿದಿದ್ದು ವಿಶೇಷ. ಕರ್ನಾಟಕದ ಮಾಜಿ ರಣಜಿ ಆಟಗಾರ ಪ್ರಕಾಶ್ ರಾಥೋಡ್ ಸೋಲನುಭವಿಸಿದ್ದಾರೆ.

ಅಜರ್ ಕಮಾಲ್: ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕಮೊ ಹಮದ್ ಅಜರುದ್ದೀನ್ ಅವರು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿ 49,107 ಮತಗಳ ಅಂತರದಿಂದ ಸಮೀಪ ಪ್ರತಿಸ್ಪರ್ಧಿ ಕನ್ವರ್ ಸರ್ವೇಶ್ ಅವರನ್ನು ಸೋಲಿಸಿದ್ದಾರೆ. ಮುಸ್ಲಿಮರ ಓಲೈಕೆ ಕಾಂಗ್ರೆಸ್ ಪರ ಮತ ಬೀಳುವಲ್ಲಿ ಅಜರ್ 301283 ಮತ ಗಳಿಸಿದರೆ, ಎದುರಾಳಿ ಸರ್ವೇಶ್ 252176 ಮತಗಳಿಸಿದ್ದಾರೆ.

ಕರ್ನಾಟಕದ ಮಾಜಿ ರಣಜಿ ಆಟಗಾರ ಪ್ರಕಾಶ್ ರಾಥೋಡ್ ಬಿಜಾಪುರದಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿ, ಬಿಜೆಪಿಯ ರಮೇಶ್ ಜಿಗಜಿಣಗಿ ವಿರುದ್ಧ ಉತ್ತಮ ಹೋರಾಟ ನೀಡಿದರೂ 48,404 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಕೀರ್ತಿ ಅಜಾದ್ ಬಿಹಾರ್ ನ ದರ್ಭಾಂಗಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಾನವ ಸಂಪನ್ಮೂಲ ರಾಜ್ಯ ಸಚಿವ ಮಹಮ್ಮದ್ ಆಲಿ ಅಶ್ರಫ್ ವಿರುದ್ಧ 36, 444 ಮತಗಳಿಂದ ಅಚ್ಚ್ಚರಿಯ ಗೆಲುವು ಸಾಧಿಸಿದ್ದಾರೆ. 1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕೀರ್ತಿ ಅಜಾದ್, ಈ ಮೂಲಕ ಬಿಜೆಪಿಗೆ ಕೀರ್ತಿ ತಂದಿದ್ದಾರೆ.

ನವಜೋತ್ ಸಿಂಗ್ ಸಿಧು ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಒ ಪಿ ಸೋನಿ ವಿರುದ್ಧ 6858 ಮತಗಳಿಂದ ಜಯ ಗಳಿಸಿದ್ದಾರೆ. ಈ ಹಿಂದೆ 2004ರಲ್ಲಿ ಹಾಗೂ 2007 ರ ಮರು ಮತದಾನದಲ್ಲಿ ಸಿಧು ಜಯಭೇರಿ ಬಾರಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಚೇತನ್ ಚೌಹಾಣ್ ಪೂರ್ವ ದೆಹಲಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ವಿರುದ್ಧ 2.4ಲಕ್ಷ ಮತಗಳಿಂದ ಹೀನಾಯ ಸೋಲುಂಡಿದ್ದಾರೆ.

ಶೂಟಿಂಗ್ ಚಾಂಪಿಯನ್ ಜಸ್ಪಾಲ್ ರಾಣಾ ಅವರು ಉತ್ತರಖಂಡದ ತಿಹರಿ ಗರ್ವಾಲ್ ಕ್ಷೇತ್ರದಲ್ಲಿ , ಫರಿದಾಬಾದ್ ನಿಂದ ಚೇತನ್ ಶರ್ಮಾ, ಭಟಿಂಡಾದಲ್ಲಿ ಶೂಟರ್ ರಣೀಂದರ್ ಸಿಂಗ್ ಸೋತ ಇತರ ಪ್ರಮುಖರು.
(ಏಜೆನ್ಸೀಸ್)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಕ್ರಿಕೆಟ್ ಪ್ರೇಮಿ
ದಿನಾಂಕ: 17 May 2009 1:25 pm
ಈಗ ಮಹಮ್ಮದ್ ಅಜರುದ್ದೀನ್ ಗೆ ಕ್ರಿಕೆಟ್ ಆಡಲು ಒಳ್ಳೆಯ ಅವಕಾಶ್. ಇದೆ ಹೊಲಸು ರಾಜಕೀಯ ಷಡ್ಯಂತ್ರದಿಂದ ಕ್ರಿಕೆಟ್ ದಿಂದ ಹೊರಬಿದ್ ನಾಯಕ, ಅದೇ ರಾಜಕೀಯಕ್ಕೆ ಸಡ್ಡು ಹೊಡೆದು ಪ್ರಚಂಡ ಬಹುಮತದಿಂದ್ ಲೋಕಸಭೆಗೆ ಆಯ್ಕೆಯಾಗಿದ್ದಾನೆ. ನಮ್ಮೆಲ್ ಕ್ರಿಕೆಟ್ ಪ್ರಿಯರಿಂದ್ ನಾಯಕ್ ಮಹಮ್ಮದ್ ಅಜರುದ್ದೀನ್ಗೆ ಅಬಿನಂದನೆಗಳು.

ಇಂದ: ನಾಗರಾಜ ರಾವ್
ದಿನಾಂಕ: 17 May 2009 1:03 pm
ನಮ್ಮ ಕಾಲದಲ್ಲಿ ಉತ್ತಮ ಆಟಗಾರನಾಗಿದ್ದರೂ ಹಣದ ಆಸೆಯಿ೦ದ ದುಡ್ಡು ತಿ೦ದು ವಿಕೆಟ್ ಒಪ್ಪಿಸಿ ತನ್ನ ಟೀಮೇ ಸೋಲುವ೦ತೆ ಹಲವಾರು ಸಲ ಮಾಡಿ ಸಿಕ್ಕಿಹಾಕಿಕೊ೦ಡು ಕ್ರಿಕೆಟ್ ಕ೦ಟ್ರೋಲ್ ಬೋರ್ಡಿನವರು ಹೊರಗೆ ಹಾಕಿದ ಮಹಮ್ಮದ್ ಅಜರುದ್ದೀನ್ ಈಗ ಲೋಕಸಭೆಗೆ ಆಯ್ಕೆಯಾಗಿದ್ದಾನೆ. ಈಗಲಾದರೂ ನೇರವಾಗಿ ಆಟವಾಡುವುದನ್ನು ಅಭ್ಯಾಸಮಾಡಲಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು