clear
clear
clear
clear
ಮುಖಪುಟ » ಸುದ್ದಿಜಾಲ » Election » ಪೂರ್ಣಪಾಠ
ಮೈಸೂರು ಲೋಕಸಭಾ ಕ್ಷೇತ್ರಗಳ ಫಲಿತಾಂಶ

ಮೈಸೂರು, ಮೇ. 17: ಶನಿವಾರ ನಡೆದ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರಗಳು ಕೆಳಕಂಡಂತಿದೆ.ಅಡಗೂರು ಹೆಚ್. ವಿಶ್ವನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಪಕ್ಷದಿಂದ ಸ್ಪರ್ಧಿಸಿ 3,54,810 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಸಿ ಹೆಚ್ ವಿಜಯಶಂಕರ್ ಅವರು ಬಿಜೆಪಿ ಪಕ್ಷದಿಂದ 3,47,119 ಮತಗಳನ್ನು ಗಳಿಸಿ ಪರಾಭವಗೊಂಡಿದ್ದಾರೆ.

ಉಳಿದಂತೆ ಕಣದಲ್ಲಿದ್ದ ಬಿ.ಎ. ಜೀವಿಜಯ (ಜೆಡಿಎಸ್) 2,16,283 ಮತ, ಸೈಯದ್ ನಿಜಾಂ ಆಲಿ (ಬಹುಜನ ಸಮಾಜ ಪಾರ್ಟಿ)19,895ಮತ, ಎಂ.ವಿ. ಸಂತೋಷ್ ಕುಮಾರ್ (ಸ್ವತಂತ್ರ) 11,586 ಮತ, ಸಂತೋಷ್ ಕುಮಾರ್ ಪಿ (ಸ್ವತಂತ್ರ) 5,521ಮತ, ಡಾ: ಇ. ಕೇಶಮ್ಮ (ರಾಷ್ಟ್ರೀಯ ದೇಹತ್ ಮೋರ್ಚಾ ಪಾರ್ಟಿ) 3,831 ಮತ, ಪಿ.ಎನ್. ಶ್ರೀನಾಥ್ - ಪತ್ರಿಕೆ (ಸ್ವತಂತ್ರ) 3,779 ಮತ, ರಫೀಕ್ (ಸ್ವತಂತ್ರ) 3,744 ಮತ, ಪಿ. ಪರಶಿವಮೂರ್ತಿ (ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷ) 2,555 ಮತ, ಅರ್ಷದುಲ್ಲಾ ಷರೀಫ್ (ಭಾರತೀಯ ಪ್ರಜಾ ಪಕ್ಷ) 2,457 ಮತ ಹಾಗೂ ಲೀಲಾವತಿ ಎಂ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ) 2,300 ಮತಗಳನ್ನು ಗಳಿಸಿರುತ್ತಾರೆ.

ಒಟ್ಟು 16,53,991ಮತದಾರರಿದ್ದು ಸಿಂಧುವಾದ ಮತ9,73,880 ಮತ್ತು 398ಮತಗಳು ತಿರಸ್ಕೃತಗೊಂಡಿವೆ ಹಾಗೂ 50ಟೆಂಡರ್ಡ್ ಮತಗಳನ್ನು ಒಳಗೊಂಡಿವೆ.

(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: kdiga
ದಿನಾಂಕ: 21 May 2009 5:29 pm
ಮೈಸೂರು "ಉಲಿ" ಮತ್ತು "ಇಲಿ" ಇಬ್ಬರನ್ನೂ "ಹಾರಿಸಿ."

ಇಂದ: ಮೈಸೂರು ಹುಲಿ
ದಿನಾಂಕ: 17 May 2009 3:58 pm
ಗಲ್ಲಿಗೊಂದು ಪಕ್ಷ,ಗಲ್ಲಿಗೊಬ್ಬ ನಾಯಕರ ಅಗತ್ಯವಿದೆಯ ? ಮೈಸೂರು ಜಿಲ್ಲೆಯವರು,ಜಿಲ್ಲಾ ಮಾದ್ಯಮಗಳು ತೀರಾ ಹಿಂದುಳಿದಿದ್ದಾರೆ ಎಂದು ಹೇಳಲು ವಿಶ್ವನಾಥ್ ಗೆದ್ದಿರುವುದೇ ಸಾಕ್ಷಿ!

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು