clear
clear
clear
clear
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?
Read  In English

LTTE chief Prabhakaran
ನವದೆಹಲಿ, ಮೇ.17: ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಮುಖ್ಯಸ್ಥ ವಿ. ಪ್ರಭಾಕರನ್ ಮಿಲಿಟರಿ ದಾಳಿಯಲ್ಲಿ ಮೃತಪಟ್ಟಿದ್ದು ಕೊಲಂಬದಲ್ಲಿನ ಸೈನಿಕ ಶಿಬಿರಕ್ಕೆ ಪ್ರಭಾಕರನ್ ಮೃತ ದೇಹವನ್ನು ಕೊಂಡೊಯ್ಯಲಾಗಿದೆ ಎಂದು ಶ್ರೀಲಂಕಾದ ಸೈನಿಕ ಮೂಲಗಳು ದೃಢಪಡಿಸಿವೆ.

ಶ್ರೀಲಂಕಾ ಸೈನಿಕ ಮೂಲಗಳ ಪ್ರಕಾರ, ಎಲ್ಟಿಟಿಯ 150 ಮೃತ ದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅವುಗಳನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಹಾಗೆಯೇ ಎಲ್ಟಿಟಿಇ ಒತ್ತೆಯಲ್ಲಿದ್ದ ನಾಗರಿಕರನ್ನು ಯುದ್ಧ ಭೂಮಿಯಿಂದ ವಿಮುಕ್ತಗೊಳಿಸಲಾಗಿದೆ ಎಂದು ತಿಳಿದ್ದಾರೆ.

ಎಲ್ಟಿಟಿಇಯೊಂದಿನ ದಾಳಿ ಮುಂದುವರಿದಿದ್ದು ಇನ್ನೂ ಅವರ ಮೇಲೆ ಸಂಪೂರ್ಣ ಹಿಡಿದ ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಎಲ್ಟಿಟಿಇಯ ಮುಖ್ಯಸ್ಥರು ಸಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶ್ರೀಲಂಕಾ ಸರಕಾರ ತಿಳಿಸಿದೆ. ಸೈನಿಕ ಕಾರ್ಯಾಚರಣೆ ಮೂಲಕ ಎಲ್ಟಿಟಿಇಯನ್ನು ಸದೆ ಬಡಿದಿರುವುದಕ್ಕೆ ಶ್ರೀಲಂಕಾದ ಅಧ್ಯಕ್ಷ ಮಹಿಂದ್ರಾ ರಾಜಪಕ್ಸ ಹರ್ಷ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)

ಶ್ರೀಲಂಕಾ : ಸೇನಾ ಕಾರ್ಯಾಚರಣೆ ಅಂತ್ಯ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪೆಂಗ
ದಿನಾಂಕ: 18 May 2009 4:35 pm
ಚೈನಾ ದೇಶದ ನೆರವಿನಿಂದ ( ಶಸ್ತ್ರಾಸ್ತ್ರ, ಆರ್ಥಿಕ ಮತ್ತು ರಾಜನೈತಿಕ ) ಶ್ರೀ ಲಂಕಾ LTTE ಯನ್ನು ಹಿಮ್ಮೆಟ್ಟಿಸಿ ಸದೆಬಡಿಯಿತು ಎಂದು ಹೇಳಲಾಗುತ್ತದೆ. ಇದು ನಿಜವಾದಲ್ಲಿ ಚೈನಾ ದೇಶ ಮುಂದೆ ಶ್ರೀ ಲಂಕಾದ ನೆಲವನ್ನು ಭಾರತದ ವಿರುದ್ಧ ಉಪಯೋಗಿಸುವ ಸಾಧ್ಯತೆಗಳು ಕಂಡುಬರುತ್ತದೆ. ಭಾರತದ ದೃಷ್ಟಿಯಿಂದ ಇದೊಂದು ಆತಂಕಕಾರಿ ಬೆಳವಣಿಗೆ.

ಇಂದ: ಕನ್ನಡಿಗ
ದಿನಾಂಕ: 18 May 2009 10:55 am
ನಿಜವಾಗ್ಲೂ ಅಪ್ಪನಿಗೆ ಹುಟ್ಟಿದ ಕೆಲಸ. ಈ ಕೊಂಗರನ್ನು ಬುಡಸಮೇತ ಶ್ರೀಲಂಕಾದಲ್ಲಿ ಕಿತ್ತು ಹಾಕಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು