clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಸೋನಿಯಾ ಭೇಟಿಯ ಮರ್ಮ ಬಿಟ್ಟುಕೊಟ್ಟ ಎಚ್ಡಿಕೆ!

HD Kumaraswamy
ಬೆಂಗಳೂರು, ಮೇ.17: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಆಹ್ವಾನ ನೀಡಿದ್ದು ಯುಪಿಎ ಒಕ್ಕೂಟ ಸೇರುವಂತೆ ಕರೆ ನೀಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಚರ್ಚಿಸಲು ಕುಮಾರಸ್ವಾಮಿ ಭಾನುವಾರ ಸಂಜೆ ದೆಹಲಿಗೆ ದೌಡಾಯಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಕುಮಾರಸ್ವಾಮಿ ಈ ವಿಚಾರವನ್ನು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗಿದೆ. ಜೆಡಿಎಸ್ ಮುಂದಿನ ನಿಲುವು ಕುರಿತಂತೆ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಯುಪಿಎಗೆ ಬೆಂಬಲ ನೀಡಬೇಕೆ ಬೇಡವೆ ಎಂಬ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜೆಡಿಎಸ್ ನ ನೂತನ ಸಂಸದ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ. ದೇವೇಗೌಡರೊಂದಿಗೆ ಚರ್ಚಿಸಿದ ವಿಚಾರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. 15ನೇ ಲೋಕಸಭೆ ಚುನಾವಣೆಯಲ್ಲಿ 261 ಸ್ಥಾನಗಳನ್ನು ಪಡೆದಿರುವ ಯುಪಿಎ ಒಕ್ಕೂಟಕ್ಕೆ ಇನ್ನೂ11 ಸಂಸದರ ಬೆಂಬಲ ಅಗತ್ಯವಿದೆ. ಮೂರು ಸಂಸದರ ಬಲವನ್ನು ಹೊಂದಿರುವ ಜೆಡಿಎಸ್ ಬೆಂಬಲ ನೀಡುವಂತೆ ಕಾಂಗ್ರೆಸ್ ಕೋರಿದೆ.

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಅವರ ಭೇಟಿಯ ಮರ್ಮ ಈಗ ಬಹಿರಂಗವಾದಂತಾಗಿದೆ. ಯುಪಿಎ ಒಕ್ಕೂಟಕ್ಕೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಅದರ ಸಾಧಕ ಬಾಧಕಗಳ ಬಗ್ಗೆ ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದ್ದು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಮೇ 21ಕ್ಕೆ ಬಿಜೆಪಿ ಶಾಸಕಾಂಗ ಸಭೆ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ. ದೆಹಲಿಯಲ್ಲಿ ಸೋಮವಾರ (ಮೇ 18) ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ, ಸಂಸದ ಅನಂತಕುಮಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ನಾಗರಾಜು
ದಿನಾಂಕ: 08 Aug 2009 12:14 pm
ಯಡಿಯೂರಪ್ಪನವರು ತುಂಬಾ ಸ್ವಾರ್ಥ ರಾಜಕಾರಿಣಿ, ಸಮಯ ಸಾದಕ ,ಕೆಟ್ಟ ಮುಖ್ಯಮಂತ್ರಿ , ಆಡಳಿತ ರೀತಿ ಚೆನಾಗಿಲ್ಲ, ತುಂಬಾ ಸಾಲಮಾಡಿದ ಮುಖ್ಯಮಂತ್ರಿ ,ಅದ್ದಿಕಾರ ಇದ್ಹ ಹಾಗೆ ಒಂದು ಮಾತು ,ಅದಿಕಾರ ಇಲ್ಲಹಾಗ ಒಂದು ಮಾತು ,ಹಗರಣಗಳ ಸರಕಾರ , moಸದ ಸರಕಾರ, ಬಡವರ ಪರವಲ್ಲಧ ಸರಕಾರ ,ಶ್ರೀಮಂತರ ಪರವಿರುವ ಸರಕಾರ , ಜನವಿರೋದಿ ,ಅಬಿರುದ್ದಿ , ಇಲ್ಲದ ಸರಕಾರ ,ಬೆಲೆ ಏರಿಕೆ ನಿಲ್ಲಿಸದ ಸರಕಾರ , ಕುಮಾರಸ್ವಾಮಿ ಸರಕಾರ ಉತ್ತಮ ,ಕಾಂಗ್ರೇಸ್ ಸರಕಾರ ಅತ್ಯುತ್ತಮ , ಪ್ರಸ್ತುತ ಇರುವ ಸರಕಾರ ಇಂದು ನೋಡಿಲ್ಲ ,ಮುಂದೆ ನೋಡೋದಿಲ್ಲ .ಬಿಜೆಪಿ ಸರ್ಕಾರ ಇನ್ನಾ ಯಾವಾಗಲೂ ಬರೋದಿಲ್ಲ ನಾಚಿಕೆ ಆಗಬೇಕು ಈ ಸರಕಾರ್ಕೆ ೪೨೦ ಸರಕಾರ

ಇಂದ: Yadiyurappa
ದಿನಾಂಕ: 19 May 2009 9:38 am
Hucha karnatakada raithapi bandugalira, nanu nimma mele pramana madi pramanavachana madiddini mathu devara mele pramana madi namma maganige MP seat kodisiddini, aaduru neevu nammannu gellisi nimmannu neevu halumadikondiddiri. operation kamala antha nanu mathu reddys madi karnatakavannu halu madalu horatiddaru neevu nammanu gellisiddiri. adakke nanna danyavadagalu

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು