clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಅಜಂಖಾನ್ ರಾಜೀನಾಮೆ; ನುಣುಚಿಕೊಂಡ ಜಯ

Azam khan
ನವದೆಹಲಿ, ಮೇ.17: ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಹಾಗೂ ಪಾರ್ಲಿಮೆಂಟರಿ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಮ್ ಪುರದಲ್ಲಿ ಜಯಪ್ರದ ಅವರ ಸ್ಪರ್ಧೆಯನ್ನು ಅಜಂಖಾನ್ ತೀವ್ರವಾಗಿ ವಿರೋಧಿಸಿದ್ದರು.

ಕಲ್ಯಾಣ್ ಸಿಂಗ್ ಗೆ ಸಮಾಜವಾದಿ ಪಕ್ಷದ ನಾಯಕತ್ವ ವಹಿಸುವ ಬಗ್ಗೆಯೂ ಅಜಂಖಾನ್ ರ ಅಸಮ್ಮತಿ ಇತ್ತು. ಕೆಲಕಾಲ ಇವರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇಂದು ಖಾನ್ ರಾಜೀನಾಮೆ ಮೂಲಕ ಇಬ್ಬರ ನಡುವಿನ ದ್ವೇಷಕ್ಕೆ ತೆರೆ ಬಿದ್ದಿದೆ. ಸಮಾಜವಾದಿ ಪಕ್ಷದ ಪಾರ್ಲಿಮೆಂಟ್ ಮಂಡಳಿ ಸಭೆ ನಡೆಯುತ್ತಿರುವಾಗಲೇ ಖಾನ್ ರಾಜೀನಾಮೆ ಸಲ್ಲಿಸಿದರು. ಕಳೆದ ಆರು ತಿಂಗಳಿಂದ ಖಾನ್ ಪಕ್ಷದ ಯಾವುದೇ ಸಭೆಯಲ್ಲೂ ಭಾಗವಹಿಸಿಲ್ಲ ಎಂದು ಎಸ್ಪಿ ಮೂಲಗಳು ತಿಳಿಸಿವೆ.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿ ಕೊಂಡ ಎಂಬಂತೆ ಅಜಂಖಾನ್ ರಾಜೀನಾಮೆಗೂ ನನಗೂ ಯಾವುದೇ ವಿಧದಲ್ಲೂ ಸಂಬಂಧ ಇಲ್ಲ ಎಂದು ಎಸ್ಪಿ ಲೋಕಸಭಾ ಅಭ್ಯರ್ಥಿ ಜಯಪ್ರದ ಸ್ಪಷ್ಟಪಡಿಸಿದ್ದಾರೆ. ಅಜಂಖಾನ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಜಯಪ್ರದ ಆರೋಪಿಸಿದ್ದಾರೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಖಾನ್ ಸದ್ಯಕ್ಕೆ ಮಾಧ್ಯಮಗಳಿಗೆ ಸಿಗುತ್ತಿಲ್ಲ.

(ಏಜೆನ್ಸೀಸ್)

ಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ
ಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು