clear
clear
clear
clear
   
  BSE  13,853.70 +453.38   NSE  4111.40 +137.35   RS/$ 49.40 71.00  at:16:10 Hrs (IST) Jul 14  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಮಹಾಚುನಾವಣೆ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಸಿದ್ದು ಜತೆ ಮೈತ್ರಿ ಸುಳ್ಳು, ಯಡಿಯೂರಪ್ಪ
[IST]
What is this?
thatsKannada RSS feed thatsKannada igoogle gadgets FREE SMS alerts

ನವದೆಹಲಿ, ಜ. 6 : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ನೂತನ ಪಕ್ಷದೊಂದಿಗೆ ಭಾರತೀಯ ಜನತಾ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಗಾಳಿ ಸುದ್ದಿಯನ್ನು ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಅಂತಹ ಪ್ರಸ್ತಾವನೆ ಬಂದಲ್ಲಿ ಪಕ್ಷದ ವರಿಷ್ಠರೊಂದಿಗೆ ತೀರ್ಮಾನಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರು ಕರ್ನಾಟಕ ಜನತಾದಳ ಪಕ್ಷವನ್ನು ರಚಿಸಲಿದ್ದಾರೆ. ಇಲ್ಲವೇ, ತೆಲುಗು ಚಿತ್ರರಂಗ ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಸೇರಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇದರ ಜೊತೆಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಸಿದ್ದರಾಮಯ್ಯ ಈಗಾಗಲೇ ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿತ್ತು. ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ ಯಡಿಯೂರಪ್ಪ, ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಇಂತಹ ಯಾವ ಪ್ರಸ್ತಾವನೆ ನಮಗೆ ಬಂದಿಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ತಮ್ಮ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯರು. ಆದು ಅವರ ವಿವೇಚನೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಹೇಳಿದರು. ಮುಂದಿನ ಲೋಕಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡು ರಾಜ್ಯದ 28 ಸಂಸತ್ ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಸಿದ್ದು ಕೈಗೆ ಬಿಜೆಪಿ ನೀಡಲಿದೆ ಎನ್ನುವ ಸುದ್ದಿಯಾಗಿ ಕೇಳಿಬಂದಿತ್ತು.

ಮುಂದಿನ ಲೋಕಸಭೆ ಚುನಾವಣೆಗೆ ಬೇಕಿರುವ ಎಲ್ಲ ಸಿದ್ಧತೆಗಳಲ್ಲಿ ಬಿಜೆಪಿ ತೊಡಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಮೂಲಕ ಕಮ್ಮಿ ಎಂದರೂ 20 ಸೀಟುಗಳನ್ನು ಬಿಜೆಪಿ ಗೆಲ್ಲುವ ಗುರಿ ಹೊಂದಲಾಗಿದೆ. ಈ ಮೂಲಕ ಭಾರತದ ಪ್ರಧಾನಮಂತ್ರಿ ಸ್ಥಾನದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಕೂರಿಸಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಸಿದ್ದರಾಮಯ್ಯ ಪ್ರಜಾರಾಜ್ಯಂಗೆ ಸೇರ್ಪಡೆ ಸಾಧ್ಯತೆ
ಕಾಂಗ್ರೆಸ್ ಸಭೆಗೆ ಹಾಜರಾಗಲ್ಲ: ಸಿದ್ದರಾಮಯ್ಯ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ನಾಗರಾಜ ರಾವ್
ದಿನಾಂಕ: 07 Jan 2009 9:50 am
ಸಿದ್ದು ಶಕುನಿ ಇದ್ದ ಹಾಗೆ ಕಣಯ್ಯಾ. ಜೆ.ಡಿ.,ಎಸ್ ನ ದೇವೇಗೌಡನ ಹತ್ತಿರ ಜಗಳಾ ಕಾಯ್ದು ಕಾ೦ಗ್ರೆಸ್ಸಿಗೆ ಸೇರಿಕೊ೦ಡ. ಅಲ್ಲೂ ಇವನ ಬೇಳೇ ಬೇಯಿಲಿಲ್ಲ. ಈಗ ಅದ್ಯವುದೋ ಪ್ರಜಾರಾಜ್ಯ್೦ ಅನ್ನುವ ತೆಲುಗು ಪಾರ್ಟಿಗೆ ಸೇರಿಕೊ೦ಡವನ೦ತೆ. ಆ ಪಾರ್ಟಿ ಇ೦ದ ಎಲೆಕ್ಶ್೦ನ್ ನಿ೦ತರೆ ಡಿಪಾಸಿಟ್ ಕಳೆದುಕೊಳ್ಳುವ ಸ೦ಭವನೇ ಜಾಸ್ತಿ. ಇಶ್ಟೆಲ್ಲಾ ಚರಿತ್ರೆ ಇರೋ ಮನುಶ್ಯನನ್ನು ಅದೇಕೆ ಯಡ್ಡಿ ಬಿ.ಜೆ.ಪಿ ಗೆ ಸೇರಿಕೊಳ್ತಾನೋ ನನಗೆ ಅರ್ಥವಾಗುತ್ತಿಲ್ಲ.

ಇಂದ: ಕುಂದಾಪುರ ನಾಗೇಶ್ ಪೈ
ದಿನಾಂಕ: 06 Jan 2009 4:54 pm
ವರನಟ ಕನ್ನಡದ ಮೇರು ನಟ ನಟ ಸಾರ್ವಭೌಮ ಡಾ ರಾಜಕುಮಾರ್ ಅವರಿಂದ ಸಾಹಿತಿ /ಬುದ್ಧಿ ಜೀವಿ ಗಳು ಪಾಠ ಕಲಿಯ ಬೇಕಾಗಿದೆ .ಅವರು ಜೀವನ ಪೂರ್ತಿ ರಾಜಕೀಯ ದಲ್ಲಿ ಸೇರದೆ .ಕನ್ನಡ ಭಾಷೆಗೆ ಮೆರುಗು ತಂದ ನಟ ಮತ್ತು ಮಹಾನ್ ಕಲಾವಿದ .ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಮುಖಂಡರು ತಮ್ಮ ಪಕ್ಷದ ಪ್ರಚಾರ ಕ್ಕಾಗಿ ಚುನಾವಣೆಯಲ್ಲಿ ಇಂಥಹ ಸ್ವಾರ್ಥಿ ಸಾಹಿತಿ ಮತ್ತು ಬುದ್ಧಿ ಜೀವಿ ಗಳನ್ನೂ ಬಳಸಿ ಕೊಂಡು ಮುಂದೆ ಬರುವ ಲೋಕ ಸಭೆ ಗೆ ಉಪಯೋಗಿಸಲು ಹವಣಿಸಿದರೆ ಕನ್ನಡದ /ರಾಜ್ಯದ ಬೇಸರದ ಸಂಗತಿ . ಸ್ವಾರ್ಥ ಮನೋಭಾವ ಇರುವ ಜನರು ಕೇವಲ ಧನಲಾಭ ಕ್ಕಾಗಿ /ಖುರ್ಚಿ ಗಾಗಿ ಪಕ್ಷ ಬದಲಾಯಿಸು ತ್ತಲೇ ಇರುವಾಗ ಅಭಿವ್ರದ್ದಿ ಯ ಅಪೇಕ್ಷೆ ಹೇಗೆ ಮಾಡ ಬಹುದು ನೀವೇ ಹೇಳಿ ? ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರ ಹೊಟೇಲುಗಳಲ್ಲಿ ವಿಶೇಷ ಕೊಡುಗೆ
 ಬಾಲಿಯಲ್ಲಿನ ಅತ್ಯಂತ ಜನಪ್ರಿಯ ಹೊಟೇಲುಗಳು
ThatsKannada
ThatsKannada
 ಅಡುಗೆಮನೆಯ ಗೊಣಗಾಟ ನಿಲ್ಲಿಸಲು ಇಲ್ಲಿವೆ ಕೆಲ ಉಪಾಯ
 ನಾಟಕ ವಿಮರ್ಶೆ : ಸೇವಂತಿ ಯಾ ಮಿಸ್ ಸೇವಂತಿ
 ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?
 ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆ
 ಒಂದು ರುಚಿಕಟ್ಟಾದ ಪದಾರ್ಥ ಮತ್ತು ಪೇಚಿನ ಪ್ರಸಂಗ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India