clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಕಾಂಗ್ರೆಸ್ ಸಭೆಗೆ ಹಾಜರಾಗಲ್ಲ, ಸಿದ್ದು
[IST]

ಬೆಂಗಳೂರು, ಜ. 5 : ಕೊನೆಗೂ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಡೆದ ಕಾಂಗ್ರೆಸ್ ಆತ್ಮಾವಲೋಕನ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ದಾರಿ ಬೇರೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ತಾವು ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ, ಹಾಗಾಗಿ ಇಂದು ನಡೆಯುವ ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದೊಂದಿಗಿನ ಸಿದ್ದು ಸಂಬಂಧ ಮತ್ತಷ್ಟು ಹಳಸಿದಂತಾಯಿತು.

ಡಿಸೆಂಬರ್ 27 ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯವಾಗಿ ಸೋಲನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಅತ್ಮಾಲೋಕನ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಪಾಲ್ಗೊಂಡಿದ್ದಾರೆ. ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಿದ್ದು ಹಾಗೂ ಆರ್ ಎಲ್ ಜಾಲಪ್ಪ ಪಾಲ್ಗೊಂಡಿರಲಿಲ್ಲ. ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಸಭೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ ತಂದಿದ್ದಾರೆ. ಆದರೂ ಕೂಡ ಸಿದ್ದು ಸಭೆಯನ್ನು ತಿರಸ್ಕರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಸಿದ್ದರಾಮಯ್ಯ ಕುರಿತು ಕುಮಾರಸ್ವಾಮಿ ಲೇವಡಿ
ಜನವರಿ ಅಂತ್ಯಕ್ಕೆ ಸಿದ್ದು ಹೊಸ ಪಕ್ಷ ಶುರು?

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ವೀರ Kuruba
ದಿನಾಂಕ: 06 Jan 2009 7:52 pm
ಸಿದ್ದುಗೆ ಜೈ. ಸಿದ್ದು ಕಾಂಗ್ರೆಸ್ ಬಿಟ್ರೆ ಕಾಂಗ್ರೆಸ್ ಗತಿ ಅದೂಗಥಿ. siddu is superstar. ಲೋಫಾರ್ ಕಲ್ಲನನ್ನಮಕಲು ದೆವೆಗೌದನಿಗೆ ಬುದ್ದಿ ಕಳಿಸು. ಅವ್ನ ಪರ್ಮನೆಂಟಾಗಿ ಮನೇಲಿ ಮಾಯಾ ಮಂತ್ರ ಮದ್ಕ್ಕ ಕೂರಿಸಿ. ಸಿದ್ದರಮ್ನ್ನನಿಗೆ ಜೈ.

ಇಂದ: Veera Kannadiga
ದಿನಾಂಕ: 05 Jan 2009 6:17 pm
Neenu mathododu nodidre pakka BJP antha kanisuththe. Eee ketta yaddiya aadalitha Janarige olleyadagalla, Reddygalige olledu madthiddane. neenu avnige suport Madu Magne.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು