ನವದೆಹಲಿ, ನ.6: ಎದೆ ನೋವಿನ ತೊಂದರೆಯಿಂದ ಬಳಲುತ್ತ್ತಿರುವ ಲೋಕಸಭೆಯ ಸ್ಪೀಕರ್ ಸೋಮನಾಥ್ ಚಟರ್ಜಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಆರ್ಮಿ ರಿಸರ್ಚ್ ಮತ್ತು ರೆಫೆರಲ್
ಆಸ್ಪತ್ರೆಗೆ ದಾಖಲಿಸಲಾಗಿದೆ.
79 ವಯಸ್ಸಿನ ಚಟರ್ಜಿ ಬುಧವಾರ ರಾತ್ರಿ ಎದೆ ನೋವಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಇದೇ ಆಸ್ಪತ್ರೆಯಲ್ಲಿ ಚಟರ್ಜಿ ಚಿಕಿತ್ಸೆ ಪಡೆಯುತ್ತ್ತಿದರು. 2-3 ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ಏಜೆನ್ಸೀಸ್)
ರ ಇತರೆ ಸುದ್ದಿ/ಲೇಖನಗಳನ್ನು ಓದಿ