clear
clear
clear
clear
x

ಒರಿಸ್ಸಾ: ಆರ್ಎಸ್ಎಸ್ ಮುಖಂಡನ ಕೊಲೆ

[IST]
ಭುಬನೇಶ್ವರ, ನ. 6 : ಕಂಧಮಾಲ್ ನ ಕೋಮು ಗಲಭೆ ತಣ್ಣಗಾಗುತ್ತಿರುವ ಬೆನ್ನಲ್ಲೇ ಇಂದು ಮತ್ತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡನನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಬ್ರಾಹ್ಮಣಿಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ. ಇದರೊಂದಿಗೆ ಕಂಧಮಾಲ್ ನಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮತ್ತೊಮ್ಮೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ.

ಧನುರ್ಜಯ ಪ್ರಧಾನ ಹತ್ಯೆಗೀಡಾದ ಸಂಘ ಪರಿವಾರದ ಕಾರ್ಯಕರ್ತನಾಗಿದ್ದಾನೆ. 2007 ರ ಡಿಸೆಂಬರ್ ನಲ್ಲಿ ನಡೆದ ಕೋಮು ಗಲಭೆಯಲ್ಲಿ ಧನುರ್ಜಯ ಪ್ರಧಾನ ಅವರ ಪ್ರಮುಖ ಸೂತ್ರದಾರನಾಗಿದ್ದ ಎಂದು ಮಾವೋವಾದಿಗಳು ಅವರು ಗುಂಡಿಟ್ಟು ಹತ್ಯೆ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 2007ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಮುಗಲಭೆಗೆ ಬ್ರಾಹ್ಮಣಿಗಾಂವ್ ಕೇಂದ್ರ ಸ್ಥಾನವಾಗಿತ್ತು.

ಸಂಘ ಪರಿವಾರ ಕಾರ್ಯಕರ್ತನ ಕೊಲೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತೆ ತ್ವೇಷಮಯ ವಾತಾವರಣ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಕೇಂದ್ರದ ಅರೆಸೇನಾಪಡೆ ಕೆರೆಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕಳೆದ ಅಗಸ್ಟ್ ತಿಂಗಳಲ್ಲಿ ನಡೆದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆಯಿಂದಾಗಿ ಒರಿಸ್ಸಾ ತುಂಬೆಲ್ಲಾ ವ್ಯಾಪಕ ಹಿಂಸಾಚಾರ ನಡೆದು ರಾಷ್ಟ್ರೀಯ ಸುದ್ದಿಯಾಗಿತ್ತು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿತ್ತು. ಆಗ 38 ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಜನರು ವಸತಿ ಹೀನರಾಗಿದ್ದರು. ತೀವ್ರಗೊಂಡ ಗಲಭೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಭಾರಿ ಒತ್ತಡ ಬಂದಿತ್ತು.

ಕೇಂದ್ರ ಸರ್ಕಾರ ಕೂಡಾ ಸಂವಿಧಾನದ ಕಲಂ 356 ರ ಪ್ರಕಾರ ಒರಿಸ್ಸಾ ಮುಖ್ಯಮಂತ್ರಿಯವರಿಗೆ ನೊಟೀಸ್ ಜಾರಿ ಮಾಡಿ ಸರ್ಕಾರವನ್ನು ವಜಾಗೊಳಿಸಬಾರದೇಕೆ ಎಂದು ಪ್ರಶ್ನೆ ಮಾಡಿತ್ತು. ರಾಷ್ಟ್ರಾದ್ಯಂತ ಕ್ರಿಶ್ಟಿಯನ್ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಈ ಗಾಯ ಆರುವ ಮುನ್ನವೆ ಮತ್ತೊಂದು ಘಟನೆ ನಡೆದಿದ್ದು, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಒರಿಸ್ಸಾ ಗಲಭೆ; ವರದಿ ಸಲ್ಲಿಸಲು ಕೋರ್ಟ್ ಆದೇಶ
ಕರ್ನಾಟಕ 'ಅತಿ ಹೆಚ್ಚು ಭ್ರಷ್ಟಾಚಾರ' ಪೀಡಿತ ರಾಜ್ಯ


ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: mitra
ದಿನಾಂಕ: 13 Nov 2008 11:40 am
RSS ಅನ್ನು ಕಿಕ್ಕ್ ಮಾದುವವರು ಸ್ವಲ್ಪ ಕಾಲದಲ್ಲಿ ಈ ದೇಶದಿಂದ ಕಿಕ್ ಅಗುವುದರಲ್ಲಿ ಸಂಶಯವಿಲ್ಲ. ಆಗ ಪಶ್ಚಾತ್ತಾಪ ಪಟ್ಟೇನು ಪ್ರಯೋಜನ?

ಇಂದ: INDIAN
ದಿನಾಂಕ: 10 Nov 2008 4:31 pm
"INDIA SAVED" WE LOST ONE TERRORIST..THANKS TO MAVOVAADI..DEMOLISH RSS TERRORIST WE ARE PROUD OF YOU...

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು