clear
clear
clear
clear
Home » News » Headline » Full story
ಪಿಟೀಲು ಮಾಂತ್ರಿಕ ಆರ್‌.ಆರ್‌.ಕೇಶವಮೂರ್ತಿ ಇನ್ನಿಲ್ಲ
[IST]

ಬೆಂಗಳೂರು : ಖ್ಯಾತ ಪಿಟೀಲು ವಾದಕ ಆರ್‌.ಆರ್‌. ಕೇಶವ ಮೂರ್ತಿ(90) ಇನ್ನಿಲ್ಲ. ಅವರ ಅಂತ್ಯ ಸಂಸ್ಕಾರ ಮಂಗಳವಾರ ನೆರವೇರಿತು. ಆ ಮೂಲಕ ಸ್ವರ ಮಾಂತ್ರಿಕ ಅಗ್ನಿಯಲ್ಲಿ ಲೀನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೋಮವಾರ ರಾತ್ರಿ ಕೊನೆ ಉಸಿರೆಳೆದರು. ಆರು ಪುತ್ರಿಯರು ಮತ್ತು ಪುತ್ರನೊಬ್ಬನನ್ನು ಕೇಶವಮೂರ್ತಿ ಅಗಲಿದ್ದಾರೆ. ಕೇಶವಮೂರ್ತಿ, ಖ್ಯಾತ ಪಿಟೀಲು ವಾದಕ ಟಿ.ಚೌಡಯ್ಯ ಅವರ ಸಹವರ್ತಿಯಾಗಿದ್ದರು.

ಏಳು ತಂತಿಯ ಪಿಟೀಲು ನುಡಿಸುವ ಮೂಲಕ ಅವರು ಖ್ಯಾತರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ಕನಕಪುರಂದರ ಪ್ರಶಸ್ತಿಗಳು ಅವರಿಗೆ ಸಂದಿದ್ದವು. 14ಪುಸ್ತಕಗಳನ್ನು ಅವರು ಬರೆದಿದ್ದರು. ಅನೇಕ ಪ್ರತಿಭಾವಂತ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಖ್ಯಾತಿ ಅವರದು.

(ಯುಎನ್‌ಐ)

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು