clear
clear
clear
clear
   
  BSE  16,158.28 +94.38   NSE  4796.15 +30.60   RS/$ 46.96 0.24  at:16:10 Hrs (IST) Nov 6  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಜಿಲ್ಲಾಸುದ್ದಿ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ಪೂರ್ಣಪಾಠ
‘ದಿ ರಿಟರ್ನ್‌ ಜರ್ನಿ’: ಬಹುಮುಖ ಪ್ರತಿಭೆಯ ಕೃಷ್ಣಾನಂದ ಕಾಮತ್‌ ನಿಧನ
[IST]
Krishnananda Kamat (67) with his loving family
ಬೆಂಗಳೂರು:
ಬರಹ ಕೃಷಿ, ವಿಜ್ಞಾನ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿಭಿನ್ನ ರಂಗಗಳಲ್ಲಿ ಪರಿಣತಿ ಸಾಧಿಸಿ ಹೆಸರು ಮಾಡಿದ್ದ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಡಾ.ಕೃಷ್ಣಾನಂದ ಕಾಮತ್‌ ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು .

ಅಸ್ವಸ್ಥಗೊಂಡಿದ್ದ ಕೃಷ್ಣಾನಂದ ಕಾಮತ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು . ಪತ್ನಿ ಜ್ಯೋತ್ಸ್ನಾ ಕಾಮತ್‌ ಹಾಗೂ ಪುತ್ರ ವಿಕಾಸ್‌ ಕಾಮತ್‌ ಅವರನ್ನು ಮೃತರು ಅಗಲಿದ್ದಾರೆ. www.kamat.comನ ಜೀವಸೆಲೆಯಾಗಿದ್ದ ಅವರು, ತಮ್ಮ ವೆಬ್‌ಸೈಟ್‌ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ-ಭಾರತದ ಅನಧಿಕೃತ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು.

‘ನಾನು ಅಮೆರಿಕೆಗೆ ಹೋಗಿದ್ದೆ ’ ಪ್ರವಾಸ ಕಥನದ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧಿಗೆ ಬಂದ ಕೃಷ್ಣಾನಂದ ಕಾಮತರು ಚಿಕಿತ್ಸಕ ಮನಸ್ಸಿನ ಲೇಖಕ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ - 1934 ರ ಸೆ.29 ರಂದು ಜನಿಸಿದ ಅವರು, ನ್ಯೂಯಾರ್ಕ್‌ ಸ್ಟೇಟ್‌ ವಿಶ್ವ ವಿದ್ಯಾಲಯದಿಂದ ಪರಿಸರ ಮತ್ತು ಅರಣ್ಯ ವಿಜ್ಞಾನ ಪ್ರಬಂಧಕ್ಕೆ 1965 ರಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದರು.

ಅಮೆರಿಕ ಮಾತ್ರವಲ್ಲದೆ ರಾಜಸ್ತಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಮುಂತಾದ ಕಡೆ ವೃತ್ತಿ ಹಾಗೂ ಪ್ರವೃತ್ತಿಯ ದೆಸೆಯಿಂದ ಅಲೆದಿದ್ದ ಕಾಮತರ ಕೃತಿ ಪ್ರಪಂಚದ ವೈವಿಧ್ಯತೆ ದಂಗುಬಡಿಸುವಂಥದ್ದು . ಅವರ ಕೆಲವು ಕೃತಿಗಳ ಹೆಸರುಗಳನ್ನೇ ನೋಡಿ : ವಂಗ ದರ್ಶನ, ಪ್ರೇಯಸಿಗೆ ಪತ್ರಗಳು, ನಾ ರಾಜಸ್ತಾನದಲ್ಲಿ , ಕಾಲರಂಗ, ಬಸ್ತರ ಪ್ರವಾಸ, ಪ್ರಾಣಿ ಪ್ರಪಂಚ, ಸಸ್ಯ ಪ್ರಪಂಚ!

ಬಹುಮುಖ ಪ್ರತಿಭೆಯ ಜೀವನ ಪ್ರೇಮಿ ಕೃಷ್ಣಾನಂದ ಕಾಮತರೀಗ ನಮ್ಮೊಂದಿಗಿಲ್ಲ . ಕಳೆದ ವರ್ಷವಷ್ಟೇ (2001, ಆಗಸ್ಟ್‌ 15) ಅವರ ‘ದಿ ರಿಟರ್ನ್‌ ಜರ್ನಿ’ (ಮರು ಪಯಣ) ಪುಸ್ತಕ ಧಾರವಾಡದಲ್ಲಿ ಬಿಡುಗಡೆಯಾಗಿತ್ತು .

ವಾರ್ತಾ ಸಂಚಯ
ಕೃಷ್ಣಾನಂದ ಕಾಮತರು ಹೀಗಿದ್ದರು..

Click here to go to top
ಮುಖಪುಟ / ಇವತ್ತು... ಈ ಹೊತ್ತು...


ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada

 ಕಿರಣ್ ಮಾರುತಿ ಸಣ್ಣಕಥೆ : ಹೀಗೊಂದು ಸಂಜೆ
 ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು
 ಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!
 ಮಧುಚಂದ್ರದಲಿ ಮೊದಲ ರಾತ್ರಿಯ ಮಧುರಯಾತನೆ
 ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್‌
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India