clear
clear
clear
clear
   
  BSE  14,913.05 +254.56   NSE  4424.25 +75.40   RS/$ 47.79 -0.30  at:16:10 Hrs (IST) Jul 3  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಮಹಾಚುನಾವಣೆ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ಪೂರ್ಣಪಾಠ
ಅಡಿಕೆ ಸಿಪ್ಪೆ ಸುಲಿವ ಯಂತ್ರದ ರೂವಾರಿನರಸಿಂಹ ಭಂಡಾರಿಗೆ ಪ್ರಶಸ್ತಿ
[IST]
What is this?
thatsKannada RSS feed thatsKannada igoogle gadgets FREE SMS alerts
ಬೆಂಗಳೂರು : ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಆವಿಷ್ಕರಿಸಿರುವ ಕೊಪ್ಪ ದ ನಿವಾಸಿ ನರಸಿಂಹ ಭಂಡಾರಿ ಅವರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಸಂಶೋಧನಾ ಫೌಂಡೇಷನ್‌ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿದೆ.

ಸಂಶೋಧನಾ ಮನೋಭಾವವನ್ನು ಉತ್ತೇಜಿಸುವ ದೃಷ್ಟಿಯಿಂದ ನೀಡುವ ಈ ಪ್ರಶಸ್ತಿಗೆ ರಾಜ್ಯದಿಂದ ತಂತ್ರಜ್ಞಾನ ವಲಯದ ಆವಿಷ್ಕಾರಗಳನ್ನು ನಡೆಸಿರುವ ಇತರ ಹನ್ನೊಂದು ಮಂದಿ ಆಯ್ಕೆಯಾಗಿರುವ ವಿಷಯವನ್ನು ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ದೇಶದ ವಿವಿಧ ಭಾಗಗಳ 1,637 ಸ್ಪರ್ಧಾರ್ಥಿಗಳ ಪೈಕಿ ಕರ್ನಾಟಕದ 12 ಮಂದಿಗೆ ಪ್ರಶಸ್ತಿ ಬಂದಿದೆ. ಪ್ರಥಮ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವ ಭಂಡಾರಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಲಭಿಸಲಿದೆ. ಬೆಳಗಾಂನ ಅಣ್ಣಾ ಸಾಹೇಬ್‌ ಉಡ್ಗಾವಿ ತಮ್ಮ ವಾಟರ್‌ ಗನ್‌ ಉಪಕರಣ ಆವಿಷ್ಕಾರಕ್ಕೆ , ಪುತ್ತೂರಿನ ಸುದರ್ಶನ್‌ ಹಾಗೂ ಇಲೆಕ್ಟ್ರಿಕ್‌ ವಾಟರ್‌ ಹೀಟರ್‌ ಕಂಡು ಹಿಡಿದ ಬೆಂಗಳೂರಿನ ಎ.ಆರ್‌.ಶಿವಕುಮಾರ್‌ ರಾಷ್ಟ್ರಪ್ರಶಸ್ತಿ ಪಡೆದ ಇತರ ಪ್ರಮುಖರು.

ಕೇಂದ್ರ ನೀಡುತ್ತಿರುವ ಈ ಪ್ರಶಸ್ತಿಯ ಮಾದರಿಯಲ್ಲಿಯೇ ರಾಜ್ಯ ಸರಕಾರವು ಕೃಷಿ ಪಂಡಿತ ಪ್ರಶಸ್ತಿಯನ್ನು ಆರಂಭಿಸಲಿದೆ ಎಂದು ಸಚಿವರು ತಿಳಿಸಿದರು. ಕೇಂದ್ರದ ಈ ಸಾಲಿನ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು...
Prof Anil K Gupta, executive vicechairperson, National Innovation Foundation and Professor, Indian Institute of Management, PO Box 15051, Ahmedabad 380015, Gujarat.

(ಇನ್ಫೋ ವಾರ್ತೆ)

Click here to go to top
ಮುಖಪುಟ
/ ಇವತ್ತು... ಈ ಹೊತ್ತು...
ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

 
 
 
 ಚೆನ್ನೈನಲ್ಲಿರುವ ಜನಪ್ರಿಯ ಹೊಟೇಲುಗಳು
 ಸಿಂಗಪುರದಲ್ಲಿರುವ ಅಗ್ಗದ ಹೊಟೇಲುಗಳು
ThatsKannada
ThatsKannada
 ದೊಡ್ಮನೆ ಸಣ್ಣಕಥೆ : ಯಾರನ್ನು ಮದುವೆಯಾಗಬೇಕು?
 ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..
 ಸಿಟಿಜನ್ ಜರ್ನಲಿಸಂ : ನೂರೆಂಟು ಮಾತು ಎದೆಯಾಳದಿಂದ
 ಕನ್ನಡಕ್ಕೆ ಬೇಕೇ ಬೇಕು ಅ೦ತರ್ಜಾಲ ಕೈಪಿಡಿ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India