clear
clear
clear
clear
   
  BSE  16,158.28 +94.38   NSE  4796.15 +30.60   RS/$ 46.96 0.24  at:16:10 Hrs (IST) Nov 6  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ಚಿತ್ರಕುಟೀರ
   ಹಾಡೊಂದ ಕೇಳಿ
   ನಾಯಕ
   ನಾಯಕಿ
   ಚಿತ್ರವಿಮರ್ಶೆ
   ಕಿರಿಕಿರಿ
   ಸ್ಟುಡಿಯೋ ರೌಂಡಪ್
   ಬಾಲಿವುಡ್
   ಹಾಲಿವುಡ್
   ವಿಡಿಯೊ
ಮುಖಪುಟ » ಚಲನಚಿತ್ರ » Tv » ಪೂರ್ಣಪಾಠ
ಜೀ ಕುಣಿಯೋಣು ಬಾರಾ ವಿಜೇತೆಯಾಗಿ ರಶ್ಮಿ
[IST]

Zee Kannada Kuniyonu Baara final winner Rashmi
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್ ಅಪ್‌ಗಳಿಗೆ ಕ್ರಮವಾಗಿ ಎರಡು ಮತ್ತು ಒಂದು ಲಕ್ಷದ ಶೈಕ್ಷಣಿಕ ವಿಮೆ ನೀಡಲಾಯಿತು. ಫೈನಲ್ ಸ್ಪರ್ಧೆಗೆ ಮುಖ್ಯ ಅಥಿತಿಯಾಗಿ ಡಾ.ವಿಷ್ಣುವರ್ಧನ್, ಡೈಸಿ ಬೋಪಣ್ಣ ಹಾಗೂ ಶೋಭರಾಜ್ ಆಗಮಿಸಿದ್ದರು.

ಕರ್ನಾಟಕದಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಾವಿರಾರು ಪ್ರತಿಭೆಗಳಲ್ಲಿ ಕೆಲವರನ್ನು ಮಾತ್ರ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅಂತಿಮ ಸ್ಪರ್ಧಿಗಳಾಗಿ ರಶ್ಮಿ ಕುಂದರ್, ರಶ್ಮಿ ಮಂಗಳೂರು, ಮೈಸೂರಿನ ನಿರೋಷಾ ಮತ್ತು ಚಿತ್ರದುರ್ಗದ ಪ್ರತೀಕ್ ಸ್ಪರ್ಧಿಸಿದ್ದರು. ಮೂರು ತಾಸುಗಳವರೆಗೆ ನಡೆದ ಅಂತಿಮ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಫರ್ಧಿಯೂ ಕೂಡ ಉತ್ತಮಪ್ರದರ್ಶನ ನೀಡಿದರು. ಫೈನಲ್ ಸ್ಪರ್ಧೆಯಲ್ಲಿದ್ದ ರಶ್ಮಿ ಕುಂದೂರ್ ಮೊದಲ ಸುತ್ತಿನಲ್ಲೇ ವೈಯುಕ್ತಿಕ ಕಾರಣಗಳಿಂದ ಹೊರನಡೆದರು.

ಅತಿಥಿ ತೀರ್ಪುಗಾರರ ಸ್ಥಾನದಲ್ಲಿದ್ದ ವಿಷ್ಣುವರ್ಧನ್ ಈ ಪುಟಾಣಿಗಳ ಪ್ರತಿಭೆಗೆ ಯಾವುದೂ ಸಾಟಿ ಇಲ್ಲ. ನನಗೆ ಈ ತಿರ್ಪುಗಾರನ ಸ್ಥಾನದಲ್ಲಿ ಕೂರಲು ಭಯ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನರ್ತಿಸುವ ಈ ಪುಟಾಣಿಗಳಲ್ಲಿ ಯಾರನ್ನು ವಿಜೇತರನ್ನಾಗಿ ಆಯ್ಕೆ ಮಾಡುವುದು ಎಂಬ ತೀರ್ಮಾನ ಕಷ್ಟಕರ ಎಂದು ಹೇಳಿದರು.

ಅಂತಿಮ ಸ್ಪರ್ಧೆಯಲ್ಲಿ ಕೇವಲ ಪುಟಾಣಿಗಳು ಮಾತ್ರವಲ್ಲದೇ ದೇಶದ ಪ್ರಸಿದ್ಧ ನೃತ್ಯ ತಂಡ ಕೇರಳದ ಶಿವಾಸ್ ಡಾನ್ಸ್ ಟ್ರೂಪ್ ಮತ್ತು ಮಂಗಳೂರಿನ ಎಕ್ಸ್ ಜೋನ್ ನೃತ್ಯ ತಂಡದಿಂದ ವಿಶೇಷ ನೃತ್ಯ ಪ್ರದರ್ಶನವಿತ್ತು.

ಕಳೆದ ಸಂಚಿಕೆಗಳಲ್ಲಿರುವಂತೆ ಸಿಂದು ಮೆನನ್ ಹಾಗೂ ಮಾಲೂರು ಶ್ರೀನಿವಾಸ್ ತೀರ್ಪುಗಾರರಾಗಿದ್ದರು. ಪುಟಾಣಿಗಳಾದ ಜ್ಯೇಷ್ಠ ನರಸಿಂಹ ಮತ್ತು ಶ್ರೇಯಾ ಕಾರ್ಯಕ್ರಮ ನಿರೂಪಕರಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜೀ ಕನ್ನಡ ನೃತ್ಯ ರಸಸಂಜೆ ಸವಿಯೋಣ ಬಾರಾ!

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪೂಜಾ ಶೆಟ್ಟಿ
ದಿನಾಂಕ: 07 Jan 2009 2:11 pm
ಮಂಗಳೂರಿನ ವಿಜೇತೆ ರಶ್ಮಿ ಗೆ ಅಭಿನಂದನೆ ದೇವರು ನಿನನ್ನು ಚೆನ್ನಾಗಿ ಇಡ್ಲಿ ಮಗು

ಇಂದ: ಶಶಿಧರ ಭಟ್
ದಿನಾಂಕ: 06 Jan 2009 3:26 pm
ಪತ್ರಿಕೆ ನಡೆಸುವ ರೀತಿನೀತಿಗಳು ಗಿರೀಶ್ ಅಂತವರಿಗೆ ಗೊತ್ತಿರುವುದಿಲ್ಲ. ಎಲ್ಲೋ ಕುಳಿತುಕೊಂಡು ಆರ್ಡರ್ ಮಾಡುವ ಧಾಟಿಯಲ್ಲಿ ದಬಾಯಿಸುವ ಇಂಥವರನ್ನು ಇಗ್ನೋರ್ ಮಾಡಿ. ಈ ಮಹಾಶಯನ ಕಾಮಂಟ್ ನಲ್ಲಿರುವ ದರ್ಪ , ಮತ್ತು ಉಡಾಫೆಗೆ ನೀವು ಮಣೆ ಹಾಕಬೇಡಿರಿ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada

 ಕಿರಣ್ ಮಾರುತಿ ಸಣ್ಣಕಥೆ : ಹೀಗೊಂದು ಸಂಜೆ
 ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು
 ಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!
 ಮಧುಚಂದ್ರದಲಿ ಮೊದಲ ರಾತ್ರಿಯ ಮಧುರಯಾತನೆ
 ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್‌
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India