clear
clear
clear
clear
   
  BSE  13,853.70 +453.38   NSE  4111.40 +137.35   RS/$ 49.40 71.00  at:16:10 Hrs (IST) Jul 14  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ಚಿತ್ರಕುಟೀರ
   ಹಾಡೊಂದ ಕೇಳಿ
   ನಾಯಕ
   ನಾಯಕಿ
   ಚಿತ್ರವಿಮರ್ಶೆ
   ಕಿರಿಕಿರಿ
   ಸ್ಟುಡಿಯೋ ರೌಂಡಪ್
   ಬಾಲಿವುಡ್
   ಹಾಲಿವುಡ್
   ವಿಡಿಯೊ
ಮುಖಪುಟ » ಚಲನಚಿತ್ರ » ಸ್ಟುಡಿಯೋ ರೌಂಡಪ್ » ಪೂರ್ಣಪಾಠ
ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ
[IST]

Shivraj Kumar in Bhagyada Balegara
thatsKannada RSS feed thatsKannada igoogle gadgets FREE SMS alerts
‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ‘ ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು. ಈ ಗೀತೆಯ ಮೊದಲ ಪದವನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ಮಾಪಕ ರಮೇಶ್‌ಕಶ್ಯಪ್. ಹಿಂದಿನ ವರ್ಷದಲ್ಲಿ ತೆರೆ ಕಂಡು ಯಶಸ್ಸು ಕಂಡ ಕೆಲವೇ ಚಿತ್ರಗಳಲ್ಲೊಂದಾದ ‘ನಂದ ಲವ್ಸ್ ನಂದಿತಾ‘ ಚಿತ್ರವನ್ನು ನಿರ್ಮಿಸಿದ್ದ ರಮೇಶ್‌ಕಶ್ಯಪ್ ಪ್ರಸಕ್ತ ವರ್ಷದಲ್ಲಿ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ನಂದ ನಂದಿತನಿಗೆ ಕತೆ ಬರೆದಿದ್ದ ಅಜಯ್‌ಕುಮಾರ್ ಈ ಚಿತ್ರಕ್ಕೂ ಕತೆ ಬರೆಯುವ ಹೊಣೆ ಹೊತ್ತಿದ್ದಾರೆ. ವಾತ್ಸಲ್ಯಭರಿತ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಪ್ರಮುಖರೆನಿಸಿರುವ ಓಂ.ಸಾಯಿಪ್ರಕಾಶ್ ‘ಭಾಗ್ಯದ ಬಳೆಗಾರ‘ನನ್ನು ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ ಬಳೆಗಾರ ರಾಮನಗರದಲ್ಲಿ ಬೀಡುಬಿಟ್ಟಿದ್ದಾನೆ. ಈ ತಿಂಗಳು ಪೂರ್ತಿ ಚಿತ್ರಕ್ಕೆ ರೇಷ್ಮೆನಗರದಲ್ಲೇ ಚಿತ್ರೀಕರಣ ನಡೆಯಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ‘ಭಾಗ್ಯದ ಬಳೆಗಾರ‘ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಂದರ ಪ್ರಾಕೃತಿಕ ಸ್ಥಳಗಳಲ್ಲಿ ಚಿತ್ರೀಕೃತವಾಗುವ ಬಳೆಗಾರನನ್ನು ಪಿ.ಕೆ.ಎಚ್ ದಾಸ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್, ಆನಂದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಆದರ್ಶ, ಆದಿಲೋಕೇಶ್, ಸತ್ಯಜಿತ್, ಸುಮಿತ್ರ, ಅಮೃತ, ಪದ್ಮಾವಾಸಂತಿ, ರಮೇಶ್‌ಭಟ್, ಶೋಭಾರಾಘವೇಂದ್ರ, ಪ್ರಕಾಶ್‌ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿಸಾಯಿಕೃಷ್ಣ, ಸುರೇಶ್‌ಮಂಗಳೂರು ಮುಂತಾದವರಿದ್ದಾರೆ. ಅಪ್ಪಟ್ಟ ಕನ್ನಡತಿಯೊಬ್ಬಳು ‘ಭಾಗ್ಯದ ಬಳೆಗಾರ‘ನಾಯಕಿಯಾಗುವ ಸಾಧ್ಯತೆಯಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

 
 
 
 ಬೆಂಗಳೂರ ಹೊಟೇಲುಗಳಲ್ಲಿ ವಿಶೇಷ ಕೊಡುಗೆ
 ಬಾಲಿಯಲ್ಲಿನ ಅತ್ಯಂತ ಜನಪ್ರಿಯ ಹೊಟೇಲುಗಳು
ThatsKannada
ThatsKannada
 ಅಡುಗೆಮನೆಯ ಗೊಣಗಾಟ ನಿಲ್ಲಿಸಲು ಇಲ್ಲಿವೆ ಕೆಲ ಉಪಾಯ
 ನಾಟಕ ವಿಮರ್ಶೆ : ಸೇವಂತಿ ಯಾ ಮಿಸ್ ಸೇವಂತಿ
 ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?
 ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆ
 ಒಂದು ರುಚಿಕಟ್ಟಾದ ಪದಾರ್ಥ ಮತ್ತು ಪೇಚಿನ ಪ್ರಸಂಗ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India