ಚಾಮುಂಡೇಶ್ವರಿಯಲ್ಲಿ ಸ್ವಯಂವರಕ್ಕೆ ಗಟ್ಟಿಮೇಳಶ್ರೀನಗರ ಕಿಟ್ಟಿ ಮತ್ತು ದಿಗಂತ್ ನಟಿಸುತ್ತಿರುವ ‘ಸ್ವಯಂವರ’ ಚಿತ್ರದ ಚಿತ್ರೀಕರಣ ಮುಕ್ತಾಯವಾದ ಬೆನ್ನಲ್ಲೇ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಆರಂಭವಾಗಿದೆ ಎಂದು ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ. ಕರ್ನಾಟಕದ ರಮಣೀಯ ಸ್ಥಳಗಳೂ ಸೇರಿದಂತೆ ದೂರದ ಬ್ಯಾಂಕಾಕ್‌ನಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಅನಂತರಾಜು ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ
ಈ ವಾರ ತೆರೆಗೆ ಐ.ಪಿ.ಸಿ ಸೆಕ್ಷನ್ 300ವಿಜಯ ರಾಘವೇಂದ್ರ, ಪ್ರಿಯಾಂಕ ಅಭಿನಯ್ದ 'ಐ.ಪಿ.ಸಿ ಸೆಕ್ಷನ್ 300' ಚಿತ್ರ ಈ ವಾರ(ನ.13) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ. ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ಶಂಕರ್ ನಿರ್ಮಿಸಿದ್ದಾರೆ.ಕುತೂಹಲ ಸನ್ನಿವೇಶಗಳೊಂದಿಗೆ ವಿಭಿನ್ನ ಕಥಾ ಹಂದರವುಳ್ಳ ಈ ಚಿತ್ರವನ್ನು ಶಶಿಕಾಂತ್ ನಿರ್ದೇಶಿಸಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ..
ಮೈಸೂರಿನಲ್ಲಿ 'ಹೂ' ಚಿತ್ರಕ್ಕೆ ಕ್ಲೈಮ್ಯಾಕ್ಸ್ಬಾಲ್ಯದ ನೆನಪುಗಳು ಅಮರ. ನೀವು ಆಗ ಹಾಡಿದ ಹಾಡು ಅಥವಾ ಸ್ವಾರಸ್ಯಕರ ಘಟನೆಯೋ ನಿಮ್ಮ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. 'ಹೂ' ಚಿತ್ರದಲ್ಲೂ ಹೀಗೆ. ನಾಯಕ ತನ್ನ ಗೆಳತಿಯೊಡನೆ ಬಾಲ್ಯದಲ್ಲಿ ಒಂದು ಹಾಡು ಹಾಡಿರುತ್ತಾನೆ. ಆ ಗೀತೆಯೇ ಮುಂದೆ ಅವರಿಬ್ಬರನ್ನು ಒಂದಾಗಿಸುತ್ತದೆ.ಯಾವುದೋ ಕಾರಣಕ್ಕೆ ಗೆಳತಿ ನಾಯಕನಿಂದ ದೂರಾಗಿರುತ್ತಾಳೆ. ಈ ವಿಷಯದಿಂದ ಬೇಸರಗೊಂಡ ನಾಯಕ ಊರು ಬಿಡಲು..
ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ 'ದೇವದಾಸ್'ಪ್ರೀತಿಯ ಹುಚ್ಚನಾದ 'ದೇವದಾಸ್' ಕೊನೆಗೂ ತನ್ನ ಹುಡುಗಿಯ ಮನಸ್ಸನ್ನು ಗೆದ್ದು ಆಕೆಯನ್ನು ವರಿಸಲು ಮುಂದಾಗುತ್ತಾನೆ. ತನ್ನ ಹೆತ್ತ ತಂದೆಯ ಎದುರೇ ರೌಡಿಗಳೊಂದಿಗೆ ಹೊಡೆದಾಡಿ ತನ್ನ ಹುಡುಗಿಯನ್ನು ರಕ್ಷಿಸಿ, ಆಕೆಯನ್ನು ಶಾಸ್ತ್ರೋಕ್ತವಾಗಿ ಸಾಂಪ್ರದಾಯದಂತೆ ಸಪ್ತಪದಿ ತುಳಿದು ಮದುವೆ ಮಾಡಿಕೊಳ್ಳುತ್ತಾನೆ. ಆ ಮದುವೆಗೆ ಆತನ ಬಂಧುಗಳು ಬಂದು ನೂತನ ವಧೂ-ವರರನ್ನು ಆಶೀರ್ವದಿಸಿದರು. ಈ ಮೇಲಿನ ದೃಶ್ಯವನ್ನು ದೇವದಾಸ್ ಚಿತ್ರದ ನಿರ್ದೇಶಕ..
ಹಾಡಿನ ಸಂಭ್ರಮದಲ್ಲಿ 'ದಿಲ್ದಾರ'ಕನಸು ಕ್ರಿಯೇಟರ್ಸ್ ಲಾಂಛನದಲ್ಲಿ ಅಮನ್ ಅವರು ನಿರ್ಮಿಸುತ್ತಿರುವ ’ದಿಲ್ದಾರ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಕೆ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಸಾರಥ್ಯದಲ್ಲಿ ನಡೆಯುತ್ತಿದೆ.'ದಿಲ್ದಾರ' ನಿರ್ದೇಶಕ ಅಮರ್ ಅವರ ಕನಸಿನ ಕೂಸು. ಖ್ಯಾತ ನಾಮರ ಬಳಿ ಸಹಾಯಕಕರಾಗಿ ದುಡಿದಿರುವ ಅಮರ್ ಅವರಿಗೆ ಇದು ಚೊಚ್ಚಲ ಯತ್ನ. ‘ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಹಾಗೂ ವಿಭಿನ್ನ..
ಶಿವಣ್ಣನ ಮನೆ ಹತ್ತಿರದ ಪಾರ್ಕ್ ನಲ್ಲಿ ನಮಿತಾ!ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಬಳಿಯ ಉದ್ಯಾನದಲ್ಲಿ ಮೋಹಕ ನಟಿ ಮೀರಾ ಜಾಸ್ಮಿನ್ ಮತ್ತು ನಮಿತಾ ಇಬ್ಬರೂ ಪ್ರತ್ಯಕ್ಷವಾಗಿದ್ದಾರೆ. ಇದೇನಿದು ಅವರಿಬ್ಬರೂ ಅಲ್ಲಿಗೇಕೆ ಬಂದರು ಎಂಬುದು ತಾನೆ ಅನುಮಾನ! ಹೆಬ್ಬಾಳ ಬಳಿಯ ಶಿವಣ್ಣನ ಮನೆಯ ಹತ್ತಿರದ ಉದ್ಯಾನವನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ 'ಹೂ' ಚಿತ್ರದ ಚಿತ್ರೀಕರಣಕ್ಕಾಗಿ ಭರದಿಂದ ಸಾಗುತ್ತಿದೆ.ರವಿಚಂದ್ರನ್ ಮತ್ತು ಮೀರಾ ಜಾಸ್ಮಿನ್ ನಡುವಿನ..
ಕಿಟ್ಟಿ, ಶರ್ಮಿಳಾ 'ಸ್ವಯಂವರ'ಮುಕ್ತಾಯಶ್ರೀನಗರ ಕಿಟ್ಟಿ, ದಿಗಂತ್ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯದ ಸ್ವಯಂವರ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರದ ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ. ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ಚಂದ್ರು ಈ ಚಿತ್ರವನ್ನು ನಿರ್ಮಿಸಿದ್ದಾರೆ.ವಿಭಿನ್ನ ಶೀರ್ಷಿಕೆಯ ಈ ಕಥಾನಕದ ವೈಶಿಷ್ಟವೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರುಗಳು ಚಿತ್ರಕ್ಕೆ ಹಾಡುಗಳನ್ನು ಬರೆದಿರುವುದು. ಈ ಪೈಕಿ ತುಷಾರ್ ರಂಗಾನಾಥ..
ಶ್ರೀಹರಿಯ ಸವತಿಯರಾದ ಗಾಂಧಿ ಸೋದರಿಯರುಶ್ರೀಹರಿ ಚಿತ್ರದಲ್ಲಿ ಸಹೋದರಿಯರಾದ ಪೂಜಾ ಗಾಂಧಿ ಹಾಗೂ ರಾಧಿಕಾ ಗಾಂಧಿ ಜತೆಯಾಗಿ ಅಭಿನಯಿಸುತ್ತಿರುವುದು ಗೊತೇ ಇದೆ. ಈ ಚಿತ್ರದಲ್ಲಿ ಅವರಿಬ್ಬರೂ ಸವತಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಬೆಂಗಳೂರು, ಮಂಗಳೂರು, ಸಕಲೇಶಪುರ, ಮಲ್ಪೆ ಬೀಚ್ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದ್ದಾರೆ. ಪ್ರಥಮ ಬಾರಿಗೆ ಪೂಜಾ ಗಾಂಧಿ ನೆಗೆಟಿವ್ ರೋಲ್‌ನಲ್ಲಿ ಅಭಿನಯಿಸಿದ್ದು, ನಾಯಕ ಹರಿ ಸುಸಂಸ್ಕೃತ..
ರೌಡಿಗಳಿಂದ 'ದೇವದಾಸ್' ಮೇಲೆ ಹಲ್ಲೆರೋಹಿಣಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ.ಬಿ.ಸಿ.ಡಿ. ಶಾಂತಕುಮಾರ್, ಕಥೆ, ಚಿತ್ರಕಥೆ, ರಚಿಸಿ ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿರುವ 'ದೇವದಾಸ್' ಚಿತ್ರಕ್ಕೆ ಈಗಾಗಲೇ ಶೇ.75 ಭಾಗದಷ್ಟು ಚಿತ್ರೀಕರಣ ಪೂರೈಸಿದೆ. ಪ್ರೀತಿಗೆ ಮತ್ತೊಂದು ಹೆಸರೇ ದೇವದಾಸ್. ನಾಯಕ ದೇವದಾಸ್‌ಗೆ ನಾಯಕಿಯ ಪ್ರೀತಿಯ ಗಳಿಸಬೇಕೆಂಬ ಛಲ. ಆದರೆ ನಾಯಕಿಗೆ ಆತನನ್ನು ಕಂಡರೆ ಆಗೊಲ್ಲ ಇವನ ಕಾಟವನ್ನು ತಡೆಯಲಾರದೆ ಕೆಲ ಬಾಡಿಗೆ ರೌಡಿಗಳನ್ನು ಬಿಟ್ಟು..
ಮಾತಿನ ಮನೆಯಲ್ಲಿ ಜಸ್ಟ್ ಮಾತ್ ಮಾತಲಿಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಜಸ್ಟ್ ಮಾತ್ ಮಾತಲಿ‘ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ. ಕನ್ನಡದಲ್ಲಿ ಈವರೆಗೂ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಶಂಕರ್ ಅವರು ಸುದೀಪ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹಾಗೂ ಸುದೀಪ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಚಿತ್ರದಲ್ಲಿ ನಿರ್ದೇಶಕನ..