ಚಿತ್ರ ವಿಮರ್ಶೆ:ಶಿವಣ್ಣನ 'ದೇವರು ಕೊಟ್ಟ ತಂಗಿ'ಒಂದೂರಲ್ಲಿ ಅಣ್ಣ ತಂಗಿ ಸೆಂಟಿಮೆಂಟು, ಪಂಚಾಯಿತಿ ಕಟ್ಟೆ ಯಲ್ಲಿ ಪಟೇಲರ ಕಾಂಡಿಮೆಂಟು, ಒಂದಷ್ಟು ಕಾಮಿಡಿ ಟ್ರೀಟ್‌ಮೆಂಟು,ಅಲ್ಲಲ್ಲಿ ಉಪ್ಪು- ಖಾರಾ ಡಿಯೋಡ್ರೆಂಟು, ಕಣ್ಣೀರಿನ ಕಟ್ಟೆಗೆ ಜಲ್ಲಿ ಸಿಮೆಂಟು...! ಇದು ಸಾಯಿಪ್ರಕಾಶ್ ಸೆಂಟಿಮೆಂಟ್ ಸಿನಿಮಾದಲ್ಲಿ ಕಾಣಬಹುದಾದ ದೃಶ್ಯ Whyಭವಗಳು. ಅದು ಅವರ ಚಿತ್ರಗಳಲ್ಲಿ ಮತ್ತೆ ಮತ್ತೆ ಮರುಕಳಿಸುವುದು ಯಾಕೆ ಎನ್ನುವುದಕ್ಕಿಂತ, ಅದು ಸಾಯಿ ಪ್ರಕಾಶ್ ಚಿತ್ರಗಳಲ್ಲಿ ಮಾಮೂಲು ಎನ್ನಬಹುದು.
ಚಿತ್ರ ವಿಮರ್ಶೆ: ಐಪಿಸಿ ಸೆಕ್ಷನ್ 300ಕಡಿಮೆ ಬಜೆಟ್, ಸೀಮಿತ ಸನ್ನಿವೇಶಗಳು, ಕ್ಷಣಕ್ಷಣಕ್ಕೂ ಕುಹೂಹಲಕ್ಕೆ ಮುನ್ನುಡಿ ಬರೆಯುವ ನಿರೂಪಣೆ, ಸಣ್ಣ ಎಳೆ ಆಧರಿಸಿದ ಕತೆಗೆ ಎರಡೂವರೆ ತಾಸು ಬೋರ್ ಆಗದ ರೀತಿಯಲ್ಲಿ ಹೆಣೆಯಲಾದ ಚಿತ್ರಕತೆ, ಕೌತುಕಕ್ಕೆ ಕಾರಣವಾಗುವ ಪಾತ್ರಗಳು...ಈ ಮಾದರಿಯ ಚಿತ್ರಗಳು ಕನ್ನಡದಲ್ಲಿ ಕಡಿಮೆ. ಸುನಿಲ್ ಕುಮಾರ್ ದೇಸಾಯಿ, ವೇಮಗಲ್ ಜಗನ್ನಾಥ್ ಮೊದಲಾದವರು ಇಂಥ ಪ್ರಯೋಗ ಮಾಡಿ, ಗೆದ್ದಿದ್ದರು. ಈಗ ಅದೇ ಹಾದಿಯಲ್ಲಿ..
ಚಿತ್ರ ವಿಮರ್ಶೆ: ಮೂರು ಗುಟ್ಟು, ಒಂದು ಸುಳ್ಳು, ...ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ ಒಂದು ಮನೆ. ಅಲ್ಲಲ್ಲ `ಭೂತ' ಬಂಗಲೆ. ಕೂಡು ಕುಟುಂಬ. ಅಪ್ಪ, ಅಮ್ಮ, ಅಣ್ಣ, ತಂಗಿಯರು...ಅಪ್ಪ ಅಮ್ಮ ತಿರುಪತಿಗೆ ಹೊರಡುತ್ತಾರೆ. ಆಗ ಮಕ್ಕಳೆಲ್ಲಾ ಸೇರಿ ತಮ್ಮ ಡೌ ಕಹಾನಿ ಓಪನ್ ಮಾಡುತ್ತಾರೆ. ಆ ರಾತ್ರಿ ಬೆಳಗಾಗುವ ಹೊತ್ತಿಗೆ ಅಲ್ಲಿ ಏನೇನೇನೊ ನಡೆಯುತ್ತದೆ... ಇದು ಪಕ್ಕಾ ದಿನೇಶ್ ಬಾಬು ಮಾದರಿಯ ಸಿನಿಮಾ..
ವಿಮರ್ಶೆ:ಹಾಡಿನ ಹಂಗಾಮದ ಪರಿಚಯನಡೆದಾಡುವಾ ಕಾಮನ ಬಿಲ್ಲು.... ಉಸಿರಾಡುವಾ ಬೊಂಬೆಯು ಇವಳು... ಸಿಗಲಾರಳು ಹೋಲಿಕೆಗಿವಳು... ಹೀಗೆ ಪರದೆ ಮೇಲೆ ಆ ಹಾಡು ಓಡುತ್ತಿದ್ದರೆ ಜನ ಸಿಳ್ಳೆಯ ಪಟಾಕಿ ಸಿಡಿಸುತ್ತಾರೆ. ಅದು ಮುಗಿದ ನಂತರ ಮತ್ತೆ ಬರುತ್ತದೆ... ಎದೆಯಲ್ಲಿ ಕನಸು ನೂರು ಜಿಗಿ ಜಿಗಿ ಜಿಗಿದು... ಇಡೀ ಚಿತ್ರ ಹಾಡಿನ ಹಂಗಾಮ. ಸಾಹಿತ್ಯದ ಸರಿಗಮ. ಕವಿರಾಜ್ ಇಲ್ಲಿ ಮಹಾರಾಜ್. ಜಯಂತ್ ಕಾಯ್ಕಿಣಿ ಮಹಾಮಂತ್ರಿ...
ಚಿತ್ರ ವಿಮರ್ಶೆ: ಈ ಯೋಗಿ ಆಗಿಲ್ಲ ಆ ಜೋಗಿ...!ನಾಯಕ ಹೋಟೆಲ್ ಸರ್ವರ್. ನಗುತ್ತಾನೆ, ನಗಿಸುತ್ತಾನೆ. ಜಿಂಕೆ ಮರಿಯಂತೆ ಜಿಗಿಯುತ್ತಾನೆ. ಪಡ್ಡೆ ಹುಡುಗರ ಸಂಗ ಮಾಡಿ, ತರಲೆಯಾಟ ಆಡುತ್ತಾನೆ... ಆತ ಪುನೀತ್ ಫ್ಯಾನ್ ಆಗಿರುತ್ತಾನೆ. ಒಂದಷ್ಟು ಅಪ್ಪು ಕುರಿತ ಬಿಲ್ಡಪ್ಪು. ಲಾಂಗು, ಮಚ್ಚು, ಪ್ರೇಮ-ಗೀಮ. ಮತ್ತೆ ವಿರಹ ಗೀತೆ. ಅದೇ ಕತೆ, ಅದೇ ವ್ಯಥೆ... ಇನ್ನೇನು ಮತ್ತೆ? ನಿರ್ದೇಶಕ ಉದಯ ಪ್ರಕಾಶ್ ಇಲ್ಲಿ ಸೋತಿದ್ದಾರಾ ಎಂಬ ಪ್ರಶ್ನೆಗೆ..
'ಯಾರದು?' ಯಾಕೆ ನೋಡಬೇಕು?ಚಿತ್ರ ಚೆನ್ನಾಗಿದೆ, ನಾನು ನೋಡಿ ಆನಂದಿಸಿದೆ, ನೀವೂ ಯಾಕೆ ನೋಡಬಾರದು ಎಂದು ಆನಂದರಾಮ ಶಾಸ್ತ್ರೀ ಕೇಳುತ್ತಾರೆ ಮತ್ತು ಚಿತ್ರ ವಿಮರ್ಶೆ ಮಾಡುತ್ತಾರೆ.’ಯಾರದು?’ ಕನ್ನಡ ಚಲನಚಿತ್ರ ನೋಡಿ ಈ ಲೇಖನ ಬರೆಯುತ್ತಿದ್ದೇನೆ. 125 ನಿಮಿಷಗಳ ಈ ಚಿತ್ರ ನೋಡುತ್ತಿರುವಾಗ ಪ್ರೇಕ್ಷಕನಿಗೆ ಒಂದು ನಿಮಿಷವೂ ಬೋರೆನಿಸುವುದಿಲ್ಲ. ರಹಸ್ಯಮಯ ಕಥಾವಸ್ತು, ಕುತೂಹಲ ಕೆರಳಿಸುತ್ತ ಸಾಗುವ ಚಿತ್ರಕಥೆ, ಚುರುಕಾದ ಸಂಕಲನ (ಎಡಿಟಿಂಗ್), ಅದ್ಭುತ..
ಹುಚ್ಚರ ಪ್ರೀತಿಯ ಮೆಚ್ಚಿದವನೇ ಜಾಣ!ಒಬ್ಬ ರಾಜ ಇರುತ್ತಾನೆ. ಅವನು ಉದಯ ಟಿವಿ ನೋಡುತ್ತಾನೆ.ಪಕ್ಕದಲ್ಲಿ ಒಂದು ಕೊಕ್ಕರೆ ಇರುತ್ತದೆ. ಆಗ ಹಾಲಿನವನೊಬ್ಬ ಬರುತ್ತಾನೆ. ಅದೇ ಹೊತ್ತಿಗೆ ನೆರೆ ಪರಿಹಾರ ನಿಧಿಯವರು ಬರುತ್ತಾರೆ. ಬಚ್ಚಲು ಮನೆಯಲ್ಲಿ ನೀರು ಸುರಿದ ಅನುಭವ. ಮತ್ತೆ ಮಳೆ. ಈ ಮಧ್ಯೆ ಚಿತ್ರಾನ್ನದ ಘಮಘಮ. ಪಕ್ಕದ ಮನೆಯ ನಾಯಿಮರಿ ಕುಯ್ ಕುಯ್ ಎನ್ನುತ್ತದೆ. ರೈಲಿನಲ್ಲಿ ಚುಕುಬುಕು ಸದ್ದು. ಎಲ್ಲಾ ಮುಗಿದು..
ಹತ್ತು ನಿಮಿಷವೂ ಬೋರ್ ಹೊಡೆಸದ ಯಾರದು?ದಟ್ಟ ಕಾಡು. ಬೆಂಗಳೂರಿನ ಟ್ರಾಫಿಕ್ ಜಾಮ್ ಥರಸಾಲಾಗಿ ನಿಂತ ಮರಗಳು. ಕತ್ತಲೆಯನ್ನೇ ಮೀರಿಸುವ ಕತ್ತಲು. ಅಲ್ಲೊಂದು ದೈತ್ಯ ಬಂಗಲೆ. ಕಿಟಾರ್ ಕಿರುಚಾಟ. ಗೂಬೆಗಳ ಕಚ್ಚಾಟ. ದೆವ್ವಗಳ ತುಂಟಾಟ. ಅಹೋರಾತ್ರಿ ಅಲ್ಲಿಗೆ ಒಂದಷ್ಟು ಮಂದಿ ಬರುತ್ತಾರೆ. ಬಂದವರು ಹೋದ ಹಾದಿಯಲ್ಲಿ ಬೂದಿಯಾಗುತ್ತಾರೆ. ಮತ್ತಷ್ಟು ಮಂದಿ ಮಾಯವಾಗುತ್ತಾರೆ. ಎಲ್ಲಿಗೆ ಹೋದರು?ಹೋದವರು ಏನಾದರು? ಏನೇನೋ ಆಗಲು ಏನು ಕಾರಣ? ಈ ಎಲ್ಲಾ..
ಬಳ್ಳಾರಿ ನಾಗ: ವಿಷ್ಣು ದಿ ರಿಯಲ್ ಶೋ ಮ್ಯಾನ್!ಕಲರ್ ಕಲರ್ ಜುಬ್ಬಾ, ಮಿರ ಮಿರ ಪೀತಾಂಬರ ಪಂಚೆ. ಈಗ ಕೆಂಪು, ಕಟ್ ಮಾಡಿದರೆ ಹಸಿರು, ಮತ್ತೈದು ನಿಮಿಷದಲ್ಲಿ ಕಪ್ಪು, ಮತ್ತೆ ಕೆಂಪು... ಹೀಗೆ ದೃಶ್ಯದಿಂದ ದೃಶ್ಯಕ್ಕೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುವ ಬಟ್ಟೆ... ಆತನೇ ಬೇರೆ ಆತನ ಸ್ಟೈಲೇ ಬೇರೆ...ನಿಂತರೆ ನಾಗ, ಕುಂತರೆ ಕಾಳ, ಕೈ ಎತ್ತಿದರೆ ಭೈರವ, ಚೀರಿದರೆ ಚಿರತೆ, ಹುಬ್ಬೇರಿಸಿದರೆ ಹುಲಿ, ಧಾವಿಸಿ ಬಂದರೆ..
ವಿಮರ್ಶೆ:ಯಾವ ಜನ್ಮದ 'ಪೂಜಾ' ಫಲ?!ಇಲ್ಲಿ ಪೂಜಾ ಗಾಂಧಿ ಮಿಸ್ ಮೆಂಟಲ್ ಮಂಜಿ, `ಕಲ್ಪನಾ' ಲೋಕದ ಮಾನಸ ಸರೋವರದಲ್ಲಿ ಮಿಂದೆದ್ದ ಅಭಿನವ ಶರಪಂಜರಿ, ಮಂಜರಿ ರತ್ನಮಂಜರಿ! ಇಲ್ಲಿ ಇಟ್ಟಿದ್ದೇ ಕ್ಯಾಮೆರಾ, ಮಾಡಿದ್ದೇ ನಟನೆ, ತೋರಿಸಿದ್ದೇ ಸೀನು, ಆಡಿದ್ದೇ ಆಟ. ನಾಯಕಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆ. ಬಾಲ್ಯದಲ್ಲಿ ಕಂಡ ಕಷ್ಟ ಆಕೆಯನ್ನು ಹಾಗೆ ಮಾಡಿರುತ್ತದೆ.ಬೆಕ್ಕನ್ನು ಹುಲಿ ಎನ್ನುತ್ತಾಳೆ, ಹುಲಿಯನ್ನು ಇಲಿಗೆ ಹೋಲಿಸುತ್ತಾಳೆ. ಹಗ್ಗ ಕಂಡರೆ..