clear
clear
clear
clear
ಮುಖಪುಟ » ಚಲನಚಿತ್ರ » ಗಾನ ಕೋಗಿಲೆ
ಕನ್ನಡ ಹಾಡುಗಳು, ಕ್ಯಾಸೆಟ್ ಬಿಡುಗಡೆ ಇತ್ಯಾದಿ

ತಿಪಟೂರಿನಲ್ಲಿ 'ಒಲವೇ ವಿಸ್ಮಯ' ಧ್ವನಿಸುರುಳಿ
ತೆಂಗಿನ ನಾಡು ತಿಪಟೂರಿನಲ್ಲಿ 'ಒಲವೇ ವಿಸ್ಮಯ' ಸಿಡಿ ಮತ್ತು ಧ್ವನಿಸುರುಳಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳನ್ನು ಬಿಡುಗಡೆ ಮಾಡಿದರು. ಚಿತ್ರದ ನಿರ್ಮಾಪಕ ಲಿಂಗರಾಜು ಅವರ ಹುಟ್ಟೂರು ತಿಪಟೂರು. ಹಾಗಾಗಿ ಧ್ವನಿಸುರುಳಿ ಮತ್ತು ಸಿಡಿಗಳನ್ನು ಅಲ್ಲೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.ನಿರ್ದೇಶಕ ನಾಗೇಶ್ ಕುಮಾರ್ ಹೇಳಿದ ಕತೆ ಲಿಂಗರಾಜು ಅವರಿಗೆ ಹಿಡಿಸಿತಂತೆ. ಚಿತ್ರಕತೆ


ಸೆರೆಮನೆ ಹಕ್ಕಿಗಳ ಜತೆ ಹಾಡುಹಕ್ಕಿ ರಘು ದೀಕ್ಷಿತ್
'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಎನ್ನುವ ಜನಪ್ರಿಯ ಹಾಡಿನ ಮೂಲಕ ಮನೆಮಾತಾಗಿರುವ ರಘು ದೀಕ್ಷಿತ್ ತನ್ನ 36ನೇ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು. ಗುರುವಾರ (ನ.12) ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಹಬ್ಬದ ವಾತಾವರಣ. ಜೈಲಿನ ಮೈದಾನದಲ್ಲಿ ರಘು ಸಂತ ಶಿಶುನಾಳ ಷರೀಫರ ಹಾಡನ್ನು ತನ್ನದೇ ವಿಶಿಷ್ಟ ರಾಕ್ ಮ್ಯೂಸಿಕ್ ಶೈಲಿಯಲ್ಲಿ ಹಾಡುತ್ತಿದ್ದರೆ ಖೈದಿಗಳು ಕುಣಿದು ಕುಪ್ಪಳಿಸಿ..


ಪುನೀತ್ 'ರಾಮ್' ಚಿತ್ರದ ಧ್ವನಿಸುರುಳಿ ವಿಮರ್ಶೆ
ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ ನಟನೆಯ 'ರಾಮ್' ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳು ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿರುವುದು ಗೊತ್ತೇ ಇದೆ. 'ರೆಡಿ ಫಾರ್ ಎನಿಥಿಂಗ್' ಎಂಬುದು ಚಿತ್ರದ ಅಡಿಬರಹ. ಚಿತ್ರದ ಹಾಡುಗಳು ಹೇಗಿವೆ ಎಂದು ಕೇಳುವವರಿಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ರಾಮ್' ಚಿತ್ರದ ಸಂಗೀತ ಮತ್ತು ಹಾಡುಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಗಜ, ಗಾಳಿಪಟ, ಪಯಣ, ಕೃಷ್ಣ..


ಜುಗಾರಿ ಧ್ವನಿಸುರುಳಿ ಮಾರುಕಟ್ಟೆಗೆ
'ಜುಗಾರಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಜತೆಗೆ ಹಿರಿಯ ಕಲಾವಿದರಾದ ಶನಿ ಮಹದೇವಪ್ಪ, ಅಕ್ಕಿ ಚನ್ನಬಸಪ್ಪ, ರತ್ನಾಕರ, ಬೆಂಗಳೂರು ನಾಗೇಶ್ ಹಾಗೂ ರೇಣುಕಾ ಪ್ರಸಾದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 'ಜುಗಾರಿ' ಚಿತ್ರ ನಿರ್ಮಾಪಕ ರಮೇಶ್ ಮತ್ತು ಚಿತ್ರತಂಡ ವತಿಯಿಂದ ಕಲಾವಿದರಿಗೆ ರು.10,000 ಗೌರವ ಧನ ನೀಡಲಾಯಿತು. ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ..


'ಯಾರೆ ನೀ ದೇವತೆ'ಸಿಡಿ ಬಿಡುಗಡೆ ಮಾಡಿದ ಎಚ್ಡಿಕೆ
ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು 'ಯಾರೆ ನೀ ದೇವತೆ' ಚಿತ್ರದ ಧ್ವನಿಸುರುಳಿಯನ್ನು ಗುರುವಾರ(ನ.6) ಬೆಲ್ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಔಪಚಾರಿಕವಾಗಿ 'ಯಾರೆ ನೀ ದೇವತೆ' ಸಿಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.ಕುಮಾರ್ ಎಂಬುವವರ ಚೊಚ್ಚಲ ಪ್ರಯತ್ನದ ಫಲವೇ ಯಾರೇ ನೀ ದೇವತೆ...


ಮೈಸೂರಿನಲ್ಲಿ 'ರಾಮ್' ಧ್ವನಿಸುರುಳಿ ಅನಾವರಣ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಪೈ ವೈಸ್ ರಾಯ್ ನಲ್ಲಿ ಬುಧವಾರ (ನ.4) ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. 'ಶಂಕರ್ ಐಪಿಎಸ್'ಚಿತ್ರೀಕರಣದಿಂದ ನೇರವಾಗಿ ವಿಜಯ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪೊಲೀಸ್ ದಿರಿಸಿನಲ್ಲಿದ್ದ ವಿಜಯ್ ಧ್ವನಿಸುರುಳಿಯನ್ನು ಅನಾವರಣ ಮಾಡಿದರು.ಶ್ರೀರಂಗಪಟ್ಟಣದಲ್ಲಿ 'ಪೃಥ್ವಿ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪುನೀತ್..


ದೇವರು ಕೊಟ್ಟ ತಂಗಿ ಧ್ವನಿಸುರುಳಿ ಹಿಟ್!
ಸಾಯಿಪ್ರಕಾಶ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳೆಲ್ಲಾ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಇದೀಗ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಕಳೆದ ತಿಂಗಳು ಬಿಡುಗಡೆಯಾದ ಚಿತ್ರದ ಧ್ವನಿಸುರುಳಿಗಳು ರಾಜ್ಯಾದ್ಯಂತ ಭರ್ಜರಿ ಮಾರಾಟ ಕಂಡು ಕ್ಯಾಸೆಟ್ ಕಂಪೆನಿಗೆ ಈಗಾಗಲೇ ಲಾಭ ತಂದುಕೊಟ್ಟಿವೆ. ನಾಯಕನಾಗಿ ಶಿವರಾಜ್‌ಕುಮಾರ್, ತಂಗಿಯಾಗಿ ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಗೂ ನಾಯಕಿಯಾಗಿ..


'ಫೀವರ್ 104'ನಲ್ಲಿ ಕನ್ನಡರಾಜ್ಯೋತ್ಸವ ಸಪ್ತಾಹ
ಕನ್ನಡ ರಾಜ್ಯೋತ್ಸವನ್ನು ವಿಭಿನ್ನವಾಗಿ ಆಚರಿಸುವ ಪ್ರಯತ್ನಕ್ಕೆ ಜನಪ್ರಿಯ ಎಫ್ ಎಂ ವಾಹಿನಿ 'ಫೀವರ್ 104' ಮುಂದಾಗಿದೆ .'ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ' ಎಂಬ ಭಿನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈಗಾಗಲೇ ಆರಂಭವಾಗಿರುವ ಈ ಕಾರ್ಯಕ್ರಮ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೂ ಒಂದು ವಾರ ಕಾಲ ನಡೆಯಲಿದೆ. ಒಂದು ವಾರ ಕಾಲ ವಿವಿಧ ಕ್ಷೇತ್ರಗಳಲ್ಲಿ..


ರತ್ನಜ ವಿಭಿನ್ನ ಪ್ರಯತ್ನ 'ಪ್ರೇಮಿಸಂ '
ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ 'ಪ್ರೇಮಿಸಂ'. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತು ಅಜಯ್ ಗೌಡ ಅವರು ಪ್ರೇಮಿಸಂ ಎಂಬ ಹೊಸ ಅಸ್ತ್ರ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಹೊಂಗನಸು' ಚಿತ್ರದಲ್ಲಿ ಅಜಯ್, ಹಂಸ್ ಮತ್ತು ರತ್ನಜ ಎಡವಿದ್ದರು. ಹಾಗಾಗಿ 'ಪ್ರೇಮಿಸಂ' ಚಿತ್ರವನ್ನು ಜಾಗುರೂಕತೆಯಿಂದ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ..


'ದಿಲ್ದಾರ' ಧ್ವನಿಸುರುಳಿ ಮಾರುಕಟ್ಟೆಗೆ
ಜನಪ್ರಿಯ ಗಾಯಕ ಮತ್ತು ಸಂಗೀತಗಾರ ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನದ ಚೊಚ್ಚಲ ಚಿತ್ರ 'ದಿಲ್ದಾರ'. ಈ ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳನ್ನು ಸಂಗೀತ ನಿರ್ದೇಶಕ ವಿ ಮನೋಹರ್ ಬುಧವಾರ(ಅ.21) ಬಿಡುಗಡೆ ಮಾಡಿದರು. ಅಮರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಿತ್ರದ ನಾಯಕ ನಟನೂ ಆಗಿರುವ ಅಮನ್ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ರೇಷ್ಮಾ ಚೆಂಗಪ್ಪ ನಾಯಕಿಯಾಗಿ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು