ವಿಶ್ವ ಚಿತ್ರೋದ್ಯಮದಲ್ಲಿ ಸುನಾಮಿ 2012!ತೀವ್ರ ಕುತೂಹಲ ಕೆರಳಿಸಿರುವ ಮತ್ತು ಚಿತ್ರ ರಸಿಕರು ಕಾತುರದಿಂದ ನಿರೀಕ್ಷಿಸುತ್ತಿರುವ ಪ್ರಳಯ ಕುರಿತ ಹಾಲಿವುಡ್ ಚಿತ್ರ '2012' ನವೆಂಬರ್ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರೋಲಂಡ್ ಎಮ್ಮೆರಿಚ್ ನಿರ್ದೇಶಿಸಿದ್ದಾರೆ. ಕೊಲಂಬಿಯಾ ಫಿಕ್ಚರ್ಸ್ ವಿಶ್ವದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡಿದ್ದು ಈಗಾಗಲೆ ಈ ಚಿತ್ರಕ್ಕೆ ಮುಂಗಡ ಬುಕಿಂಗ್ ಆರಂಭವಾಗಿದೆ.ವಿಶ್ವ ಚಲನಚಿತ್ರ ಚರಿತ್ರೆಯಲ್ಲಿ ಅತ್ಯಧಿಕ ಬಡ್ಜೆಟ್ ನಲ್ಲಿ ನಿರ್ಮಿಸಿರುವ
ಜಾಕ್ಸನ್ ಕುರಿತ ಕೊನೆಯ ಚಿತ್ರ 'ದಿಸ್ ಈಸ್ ಇಟ್'ಬಹಳಷ್ಟು ಕುತೂಹಲ ಮೂಡಿಸಿದ್ದ ಪಾಪ್ ದೊರೆ ಮೈಕಲ್ ಜಾಕ್ಸನ್ ಕುರಿತಾದ 'ದಿಸ್ ಈಸ್ ಇಟ್'ಚಲನಚಿತ್ರ ಇದೀಗ ಬಿಡುಗಡೆಯಾಗಿದೆ. ಕೇವಲ ಎರಡು ವಾರಗಳ ಕಾಲ ಮಾತ್ರ ಈ ಚಿತ್ರ ಪ್ರದರ್ಶನ ಕಾಣಲಿದ್ದು ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಿದೆ.ಲಂಡನ್ ಕ್ಯೂ 2 ಅರೆನಾದಲ್ಲಿ ನಡೆಯಬೇಕಾಗಿದ್ದ ಶೋಗಾಗಿ ಕಠಿಣ ತಯಾರಿಯಲ್ಲಿದ್ದಾಗಲೇ ಜಾಕ್ಸನ್ ಅಗಲಿದ್ದರು. ಅವರ ಅಭಿಮಾನಿಗಳು ಇನ್ನೂ ಈ ಶಾಕ್ ನಿಂದ..
ಪಂಕಜ್ ಅದ್ವಾನಿಯ ಹಾಲಿವುಡ್ ಚಿತ್ರಬಿಲಿಯರ್ಡ್ಸ್ ನ ವಿಶ್ವಚಾಂಪಿಯನ್ ಪಂಕಜ್ ಅದ್ವಾನಿ ಹಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದೇನಿದು ಮೊನ್ನೆ ತಾನೆ ಬ್ರಿಟನ್ನಿನ ಲೀಡ್ಸ್ ನಲ್ಲಿ ಮಾರ್ಕ್ ರಸೆಲ್ ಅವರನ್ನು ಮಣಿಸುವ ಮೂಲಕ ವೃತ್ತಿಪರ ಬಿಲಿಯರ್ಡ್ಸ್ ವಿಶ್ವಚಾಂಪಿಯನ್ ಎನ್ನಿಸಿಕೊಂಡರಲ್ಲಾ! ಇಷ್ಟು ಬೇಗನೆ ನಿವೃತ್ತಿ ಘೋಷಿಸಿಕೊಂ ಡರಾ ಹೇಗೆ ಎಂದು ಅನುಮಾನವೇ? ಹಾಗೇನಿಲ್ಲ, ಅವರದೇ ಜೀವನ ಕತೆ ಬೆಳ್ಳಿತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ..
ಹಾಲಿವುಡ್ ಚಿತ್ರದಲ್ಲಿ ಹನುಮಂತನಾಗಿ ಅಮೀರ್ಹತ್ತಾರು ಭಾಷೆಗಳಲ್ಲಿ ಚಲನಚಿತ್ರ ರೂಪದಲ್ಲಿ ಹೊರಬಂದಿರುವ ಮಹಾಕಾವ್ಯ ರಾಮಾಯಣ ಇದೀಗ ಹಾಲಿವುಡ್ ಗೂ ಅಡಿಯಿಟ್ಟಿದೆ. ಹಾಲಿವುಡ್ 'ಹನುಮಾನ್' ಚಿತ್ರದಲ್ಲಿ ಅಮೀರ್ ಖಾನ್ ಹನುಮಂತನ ಪಾತ್ರ ಪೋಷಿಸಲಿದ್ದಾರೆ. 'ಮ್ಯಾಟ್ರಿಕ್ಸ್' ಖ್ಯಾತಿಯ ಕೀನು ರೀವ್ಸ್ ರಾಮನಾಗಿ ಅಭಿನಯಿಸಲಿದ್ದಾರೆ.'ನಿಲ್ ಬೈ ಮೌತ್' ಖ್ಯಾತಿಯ ಗ್ಯಾರಿ ಓಲ್ಡ್ ಮನ್ ರಾವಣನಾಗಿ ಕಾಣಿಸಲಿದ್ದಾರೆ. ಹನುಮಂತನ ಪಾತ್ರವನ್ನು ಪೋಷಿಸುವಂತೆ ಈಗಾಗಲೇ ಅಮೀರ್ ಖಾನ್ ಅವರನ್ನು ಸಂಪರ್ಕಿಸಿ..
ಮೈಕೇಲ್ ಜಾಕ್ಸನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ?ಪಾಪ್ ಸಂಗೀತ ಗಾರುಡಿಗ ಮೈಕೇಲ್ ಜಾಕ್ಸನ್ ಗೆ ಮರಣೋತ್ತರನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಅವರ ಅಪಾರ ಅಭಿಮಾನಿ ಬಳಗ ಒಕ್ಕೊರಲ ಧ್ವನಿಯೆತ್ತಿದೆ. ಇದಕ್ಕಾಗಿ ಅಂತರ್ಜಾಲದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಎರಡು ಅಂತರ್ಜಾಲ ತಾಣಗಳ ಮೂಲಕ ನೊಬೆಲ್ ಸಮಿತಿಗೆ ಬೇಡಿಕೆ ಸಲ್ಲಿಸಿದ್ದಾರೆ. ವಿಶ್ವದ ಅತ್ಯುನ್ನತ ನೊಬೆಲ್ ಪುರಸ್ಕಾರಕ್ಕೆ ಜಾಕ್ಸನ್ ಹೆಸರನ್ನು ನಾಮನಿರ್ದೇಶನ ಮಾಡಲು ಪಣ ತೊಟ್ಟಿದ್ದಾರೆ. ಈ..
ನಟಿ ಸಾಂಡ್ರಾ ಬುಲಕ್ ಒಡಲಾಳದ ಕಥೆಗಳುಇನ್ನೊಬ್ಬರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿದರೆ ಅವರಿಗೆ ಎಷ್ಟು ಮುಜಗರ ಉಂಟಾಗುತ್ತದೆ ಎನ್ನುವುದನ್ನು ಈ ಜನ್ಮದಲ್ಲಿ ಅರ್ಥವೇ ಮಾಡಿಕೊಳ್ಳದ ಜನ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇರುತ್ತಾರೆ. ಎಡಪಕ್ಕದ ಮನೆಯ ಆಗುಹೋಗುಗಳ ಎಲೆಅಡಿಕೆ ಜಗಿಯುವ ಹವ್ಯಾಸ ಇನ್ನಾದರೂ ಬಿಡಿ ಎಂದು ನೀವು ಬಲಪಕ್ಕದ ಮನೆಯವರಿಗೆ ಹೇಳಲೇಬೇಕಾದ ಕಾಲ ಇದೀಗ ನಿಮ್ಮ ಮನೆ ಬಾಗಿಲ ಬಳಿಬಂದು ನಿಂತಿದೆ. ಪರಿಸ್ಥಿತಿ ಹಾಗಿದೆ...
ವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ಜಾಗತಿಕ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಹ್ಯಾರಿ ಪಾಟರ್ ಮೊದಲ ಭಾಗ ತೆರೆಕಂಡು ಈಗ್ಗೆ ಒಂಭತ್ತು ವರ್ಷಗಳೇ ಜಾರಿವೆ. ಆದರೆ ಈ ಚಿತ್ರದ ಮತ್ತು ಪುಸ್ತಕದ ಬಗೆಗೆ ಪ್ರೇಕ್ಷಕರಲ್ಲಿ ಇರುವ ಆಸಕ್ತಿ ಕಿಂಚಿತ್ತೂ ಕುಗ್ಗಿಲ್ಲ. ಕೋಟ್ಯಂತರ ಸಿನಿ ಪ್ರೇಮಿಗಳನ್ನು ಮತ್ತು ಕಾದಂಬರಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದ ಹಿರಿಮೆ ಹ್ಯಾರಿ ಪಾಟರ್ ಗೆ ಸಲ್ಲಬೇಕು. ಸಲ್ಲುತ್ತದೆ.ಹ್ಯಾರಿ ಪಾಟರ್ ನ..
ಹಾಲಿವುಡ್ ಗೆ ಹಾರಿದ ಅನಿಲ್ ಅಂಬಾನಿನ್ಯೂಯಾರ್ಕ್, ಜು. 16 : ಖ್ಯಾತ ಉದ್ಯಮಿ ರಿಲೈಯನ್ಸ್ ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿ ಹಾಗೂ ಹಾಲಿವುಡ್ ಚಿತ್ರ ನಿರ್ಮಾಪಕ ಸ್ಟೀವನ್ ಸ್ಫೀಲ್ ಬರ್ಗ್ ಜೊತೆಗೂಡಿ 825 ಮಿಲಿಯನ್ ಡಾಲರ್ ವೆಚ್ಚದಲ್ಲಿ ಡ್ರೀಮ್ ವರ್ಕ್ಸ್ ಸ್ಟುಡಿಯೋ ಎಂಬ ನೂತನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅನಿಲ್ ಅಂಬಾನಿ ಅವರ ಜಾಗತಿಕ ಮಟ್ಟದ ಚಿತ್ರಸಂಸ್ಥೆಯ ಕನಸು ಸಾಕಾರಗೊಂಡಿದ್ದು, ಜಾಗತಿಕ..
ಮೈಕಲ್ ಜಾಕ್ಸನ್ ಸಲಿಂಗಕಾಮಿಯಾಗಿದ್ದರೆ?ಇತ್ತೀಚಿಗೆ ನಿಧನ ಹೊಂದಿದ ಪಾಪ್ ಲೋಕದ ದೊರೆ ಮೈಕಲ್ ಜಾಕ್ಸನ್ ಸಲಿಂಗಕಾಮಿಯಾಗಿದ್ದು ಪುರುಷ ಪ್ರೇಮಿಗಳೊಂದಿಗೆ ಸಂಬಂಧ ಹೊಂದಿದ್ದ ಎಂದು ಜೀವನ ಚರಿತ್ರೆಕಾರ ಲಾನ್ ಹೆಲ್ಪರಿನ್ ತಮ್ಮ ಪುಸ್ತಕ 'Unmasked: The Final Years of Michael Jackson' ಎನ್ನುವ ಪುಸ್ತಕದಲ್ಲಿ ಹೇಳಿರುವುದಾಗಿ ಸನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.ಜಾಕ್ಸನ್ ಮಧ್ಯರಾತ್ರಿ ಮಹಿಳೆಯ ರೀತಿ ವೇಷ..
ಟ್ಯಾಗೋರ್ ಗೀತೆಗಳಿಗೆ ಮರುಳಾಗಿದ್ದ ಜಾಕ್ಸನ್ಲಂಡನ್, ಜು. 1 : ಪಾಪ್ ಲೋಕದ ಅನರ್ಘ್ಯ ರತ್ನ ಮೈಕಲ್ ಜಾಕ್ಸನ್ ಅವರಿಗೆ ಭಾರತದ ಬಗ್ಗೆ ವಿಶೇಷ ಪ್ರೀತಿ ಇತ್ತು. ಸ್ಲಂಡಾಗ್ ಮಿಲೇನಿಯರ್ ಚಿತ್ರಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರೊಂದಿಗೆ ನೊಬೆಲ್ ಪುರಷ್ಕೃತ ಸಾಹಿತಿ ರವೀಂದ್ರನಾಥ್ ಟ್ಯಾಗೋರ್ ಅವರ ಗೀತೆಗೆ ರಾಗ ಸಂಯೋಜನೆ ಮಾಡುವ ಹಂಬಲ ಅವರಿಗಿತ್ತು ಎಂದು..