clear
clear
clear
clear
ಮುಖಪುಟ » ಚಲನಚಿತ್ರ » ನಾಯಕಿ » ಪೂರ್ಣಪಾಠ
ನಟಿ ಇಷಾ ಕೊಪ್ಪಿಕರ್ ಗೆ ಕೂಡಿಬಂತು ಕಂಕಣಬಲ

ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ನಟಿ ಇಷಾ ಕೊಪ್ಪಿಕರ್ ಗೆ ಕಂಕಣಬಲ ಕೂಡಿಬಂದಿದೆ. ಈಕೆಯ ಪೋಷಕರು ಮಂಗಳೂರು ಮೂಲದವರಾದರೂ ಹುಟ್ಟಿದ್ದು ಮಾತ್ರ ಮುಂಬೈನಲ್ಲಿ. ರೂಪದರ್ಶಿಯಾಗಿದ್ದ ಇಷಾ ನಟಿಯಾಗಿ ಬಾಲಿವುಡ್ ನಲ್ಲೂ ಮಿಂಚಿದವರು.

ಇಷ್ಟಕ್ಕೂ ಇಷಾ ಕೈಹಿಡಿಯುತ್ತಿರುವುದು ಯಾರನ್ನು ಅಂತೀರಾ? ತನ್ನ ಬಹುಕಾಲದ ಬಾಯ್ ಫ್ರೆಂಡ್ ಟಿಮ್ಮಿ ನಾರಂಗ್ ಅವರನ್ನು.ಮದುವೆಯಾಗುತ್ತಿದ್ದಾರೆ. ನವೆಂಬರ್ 29ರಂದು ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತವೆ ಮೂಲಗಳು. ಇಷಾ ಕೈಹಿಡಿಯುತ್ತಿರುವ ಟಿಮ್ಮಿ ನಾರಂಗ್ ವೃತ್ತಿಯಲ್ಲಿ ಹೋಟೆಲ್ ಉದ್ಯಮಿ.

ಇಷಾ ಕೊಪ್ಪಿಕರ್ ಕನ್ನಡದ 'ಹೂ ಅಂತೀಯಾ ಊಹು ಅಂತೀಯ', 'ಓ ನನ್ನ ನಲ್ಲೆ' ಮತ್ತು 'ಸೂರ್ಯವಂಶ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಮದುವೆ ಬಗ್ಗೆ ಪುಳಕಗೊಂಡಿರುವ ಇಷಾ, ಮದುವೆ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳ್ತಾರಾ? ಚಿತ್ರರಂಗದಲ್ಲಿ ಮುಂದುವರಿಯಲು ಟಿಮ್ಮಿ ಬಹಳಷ್ಟು ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರರಂಗ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಇಷಾ.

ಈಕೆ ಈಗಾಗಲೇ ಹಿಂದಿಯಲ್ಲಿ ಸಹಿ ಹಾಕಿ ನಟಿಸುತ್ತಿರುವ ಮೂರು ಚಿತ್ರಗಳು ಬಿಡುಗಡೆಯಾಗಬೇಕಿವೆ. ಹಲೋ ಡಾರ್ಲಿಂಗ್, ರೈಟ್ ಯಾ ರಾಂಗ್ ಮತ್ತು ಶಬರಿ ಚಿತ್ರಗಳು 2010ಕ್ಕೆ ತೆರೆಕಾಣುವ ಸಾಧ್ಯತೆ ಇವೆ. ಒಟ್ಟಿನಲ್ಲಿ 'ಸೂರ್ಯವಂಶ'ದ ಪದ್ಮಾ ಮತ್ತು 'ಓ ನನ್ನ ನಲ್ಲೆ'ಯ ರಂಗು ಹುಡುಗಿಗೆ ಮದುವೆ ಶುಭಾಶಯಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ನವೆಂಬರ್ 6, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: magadi ರಾಮ
ದಿನಾಂಕ: 06 Nov 2009 2:47 pm
ಈ yammanige ಎಷ್ಟು varsa ............ ಇನ್ನು madve agirlilva............... baalihud hudgiru, hudugru, ellru hingeya. 45. rinda 50kke madve. ಗೋವಿಂದ ಗೋವಿಂದ....... ನೀನೆ kapadabeku ivarannu.

ಇಂದ: ಗೆಳೆಯ
ದಿನಾಂಕ: 06 Nov 2009 2:24 pm
ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು