clear
clear
clear
clear
ಮುಖಪುಟ » ಚಲನಚಿತ್ರ » ನಾಯಕ » ಪೂರ್ಣಪಾಠ
'ಖುಷಿ' ರೀಮೇಕ್ ಚಿತ್ರಕ್ಕೆ ಗಣೇಶ್, ಪ್ರಿಯಾಮಣಿ

ಇನ್ನೂ ಹೆಸರಿಡದ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರಕ್ಕೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸುತ್ತಿದ್ದು 'ಬಿಂದಾಸ್' ನಿರ್ಮಿಸಿದ್ದ ಎಂ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ತಮಿಳಿನಲ್ಲಿ ವಿಜಯ್ ಮತ್ತು ಜ್ಯೋತಿಕಾ ನಟಿಸಿದ್ದ ಯಶಸ್ವಿ ಚಿತ್ರ 'ಖುಷಿ'ಯನ್ನು ಚಂದ್ರಶೇಖರ್ ಕನ್ನಡಕ್ಕೆ ತರುತ್ತಿದ್ದಾರೆ. ಈಗಾಗಲೇ ಪ್ರಕಾಶ್ ನಿರ್ದೇಶನದಲ್ಲಿ 'ಖುಷಿ'ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಈಗಾಗಲೇ ತೆರೆಕಂಡಿದೆ. ವಿಜಯರಾಘವೇಂದ್ರ, ಸಿಂಧು ಮೆನನ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಾಗಾಗಿ ಈ ರೀಮೇಕ್ ಚಿತ್ರಕ್ಕೆ ಹೊಸ ಶೀರ್ಷಿಕೆ ಹುಡುಕುತ್ತಿದ್ದಾರೆ ನಿರ್ಮಾಪಕರು.

ಈ ಚಿತ್ರವನ್ನು 'ಕಂಠಿ'(ಮುರಳಿ, ರಮ್ಯಾ ನಟನೆಯ ಚಿತ್ರ) ಚಿತ್ರ ನಿರ್ದೇಶಿಸಿದ್ದ ಭರತ್ ನಿರ್ದೇಶಿಸಬೇಕಾಗಿತ್ತಂತೆ. ಆದರೆ ಭರತ್ ಈಗ ಮಾಡುತ್ತೇನೆ ಆಗ ಮಾಡಿಕೊಡುತ್ತೇನೆ ಎಂದು ಕಾಲ ದೂಡಿದ ಕಾರಣ ಬೇಸತ್ತ ನಿರ್ಮಾಪಕರು ಮುಸ್ಸಂಜೆ ಮಹೇಶ್ ಗೆ ನಿರ್ದೇಶನದ ಜವಾಬ್ದಾರಿಯನ್ನು ಕೊಟ್ಟಿದ್ದಾರಂತೆ. ಗಣೇಶ್ ರ 'ಉಲ್ಲಾಸ ಉತ್ಸಾಹ' ಚಿತ್ರ ಬಿಡುಗಡೆಗೆ ತವಕಿಸುತ್ತಿದೆ. ಈ ಮಧ್ಯೆ ಮತ್ತೊಂದು ಹೊಸ ರೀಮೇಕ್ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನವೆಂಬರ್ 5, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: Kiran
ದಿನಾಂಕ: 09 Nov 2009 11:12 am
ರೆ ಸಾಕು ರಿಮೇಕ್ ಮಾಡೋದು,ಗಣೇಶ್ ಅವರೇ ನೀವು ಟೋಪಿ ಹಕೊಬೇಡಿ,ಹಕೊಂದ್ರೆ ಫಿಲಂ ಫ್ಲಾಪ್ ಆಗುತೆ.ನೀಮಗೆ ಆಕ್ಟಿಂಗ್ ಚೆನ್ನಾಗಿ ಬರಿಉತೆ ಆದ್ರೆ ಸ್ಟೋರಿ ಮಾತಾ ಚೆನ್ನಾಗಿ ಇರೋದನ್ನೇ ಸೆಲೆಕ್ಟ್ ಮಾಡಿ ಸರ್.

ಇಂದ: ಅಪರಿಚಿತ
ದಿನಾಂಕ: 08 Nov 2009 10:30 am
ಇದು ರೀರಿಮೇಕ್!!!!!!, ರಿಮೇಕ್ ಒಂಥರಾ ಪಕ್ಕದ ಮನೆ ಕಸ ತಂದು ನಮ್ಮ ಮನೆಗೆ ಹಾಕೊಂಡು ಮತ್ತೆ ಗೂಡ್ಸಿ ಹೊರಗಾಕೋದು. ಆದರೆ ರೀರಿಮೇಕ್ ಅಂದ್ರೆ ಮತ್ತೆ ಅದೇ ಕಸಾನ ವಾಪಸ್ ತಂದು ಅದೇ ಮನೇಲಿ ಇನ್ನೊಬ್ರು ಗೂಡ್ಸೋದು ಒಳ್ಳೆ ಹೆತ್ಹ್ಲಾಂಡಿ ಕೆಲಸ ಇದು. ಅಪ್ಪ ತಂದೆ ಹೊಟ್ಟೆ ಗಣೇಸ ಬರೆ ಹಳೆ ಹಳ್ಸಿದ್ದೆ ತಿನ್ತಿಯಲ್ಲೋ ಹೊಸದೆನರ ಮಾಡೋಪ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು