clear
clear
clear
clear
   
  BSE  16,158.28 +94.38   NSE  4796.15 +30.60   RS/$ 46.96 0.24  at:16:10 Hrs (IST) Nov 6  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ಚಿತ್ರಕುಟೀರ
   ಹಾಡೊಂದ ಕೇಳಿ
   ನಾಯಕ
   ನಾಯಕಿ
   ಚಿತ್ರವಿಮರ್ಶೆ
   ಕಿರಿಕಿರಿ
   ಸ್ಟುಡಿಯೋ ರೌಂಡಪ್
   ಬಾಲಿವುಡ್
   ಹಾಲಿವುಡ್
   ವಿಡಿಯೊ
ಮುಖಪುಟ » ಚಲನಚಿತ್ರ » ನಾಯಕ » ಪೂರ್ಣಪಾಠ
ಗಣೇಶನ ಸದ್ಯದ ನಂಬರ್ ನಾಟ್ ರೀಚಬಲ್!
[IST]
*ಜಯಂತಿ

2006 ರ ಗಣೇಶ

Ganesh
ಪ್ರೆಸ್ ಕಾನ್ಫರೆನ್ಸ್‌ನ ಸ್ಥಳ. ಗೋಷ್ಠಿ ಶುರುವಾಗಲು ಇನ್ನೂ ಹದಿನೈದು ನಿಮಿಷ ಬಾಕಿ ಇದೆ. ‘ಮುಂಗಾರು ಮಳೆ’ಯ ವಾಸನೆ ಜೋರಾಗಿದ್ದ ಕಾಲ. ನಗುಮುಖ ಹೊತ್ತು ಎಲ್ಲರನ್ನೂ ಪರಿಚಯ ಮಾಡಿಕೊಂಡು, ಉಭಯಕುಶಲೋಪರಿ ವಿಚಾರಿಸಿ, ನಿಮ್ಮಿಂದಲೇ ಎತ್ತರಕ್ಕೆ ಬೆಳೆದದ್ದು ಹಾಗೆ ಹೀಗೆ ಅಂತೆಲ್ಲಾ ಹೇಳಿಕೊಳ್ಳುತ್ತಿದ್ದ ಕಾಮಿಡಿ ಟೈಮ್ ಹುಡುಗ. ಎಷ್ಟು ಪ್ರಶ್ನೆ ಕೇಳಿದರೂ ಬೇಸರವಿಲ್ಲ. ಎಲ್ಲಕ್ಕೂ ನಗುಮೊಗದ ಉತ್ತರ. ಪರಿಣಾಮ ಕೆಲವು ಸುದ್ದಿಮಿತ್ರರೊಟ್ಟಿಗೂ ಅತಿಯಾದ ನಂಟು. ಆಗೀಗ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತಿದ್ದುದೂ ಉಂಟು! ಹಬ್ಬ ಹರಿದಿನಗಳಿಗೆ ಎಸ್‌ಎಂಎಸ್ ಶುಭ ಸಂದೇಶ. ವಿನಾಕಾರಣ ಫೋನ್ ಮಾಡಿ, ಆರೋಗ್ಯ ವಿಚಾರಿಸಿಕೊಳ್ಳುವ ವಿಚಿತ್ರ ಪರಿ (ತನಗೆ ತಾನೇ ಒಳ್ಳೆಯ ಪಿಆರ್ ಆಗುವುದು ಅಂದರೆ ಇದೇನೆ!).

2007ರ ಗಣೇಶ
‘ಸರ್, ಗಣೇಶ ಬೇಕಿತ್ತಲ್ಲಾ?’ ಅಂತ ಫೋನೆತ್ತಿದವರಿಗೆ ಪ್ರಶ್ನೆ. ‘ಅವರ ಕಾಲ್‌ಷೀಟ್ ಇಲ್ಲ’ ಅಲ್ಲಿಂದ ಉತ್ತರ. ‘ಕಾಲ್‌ಷೀಟ್ ಅಲ್ಲ, ಒಂದು ಸಮಾರಂಭಕ್ಕೆ ಅತಿಥಿಯಾಗಿ ಬರಬೇಕು; ಅಷ್ಟೆ’ ವಿನಂತಿ. ‘ಅವರ ರೇಟು ದಿನಕ್ಕೆ ಐದು ಲಕ್ಷ ಇದೆ. ಇಷ್ಟವಿದ್ದರೆ ಮುಂದುವರಿಯಬಹುದು. ಫಂಕ್ಷನ್ನಿಗೂ ಅಷ್ಟೇ ರೇಟು’. ವಿನಂತಿಸಿಕೊಂಡವರು ಬೆಚ್ಚಿ ಬೀಳುವುದಷ್ಟೇ ಬಾಕಿ!

2008ರ ಗಣೇಶ
ಉಲ್ಲಾಸ ಉತ್ಸಾಹ ಪ್ರೆಸ್ ಕಾನ್ಫರೆನ್ಸ್. ಮೇಲ್ಮಹಡಿಯಲ್ಲಿ ಕೆಲವು ಇಂಗ್ಲಿಷ್ ಪತ್ರಕರ್ತರ ಜೊತೆ (ಪತ್ರಕರ್ತೆಯರು ಅನ್ನುವ ಪದ ಬಳಕೆಯಲ್ಲಿ ಇಲ್ಲವಲ್ಲ!) ಗಣೇಶನ ಒನ್ ಟು ಒನ್. ಈಗ ಬಂದಾರು ಆಗ ಬಂದಾರು ಅನ್ನುವ ನಿರೀಕ್ಷೆಯಲ್ಲಿ ಕೆಳಗೆ ಸ್ದುದಿಮಿತ್ರರು. ನಿಗದಿತ ಸಮಯಕ್ಕಿಂತ ಕೇವಲ ಮುಕ್ಕಾಲು ಗಂಟೆ ತಡವಾಗಿ ಗಣೇಶ ಬಂದರು. ಸುದ್ದಿಗೋಷ್ಠಿಯ ನಂತರ ಪಾನಗೋಷ್ಠಿ. ಅಲ್ಲಿ ಸಿಟಿಂಗ್‌ಗೆ ಕೂತವರು ಮತ್ತೆ ಗಣೇಶ ಬಂದಾನು ಅಂತ ಕಾದದ್ದೇ ಕಾದದ್ದು. ಇದೋ ಬಂದೆ ಅಂತ ಹೊರಟ ಗಣೇಶ ಕೊನೆಗೂ ಬರಲೇ ಇಲ್ಲ! ಅವರು ಯಾವ ಕೆರೆಯಲ್ಲಿ ಮುಳುಗಿದರೊ?

ಈ ಮೂರು ವರ್ಷಗಳಲ್ಲಿ ಗಣೇಶನ ಫೋನ್ ನಂಬರ್ ಪದೇಪದೇ ಬದಲಾಗಿದೆ. ಸದ್ಯದ ನಂಬರ್ ನಾಟ್ ರೀಚಬಲ್!

ಹೊಸ ಉಲ್ಲಾಸ ನವ ಉತ್ಸಾಹದಲ್ಲಿ ಗಣೇಶ!

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಮಂಜುನಾಥ
ದಿನಾಂಕ: 08 Jan 2009 1:57 am
ಮಂಗನಿಗೆ ಮಾಣಿಕ್ಯ ಕೊಟ್ಟರೆ ಏನು ಮಾಡುತ್ತೆ? ಅದೇ ಆಗಿದೆ ಗಣೇಶ್ ಪರಿಸ್ತಿತಿ. ಈಗಾಗಲೇ ಕನ್ನಡ ಜನ ಈತನಿಗೆ ಅವನ ಸ್ಥಾನ ತೋರಿಸಿದ್ದಾರೆ. ಗಣೆಶದು ಎಲ್ಲ ಡಬ್ಬ ಚಿತ್ರಗಳ ಸರಮಾಲೆ ಈ ಬರುವ ವರ್ಷ ಸಹ.

ಇಂದ: ಮಂಜುನಾಥ
ದಿನಾಂಕ: 08 Jan 2009 1:56 am
ಮಂಗನಿಗೆ ಮಾಣಿಕ್ಯ ಕೊಟ್ಟರೆ ಏನು ಮಾಡುತ್ತೆ? ಅದೇ ಆಗಿದೆ ಗಣೇಶ್ ಪರಿಸ್ತಿತಿ. ಈಗಾಗಲೇ ಕನ್ನಡ ಜನ ಈತನಿಗೆ ಅವನ ಸ್ಥಾನ ತೋರಿಸಿದ್ದಾರೆ. ಗಣೆಶದು ಎಲ್ಲ ಡಬ್ಬ ಚಿತ್ರಗಳ ಸರಮಾಲೆ ಈ ಬರುವ ವರ್ಷ ಸಹ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada

 ಕಿರಣ್ ಮಾರುತಿ ಸಣ್ಣಕಥೆ : ಹೀಗೊಂದು ಸಂಜೆ
 ಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!
 ಮಧುಚಂದ್ರದಲಿ ಮೊದಲ ರಾತ್ರಿಯ ಮಧುರಯಾತನೆ
 ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್‌
 ರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India